ಆತನನ್ನು ಸಂಕೋಲೆಗಳಿಂದ ಮುಕ್ತಗೊಳಿಸಿ: ಡೆಲ್ಲಿ ಬ್ಯಾಟ್ಸ್‌ಮನ್ ಬಗ್ಗೆ ಬ್ರಾಡ್ ಹಾಗ್ ಒತ್ತಾಯ

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮಧ್ಯೆ ಭಾನುವಾರ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯುವುದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಡೆಲ್ಲಿ ತಂಡದ ಕೋಚ್‌ಗೆ ಒತ್ತಾಯವೊಂದನ್ನು ಮಾಡಿದ್ದಾರೆ. ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡಲು ಡೆಲ್ಲಿ ತಂಡ ಕೋಚ್ ಮಾಡಬೇಕಾಗಿರುವುದೇನು ಎಂಬುದನ್ನು ವಿವರಿಸಿದ್ದಾರೆ ಬ್ರಾಡ್ ಹಾಗ್.
ಭಾರೀ ನಿರೀಕ್ಷೆತಯನ್ನು ಹುಟ್ಟು ಹಾಕಿದ್ದ ರಿಷಭ್ ಪಂತ್ ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. 12 ಪಂದ್ಯಗಳಲ್ಲಿ ಪಂತ್ 285 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅದು ಕೂಡ 109.61ರ ಸರಾಸರಿಯಲ್ಲಿ. ಇಷ್ಟು ಮಾತ್ರವಲ್ಲದೆ ಕನಿಷ್ಟ ಒಂದು ಅರ್ಧ ಶತಕವನ್ನು ಸಿಡಿಸಲು ಕೂಡ ಪಂತ್‌ಗೆ ಟೂರ್ನಿಯಲ್ಲಿ ಈವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ.
"ಕೋಚ್ ರಿಕಿ ಪಾಂಟಿಂಗ್ ರಿಷಭ್ ಪಂತ್‌ಗೆ ಹೆಚ್ಚಾಗಿ ಸಾಂಪ್ರದಾಯಿಕ ಆಟವನ್ನಾಡಲು ಸೂಚಿಸಿದ್ದಾರೆ ಎಮದು ಭಾವಿಸುತ್ತೇನೆ. ಇನ್ನಿಂಗ್ಸ್‌ನಲ್ಲಿ ಸರಿಯಾದ ರೀತಿಯಲ್ಲಿ ಬ್ಯಾಟಿಂಗ್ ಮಾಡಲು ಅವರು ಬಯಸುತ್ತಾರೆ. ಆದರೆ ಪಂತ್ ಅವರ ಹೆಸರಿನಲ್ಲಿ ಹೆಚ್ಚಿನ 'ನಾಟ್ ಔಟ್'ಗಳನ್ನು ಹೊಂದಿಲ್ಲ" ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.
"ರಿಷಭ್ ಪಂತ್ ಓರ್ವ ಸ್ವತಂತ್ರ ಆಟಗಾರ. ಆತ ಓರ್ವ ಮನರಂಜನೆ ನೀಡುವ ಕ್ರಿಕೆಟಿಗ. ಬೌಲರ್‌ಗಳ ವಿರುದ್ಧ ಆತ ದಂಡೆತ್ತಿ ಹೋಗುತ್ತಾನೆ. ಆತನನ್ನು ನೀವು ತಡೆಹಿಡಿಯಲು ಸಾಧ್ಯವಿಲ್ಲ. ಆತನ ಹಿಂದಿನ ಕೆಲ ಸರಣಿಗಳನ್ನು ನೋಡಿ, 150ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿದ್ದಾನೆ. ಎದುರಾಳಿಯಿಂದ ಆತ ಗೆಲುವನ್ನು ಕಸಿದುಕೊಳ್ಳಬಲ್ಲ ಕ್ರಿಕೆಟಿಗ" ಎಂದು ಪಂತ್ ಆಟವನ್ನು ಹಾಗ್ ಹಾಡಿ ಹೊಗಳಿದ್ದಾರೆ.
ಇದೇ ಸಂದರ್ಭದಲ್ಲಿ ಡೆಲ್ಲ ತಂಡದ ಕೊಚ್‌ಗೆ " ಮುಂದಿನ ಪಂದ್ಯಕ್ಕೂ ಮುನ್ನ ಆತನ ಆತನನ್ನು ಕಟ್ಟಿ ಹಾಕಿರುವ ಸಂಕೊಲೆಗಳಿಂದ ಬಿಡುಗಡೆಗೊಳಿಸಿ. ಆತನನ್ನು ಸಡಿಲಗೊಳಿಸಿ. ಸಾರ್ವಜನಿಕರಿಗೆ ಮನರಂಜನೆ ನೀಡಲು ಆತನನ್ನು ಬಿಟ್ಟುಬಿಡಿ" ಎಂದು ಬ್ರಾಡ್ ಹಾಗ್ ಒತ್ತಾಯ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications