ಐಪಿಎಲ್ 2020: ಈ ಹುಡುಗನ ಬಳಿ ಅದ್ಭುತ ಪ್ರತಿಭೆಯಿದೆ ಎಂದು ಕೊಹ್ಲಿ ಹೇಳಿದ್ದು ಯಾರ ಬಗ್ಗೆ?

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದರು. ಟೂರ್ನಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಪರದಾಡಿದ್ದ ವಿರಾಟ್ ಕೊಹ್ಲಿ ಆರ್‌ಆರ್ ವಿರುದ್ಧ ತಮ್ಮ ಹಿಂದಿನ ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. ಸಂಘಟಿತ ಪ್ರದರ್ಶನವನ್ನು ನೀಡುವಲ್ಲಿ ಸಫಲವಾದ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಆರ್ ತಂಡವನ್ನು 156 ರನ್‌ಗಳಿಗೆ ಕಟ್ಟಿ ಹಾಕಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗೆಲುವು ಸಾಧಿಸಿತು.
ಈ ಪಂದ್ಯದ ಬಳಿಕ ಮಾತಾಡಿದ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಯುವ ಆಟಗಾರನ ಬಗ್ಗೆ ಅದ್ಭುತ ಮಾತುಗಳನ್ನಾಡಿದ್ದಾರೆ. ಈ ಆಟಗಾರ ನಿಜಕ್ಕೂ ಅದ್ಭುತ ಪ್ರತಿಭೆಯನ್ನು ಹೊಂದಿರುವ ಕ್ರಿಕೆಟಿಗ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಆರ್‌ಸಿಬಿ ನಾಯಕ ಹೀಗೆ ಮನಸಾರೆ ಪ್ರಶಂಸಿಸಿದ ಆಟಗಾರ ಬೇರೆ ಯಾರೂ ಅಲ್ಲ ತಮ್ಮ ತಂಡದಲ್ಲಿ ಮಿಂಚು ಹರಿಸುತ್ತಿರುವ ದೇವದತ್ ಪಡಿಕ್ಕಲ್ ಬಗ್ಗೆ.

ಟಾಪ್ ಸ್ಕೋರರ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ
ಈ ಬಾರಿಯ ಐಪಿಎಲ್‌ನಲ್ಲಿ ದೇವದತ್ ಪಡಿಕ್ಕಲ್ ನಾಲ್ಕು ಪಂದ್ಯಗಳಲ್ಲಿ 174 ರನ್ ಸಿಡಿಸಿದ್ದಾರೆ. ಮಾತ್ರವಲ್ಲ ಟೂರ್ನಿಯಲ್ಲಿ ಟಾಪ್ 5 ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ತನ್ನ ಬಳಿಯಿರುವ ಅದ್ಭುತ ಪ್ರತಿಭೆಯಿಂದ ನಾಯಕ ವಿರಾಟ್ ಕೊಹ್ಲಿಯ ಮನಗೆಲ್ಲುವಲ್ಲೂ ಯಶಸ್ವಿಯಾಗಿದ್ದಾರೆ.

"ಅದ್ಭುತವಾದ ಪ್ರತಿಭೆ"
ಈ ಬಗ್ಗೆ ಮಾತನಾಡಿದ ಕೊಹ್ಲಿ "ನಾನು ಆತನ ಆಟವನ್ನು ನೋಡಿದ ಬಳಿಕ ಕೋಚ್ ಸೈಮನ್ ಕ್ಯಾಟಿಚ್ ಬಳಿ ಈತನ ಬಳಿ ನಿಜಕ್ಕೂ ಅದ್ಭುತವಾದ ಪ್ರತಿಭೆಯಿದೆ ಎಂದು ಹೇಳಿದ್ದೆ. ಶ್ರೇಷ್ಠ ದೃಷ್ಠಿ ಹಾಗೂ ಅದ್ಭುತ ಸಮತೊಲನವನ್ನು ಹೊಂದಿದ್ದಾರೆ. ಈತ ಬ್ಯಾಟಿಂಗ್ ಮಾಡುವ ರೀತಿಯನ್ನು ನೋಡಿದರೆ ಈ ಎಡಗೈ ಆಟಗಾರನಿಗೆ ಒಂದೇ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡುವುದು ಬೌಲರ್‌ಗಳ ಪಾಲಿಗೆ ನಿಜಕ್ಕೂ ಕಷ್ಟ. ಎಲ್ಲವೂ ಸರಾಗವಾದ ಹೊಡೆತಗಳು. ರಿಸ್ಕ್ ತೆಗೆದುಕೊಂಡು ಬ್ಯಾಟಿಂಗ್ ನಡೆಸುತ್ತಿದ್ದಾನೆ ಎಂದು ಅನಿಸುವುದೇ ಇಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.

"ಆರ್‌ಸಿಬಿಗೆ ಅನುಕೂಲ"
"ನಾನು ಆತನ ಜೊತೆಗೆ ಇನ್ನಿಂಗ್ಸ್ ಬೆಳೆಸುವ ಬಗ್ಗೆ ಮಾತನಾಡುತ್ತಿದ್ದೆ. ಆತ ಸುದೀರ್ಘ ಕಾಲ ತಂಡಕ್ಕೆ ಬ್ಯಾಟಿಂಗ್ ನಡೆಸಿದರೆ ಅದು ನಮಗೆ ತುಂಬಾ ಅನುಕೂಲಕರ. ತುಂಬಾ ಸ್ಮಾರ್ಟ್ ಆಟಗಾರ ಈತ. ಆಟವನ್ನು ಚೆನ್ನಾಗಿ ಅರ್ಥಮಾಡುಕೊಳ್ಳುವುದು ಮಾತ್ರವಲ್ಲದೆ, ಅಭಿಪ್ರಾಯಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಆತನ ಚೆನ್ನಾಗಿ ಕಲಿಕೆಯನ್ನು ನಡೆಸುತ್ತಿದ್ದಾರೆ. ಇದು ಆರ್‌ಸಿಬಿಗೆ ಅನುಕೂಲ" ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಮೂರು ಅರ್ಧ ಶತಕ
ದೇವದತ್ ಪಡಿಕ್ಕಲ್ ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದಾರೆ. ಐಪಿಎಲ್ ಪದಾರ್ಪಣಾ ಪಂದ್ಯದಲ್ಲೇ 56 ರನ್‌ಗಳಿಸಿ ಬೆರಗು ಮೂಡಿಸಿದ್ದ 20ರ ಹರೆಯದ ಪಡಿಕ್ಕಲ್ ಬಳಿಕ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮಾತ್ರ 1 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಅದಾದ ನಂತರ ಮುಂಬೈ ಇಂಡಿಯನ್ಸ್ ವಿರುದ್ಧ 54 ರನ್ ಗಳಿಸಿದ್ದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 63 ರನ್ ಗಳಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications