ನಾವು ಕೊನೆಯಲ್ಲಿ ಪಂದ್ಯ ಮುಗಿಸಿದ ರೀತಿ ಚೆನ್ನಾಗಿತ್ತು: ರೋಹಿತ್ ಶರ್ಮಾ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡ ಫೈನಲ್‌ಗೆ ಪ್ರವೇಶಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಪಾರಮ್ಯ ಮೆರೆದ ಮುಂಬೈ ಭರ್ಜರಿ 57 ರನ್‌ಗಳಿಂದ ಜಯ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಮುಂಬೈ ಇಂಡಿಯನ್ಸ್, ಕ್ವಿಂಟನ್ ಡಿ ಕಾಕ್ 40, ಸೂರ್ಯಕುಮಾರ್ ಯಾದವ್ 51, ಇಶಾನ್ ಕಿಶನ್ 55, ಕೃನಾಲ್ ಪಾಂಡ್ಯ 13, ಹಾರ್ದಿಕ್ ಪಾಂಡ್ಯ 37 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 200 ರನ್ ಬಾರಿಸಿತು.
ಗುರಿ ಬೆನ್ನಟ್ಟಿದ ಡೆಲ್ಲಿ, ಸೊನ್ನೆ ರನ್‌ಗೆ 3 ವಿಕೆಟ್ ಕಳೆದು ಆರಂಭದಲ್ಲೇ ಆಘಾತ ಅನುಭವಿಸಿತು. ಶ್ರೇಯಸ್ ಐಯ್ಯರ್ 12, ಮಾರ್ಕಸ್ ಸ್ಟೋಯ್ನಿಸ್ 65, ಅಕ್ಸರ್ ಪಟೇಲ್ 42, ಕಾಗಿಸೊ ರಬಾಡ 15 ರನ್‌ನೊಂದಿಗೆ 30 ಓವರ್‌ಗೆ 8 ವಿಕೆಟ್ ಕಳೆದು 143 ರನ್ ಗಳಿಸಿ ತಲೆ ಬಾಗಿತು. ಜಸ್‌ಪ್ರೀತ್ ಬೂಮ್ರಾ 14 ರನ್‌ಗೆ 4 ವಿಕೆಟ್ ಮುರಿದು ಮಿಂಚಿದರು.
'ಎರಡನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡ ಬಳಿಕ ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಕೊಟ್ಟ ಆವೇಗ ನೋಡಲು ತುಂಬಾ ಚೆನ್ನಾಗಿತ್ತು. ಕೊನೆಯಲ್ಲಿ ಪಂದ್ಯ ಮುಗಿಸಿದ ರೀತಿ ಭವ್ಯವಾಗಿತ್ತು,' ಎಂದು ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications