Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವದರ್ಜೆಯ ಬೌಲರ್ ಮುಂಬೈಗೆ ಗಿಫ್ಟ್ ಕೊಟ್ಟು ಕೆಟ್ಟ ಡೆಲ್ಲಿ!

IPL 2020: Tom Moody lambasts Delhi Capitals for ‘gifting’ Trent Boult to Mumbai Indians

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020 ಕೊನೆ ಹಂತಕ್ಕೆ ಬಂದಿದ್ದು, ಅಂತಿಮ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೆಣೆಸುತ್ತಿವೆ. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾಡಿದ ದೊಡ್ಡ ಪ್ರಮಾದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್, ಅನುಭವಿ ಕೋಚ್, ಕಾಮೆಂಟೆಟರ್, ಹೈದರಾಬಾದ್ ತಂಡದ ಮಾಜಿ ಕೋಚ್ ಟಾಮ್ ಮೂಡಿ ಮಾತನಾಡಿದ್ದಾರೆ.

ವಿಶ್ವ ದರ್ಜೆಯ ಬೌಲರ್, ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಐಪಿಎಲ್ 2020ಕ್ಕೂ ಮುನ್ನ ಟ್ರೇಡ್ ಮೂಲಕ ನೀಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ಮಾಡಿದ ದೊಡ್ಡ ಪ್ರಮಾದ ಎಂದಿದ್ದಾರೆ.

ಜಸ್ ಪ್ರೀತ್ ಬೂಮ್ರಾ ಜೊತೆಗೂಡಿ ಟ್ರೆಂಟ್ ಬೌಲ್ಟ್ ಅವರು ಎದುರಾಳಿ ತಂಡವನ್ನು ನಡುಗಿಸುತ್ತಿದ್ದಾರೆ. ಮುಂಬೈಗೆ ಡೆಲ್ಲಿ ಕೊಟ್ಟ ಗಿಫ್ಟ್ ಈಗ ಡೆಲ್ಲಿಗೆ ಮುಳುವಾದರೂ ಅಚ್ಚರಿ ಪಡಬೇಕಾಗಿಲ್ಲ. ಕ್ವಾಲಿಫೈಯರ್-1 ರಲ್ಲಿ,ಪೃಥ್ವಿ ಶಾ ಹಾಗೂ ಅಜಿಂಕ್ಯ ರಹಾನೆ ಅವರನ್ನು ಮೊದಲ ಓವರ್‌ನಲ್ಲಿ ಪೆವಿಲಿಯನ್‌ಗೆ ಸೇರಿಸಿದ್ದು ನೋಡಿದರೆ ಬೌಲ್ಟ್ ಉತ್ತಮ ಲಯದಲ್ಲಿದ್ದು, ಮಾರಕವಾಗಿ ಪರಿಣಮಿಸಲಿದ್ದಾರೆ.

ಬೌಲ್ಟ್ 2018 ಮತ್ತು 2019 ರ ಋತುಗಳಲ್ಲಿ ದೆಹಲಿ ಪರ ಆಡಿದ್ದರು. ಈ ಋತುವಿನ ಆರಂಭದಲ್ಲಿ ಅವರನ್ನು ಕೈಬಿಟ್ಟಿತು. ಲಸಿತ್ ಮಾಲಿಂಗ ಅವರ ನಿರ್ಗಮನದೊಂದಿಗೆ, ಪ್ರಮುಖ ಬೌಲರ್ ಹುಡುಕಾಟದಲ್ಲಿದ್ದ ಮುಂಬೈಗೆ ಬೌಲ್ಟ್ ಸಿಕ್ಕಿದ್ದು ವರದಾನವಾಗಿ ಪರಿಣಮಿಸಿದೆ. ಬೌಲ್ಟ್ ನಿರೀಕ್ಷಿತ ಫಲಿತಾಂಶವನ್ನು ನೀಡುತ್ತಿದ್ದಾರೆ. ವಿಶೇಷವಾಗಿ ದುಬೈ ಪಿಚ್‌ಗಳಲ್ಲಿ ಅವರು ಸ್ವಿಂಗ್ ಪಡೆಯುತ್ತಿದ್ದು, ಎದುರಾಳಿ ತಂಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.

'ಟ್ರೆಂಟ್ ಬೌಲ್ಟ್ ಟ್ರೇಡ್ ಮಾಡಿದ್ದು ಅತ್ಯಂತ ಕೆಟ್ಟ ನಿರ್ಧಾರ. ಕೊವಿಡ್ 19 ಬರಲಿದೆ ಪಂದ್ಯಾವಳಿ ಯುಎಇಗೆ ಹೋಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ ಆದರೆ ಟ್ರೆಂಟ್ ಬೌಲ್ಟ್ ಸ್ವಿಂಗ್‌ಗೆ ಹೊಂದಿಕೊಳ್ಳುವ ಪಿಚ್‌ಗಳ ಮೇಲೆ ಸಮರ್ಥವಾಗಿ ಬೌಲ್ ಮಾಡಬಲ್ಲರು ಎಂಬುದು ತಿಳಿದಿದ್ದರೂ ಡೆಲ್ಲಿ ಅವರನ್ನು ಕೈಬಿಟ್ಟಿತು. ಐಪಿಎಲ್ ಪವರ್ ಪ್ಲೇನಲ್ಲಿ ಅತ್ಯುತ್ತಮ ಬೌಲರ್. ಅಂತಹ ಅಸಾಧಾರಣ ವೇಗಿಯನ್ನು ಮುಂಬೈ ತಂಡಕ್ಕೆ ಉಡುಗೊರೆಯಾಗಿ ನೀಡಿದ್ದು ಮೂರ್ಖತನ ಎಂದು ಟಾಮ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ 2020ರಲ್ಲಿ 14 ಪಂದ್ಯಗಳಿಂದ ಬೌಲ್ಟ್ 22 ವಿಕೆಟ್ ಪಡೆದಿದ್ದಾರೆ.

Story first published: Monday, November 9, 2020, 23:55 [IST]
Other articles published on Nov 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+