For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: "ಕಾಯುವಿಕೆ ಅಂತ್ಯವಾಗಿದೆ", ಅಭಿಮಾನಿಗಳಿಗೆ ಸಂದೇಶ ನೀಡಿದ ಕ್ರಿಸ್ ಗೇಲ್

IPL 2020: The wait is over, Chris Gayle on comeback

ಕಿಂಗ್ಸ್ ಇಲೆಎವೆನ್ ಪಂಜಾಬ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಕಳೆದ ಒಂದು ವಾರದಿಂದ ಕ್ರಿಸ್ ಗೇಲ್ ಹೊಟ್ಟೆನೋವಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಸಂಪೂರ್ಣವಾಗಿ ಚೇತರಿಕೆಯನ್ನು ಕಂಡು ಅಭ್ಯಾಸಕ್ಕೆ ಇಳಿದಿದ್ದಾರೆ ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್.

ಗುರುವಾರ ಆರ್‌ಸಿಬಿ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಾದಾಟವನ್ನು ನಡೆಸಲಿದ್ದು ಈ ಪಂದ್ಯದಲ್ಲಿ ಗೇ್ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಈ ಹಿನ್ನೆಲೆಯಲ್ಲಿ ಕ್ರಿಸ್ ಗೇಲ್ ಅಭಿಮಾನಿಗಳಿಗೆ ವಿಡಿಯೋ ಸಂದೇಶವೊಂದನ್ನು ನೀಡಿದ್ದಾರೆ. ಇದರಲ್ಲಿ ಗೇಲ್ ನಿಮ್ಮ ಕಾಯುವಿಕೆ ಅಂತ್ಯವಾಗುವ ಕಾಲ ಸಮೀಪಿಸಿದೆ ಎಂದು ಹೇಳಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕ್ರಿಸ್ ಗೇಲ್ ಸಂದೇಶವನ್ನು ನೀಡಿದ್ದಾರೆ. ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ಕ್ರಿಸ್ ಗೇಲ್ "ಯುನಿವರ್ಸ್ ಬಾಸ್ ಈಸ್ ಬ್ಯಾಕ್" ಎಂದು ಘೋಷಿಸಿಕೊಂಡಿದ್ದಾರೆ. ನನಗಾಗಿ ತುಂಬಾ ಕಾಲದಿಂದ ಕಾಯುತ್ತಿದ್ದೀರಿ. ಆ ಕಾಯುವಿಕೆ ಈಗ ಅಂತ್ಯವಾಗಿದೆ ಎಂದಿ ಗೇಲ್ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

ಇನ್ನು ತಂಡದ ಪ್ಲೇ ಆಫ್ ಸಾಧ್ಯತೆಯ ಬಗ್ಗೆ ಕ್ರಿಸ್ ಗೇಲ್ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ನಾವಿನ್ನೂ 7 ಪಂದ್ಯಗಳನ್ನು ಹೊಂದಿದ್ದೇವೆ. ಮುಂಬರುವ ಎಲ್ಲಾ ಪಂದ್ಯಗಳನ್ನು ಗೆದ್ದು ಮುಂದಿನ ಹಂತಕ್ಕೇರಲು ಯಶಸ್ವಿಯಾಗುತ್ತೇವೆ. ಎಲ್ಲವೂ ಸಾಧ್ಯವಿದೆ. ಪ್ರತೀ ಆಟಗಾರನಲ್ಲೂ ಆತ್ಮವಿಶ್ವಾಸವನ್ನು ಹೊಂದಿರಲು ನಾನು ಬಯಸುತ್ತೇನೆ ಎಂದು ಗೇಲ್ ಹೇಳಿಕೆಯನ್ನು ನೀಡಿದ್ದಾರೆ.

40 ಸೆಕೆಂಡ್‌ಗಳ ಕಾಲ ಇರುವ ಈ ವಿಡಿಯೋದಲ್ಲಿ ಗೇಲ್ ಅಭಿಮಾನಿಗಳಿಗೆ ಉತ್ಸಾಹವನ್ನು ತುಂಬುವ ಕೆಲಸವನ್ನು ಮಾಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ವಿಶ್ವಾಸವನ್ನೂ ಗೇಲ್ ವ್ಯಕ್ತಪಡಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತನ್ನ ಮುಂದಿನ ಪಂದ್ಯವನ್ನು ಆರ್‌ಸಿಬಿ ವಿರುದ್ಧ ಆಡಲಿದೆ. ಪಂಜಾಬ್ ಟೂರ್ನಿಯಲ್ಲಿ ಗೆದ್ದಿರುವ ಏಕಮಾತ್ರ ಪಂದ್ಯ ಆರ್‌ಸಿಬಿ ವಿರುದ್ಧವೇ ಆಗಿದೆ.

Story first published: Wednesday, October 14, 2020, 17:37 [IST]
Other articles published on Oct 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+