ಐಪಿಎಲ್ 2020: ಟೂರ್ನಿ ಆರಂಭ, ಅಂತ್ಯದ ಅಧಿಕೃತ ದಿನಾಂಕ ಪ್ರಕಟ!

ಬೆಂಗಳೂರು, ಜನವರಿ 27: ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭ ಮತ್ತು ಅಂತ್ಯದ ಅಧಿಕೃತ ದಿನಾಂಕವನ್ನು ಬಿಸಿಸಿಐ ಸೋಮವಾರ (ಜನವರಿ 27) ಪ್ರಕಟಿಸಿದೆ. ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆಯ ಬಳಿಕ ಈ ದಿನಾಂಕವನ್ನು ಖಾತರಿಪಡಿಸಲಾಗಿದೆ.
ಮಾರ್ಚ್ 29ರಂದು ಆರಂಭಗೊಳ್ಳುವ ಐಪಿಎಲ್ ಪಂದ್ಯಗಳು ಮೇ 24ರಂದು ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. ಫೈನಲ್ ಪಂದ್ಯ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಆಡಳಿಯ ಸಮಿತಿ ಈ ನಿರ್ಧಾರವನ್ನು ಕೈಗೊಂಡಿದೆ.
13ನೇ ಆವೃತ್ತಿಯ ಐಪಿಎಲ್‌ಗೆ ಸಂಬಂಧಿಸಿ ಪ್ರಮುಖ ವಿಚಾರಗಳು ಕೆಳಗಿವೆ.

ಪಂದ್ಯದ ಸಮಯಗಳಲ್ಲಿ ಬದಲಾವಣೆ
ಐಪಿಎಲ್ ಪಂದ್ಯಗಳ ವಿಚಾರದಲ್ಲಿ ಈ ಮೊದಲು ದಿನಕ್ಕೊಂದು ಪಂದ್ಯ ಮಾತ್ರ ನಡೆಯಲಿವೆ ಎನ್ನಲಾಗಿತ್ತು. ಅಂದರೆ ಸಂಜೆ 4 pmಗೆ ಪಂದ್ಯಗಳು ನಡೆಯುಯುವುದಿಲ್ಲ ಎನ್ನಲಾಗಿತ್ತು. ಆದರೆ ಈಗ, ದಿನದಲ್ಲಿ ನಡೆಯಲಿರುವ ಪಂದ್ಯಗಳ ಸಮಯದಲ್ಲಿ ಬದಲಾವಣೆಯಾಗಿವೆ. ಆರು ಪಂದ್ಯಗಳನ್ನು 4 pmಗೆ ನಡೆಯಲು ನಿರ್ಧರಿಸಲಾಗಿದೆ. ಉಳಿದ ಪಂದ್ಯಗಳು 7.30 pmಗೆ ಬದಲಾಗಿ 8 pmಗೆ ಆರಂಭಗೊಳ್ಳಲಿವೆ.

ಐದು ದಿನ ಎರಡೆರಡು ಪಂದ್ಯಗಳು
ಹಿಂದಿನ ಸೀಸನ್‌ನಲ್ಲಿ ಬಹಳಷ್ಟು ಪಂದ್ಯಗಳು ದಿನಕ್ಕೆರಡರಂತೆ ನಡೆದಿದ್ದವು. ಆದರೆ ಈ ಬಾರಿ ಹೆಚ್ಚು ಪಂದ್ಯಗಳು ದಿನಕ್ಕೆರಡರಂತೆ ನಡೆಯುತ್ತಿಲ್ಲ. ಅಂದರೆ ಕೇವಲ 5 ದಿನಗಳು ಮಾತ್ರ ಎರಡೆರಡು ಪಂದ್ಯಗಳು ನಡೆಯಲಿವೆ. ಉಳಿದಂತೆ ದಿನಕ್ಕೊಂದರಂತೆ ಪಂದ್ಯಗಳು ನಡೆಸಲುದ್ದೇಶಿಸಲಾಗಿದೆ.

ಈ ಆವೃತ್ತಿಯಲ್ಲಿ ಹೊಸ ನಿಯಮ ಜಾರಿ
ಈಚಿನ ದಿನಗಳಲ್ಲಿ ಕ್ರಿಕೆಟ್ ಆಟದಲ್ಲಿ ತಂದಿರುವ ಹೊಸ 'ನೋ ಬಾಲ್ ನಿಯಮ' ಈ ಬಾರಿಯ ಐಪಿಎಲ್‌ನಲ್ಲೂ ಪರಿಚಯಿಸಲು ನಿರ್ಧರಿಸಲಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇತ್ತೀಚೆಗೆ ಪರಿಚಯಿಸಲಾಗಿರುವಂತೆ ಥರ್ಡ್ ಅಂಪೈರ್, ನೋ ಬಾಲ್ ಅನ್ನು ಗಮನಿಸಲಿದ್ದಾರೆ.

ರಾಜಸ್ಥಾನ್ ಪಂದ್ಯಗಳು ಗುವಾಹಟಿಯಲ್ಲಿ
ಬಲ್ಲ ಮಾಹಿತಿಯಂತೆ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ತವರಿನಲ್ಲಿ ಆಡಬೇಕಾದ ಮೂರು ಪಂದ್ಯಗಳನ್ನು ಗುವಾಹಟಿಯಲ್ಲಿ ಅಡಲಿದೆ. ಐಪಿಎಲ್ ಆರಂಭಕ್ಕೂ ಮೂರು ದಿನಗಳು ಮುಂಚಿತವಾಗಿ 'ಐಪಿಎಲ್ ಆಲ್ ಸ್ಟಾರ್ಸ್ ಗೇಮ್' ನಡೆಯಲಿದೆ ಎಂದು ತಿಳಿದುಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications