Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೂರು ಸೋಲುಗಳಿಂದ ನಮ್ಮದು ಕೆಟ್ಟ ತಂಡ ಅನ್ನಿಸಲಾರದು: ರಹಾನೆ

IPL 2020: Three losses doesnt make us a bad team, says Ajinkya Rahane

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸತತ ಮೂರು ಪಂದ್ಯಗಳ ಸೋಲು ಹಿನ್ನಡೆ ತಂದಿದ್ದು ನಿಜ. ಆದರೆ ಸತತ ಮೂರು ಸೋಲುಗಳಿಂದ ನಮ್ಮದು ಕೆಟ್ಟ ತಂಡ ಅನ್ನಿಸಲ್ಲ ಎಂದು ಡೆಲ್ಲಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಹಿಂದಿನ ಮೂರು ಪಂದ್ಯಗಳಲ್ಲಿ ಕಿಂಗ್ಸ್ 11 ಪಂಜಾಬ್ ವಿರುದ್ಧ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ತಂಡ ಸೋತು ಮುಖಭಂಗ ಅನುಭವಿಸಿತ್ತು. ಆದರೆ ಅಷ್ಟಕ್ಕೆ ತಂಡ ಸಕಾರಾತ್ಮಕತೆಯನ್ನು ಬಿಟ್ಟುಕೊಡುವುದಿಲ್ಲ, ಮುಂದಿನ ಪಂದ್ಯಗಳಲ್ಲಿ ಒಂದು ಸಮೂಹವಾಗಿ ಹೋರಾಡುತ್ತೇವೆ ಎಂದು ರಹಾನೆ ಹೇಳಿದ್ದಾರೆ.

13ನೇ ಆವೃತ್ತಿಯ ಐಪಿಎಲ್‌ ಆರಂಭದಿಂದಲೂ ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಪಾರಮ್ಯ ಮೆರೆದಿತ್ತು. ಆಡಿದ್ದ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 14 ಅಂಕ ಕಲೆಹಾಕಿ ಮೊದಲ ಸ್ಥಾನದಲ್ಲಿತ್ತು. ಆದರೆ ಆ ಬಳಿಕ ಸತತ ಮೂರು ಪಂದ್ಯಗಳಲ್ಲಿ ಸೋತು ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ.

'ಟೂರ್ನಿಯನ್ನು ಚೆನ್ನಾಗಿ ಆರಂಭಿಸಿದ್ದೆವು. 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದೆವು. ಮತ್ತೆ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸೋತೆವು. ನಾವು ಎಣಿಸಿದ್ದು ನಡೆಯಲಿಲ್ಲ. ಐಪಿಎಲ್‌ನಂತ ಟೂರ್ನಿಗಳಲ್ಲಿ 14 ಪಂದ್ಯಗಳನ್ನು ಆಡಬೇಕಾಗಿದ್ದಾಗ ಇದಾಗುತ್ತದೆ. ಮುಂಬರಲಿರುವ ಪಂದ್ಯಗಳು ತುಂಬಾ ಪ್ರಮುಖಾದುವು. ನಾವು ಸಕಾರಾತ್ಮಕವಾಗಿ ಬರುತ್ತೇವೆ. 3 ಸೋಲಿನಿಂದ ನಮ್ಮ ತಂಡ ಕೆಟ್ಟ ತಂಡವಾಗಿಲ್ಲ,' ಎಂದು ರಹಾನೆ ಹೇಳಿದ್ದಾರೆ.

Story first published: Saturday, October 31, 2020, 9:38 [IST]
Other articles published on Oct 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+