Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ, ಡೆಲ್ಲಿ: ಪ್ಲೇಆಫ್‌ಗೆ ಕೊನೆಯ ಅವಕಾಶ!

IPL 2020: Top-two finish in sight as struggling DC, RCB look to end their losing streak

ಐಪಿಎಲ್ ಟೂರ್ನಿಯ ಲೀಗ್ ಹಂತ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮುಂಬೈ ಹೊರತುಪಡಿಸಿ ಪ್ಲೇ ಆಫ್‌ಗೆ ಟಿಕೆಟ್ ಪಡೆಯುವ ತಂಡಗಳು ಇನ್ನೂ ಖಚಿತವಾಗಿಲ್ಲ. ಪ್ಲೇಆಫ್‌ಗೆ ಅಂತಿಮ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದೆ. ಅದರಲ್ಲಿ ಇಂದು ನಡೆಯುವ ಡೆಲ್ಲಿ ಹಾಗೂ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಒಂದು ತಂಡ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

ಆರ್‌ಸಿಬಿ ಹಾಗೂ ಡೆಲ್ಲಿ ತಂಡಗಳು ಇಂದಿನ ಪಂದ್ಯದಲ್ಲಿ ಕಠಿಣ ಹೋರಾಟವನ್ನು ನಡೆಸಲಿದ್ದು ಯಾರು ಗೆಲುವು ಸಾಧಿಸುತ್ತಾರೋ ಆ ತಂಡ ನೇರವಾಗಿ ಪ್ಲೇ ಆಫ್‌ಗೆ ಟಿಕೆಟ್ ಪಡೆಯಲಿದೆ. ಟೂರ್ನಿಯಲ್ಲಿ ಈವರೆಗೆ 13 ಪಂದ್ಯಗಳನ್ನು ಆಡಿರುವ ಈ ಎರಡು ತಂಡಗಳು ತಲಾ 7 ಗೆಲುವು ಸಾಧಿಸಿ 14 ಅಂಕಗಳನ್ನು ಬುಟ್ಟಿಗೆ ಸೇರಿಸಿಕೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಡಲಿದೆ.

ಆದರೆ ಸೋಲುವ ತಂಡದ ಟೂರ್ನಿಯಿಂದ ತಕ್ಷಣವೇ ಹೊರಬೀಳದಿದ್ದರೂ ಉಳಿದಿರುವ ಕಡೆಯ ಒಂದು ಪಂದ್ಯದ ಫಲಿತಾಂಶದ ಆಧಾರದಲ್ಲಿ ತನ್ನ ಪ್ಲೇಆಫ್ ಸ್ಥಾನವನ್ನು ನಿರ್ಧರಿಸಲಿದೆ. ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಮಂಗಳವಾರ ಅಂತಿಮ ಲೀಗ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು ಅದು ಕೂಡ ನಿರ್ಣಾಯಕವಾಗಿರಲಿದೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಶರಣಾದರೆ ಸೋಮವಾರದ ಬೆಂಗಳೂರು vs ಡೆಲ್ಲಿ ಪಂದ್ಯದಲ್ಲಿ ಸೋಲು ಕಂಡ ತಂಡವೂ ಕೂಡ ಪ್ಲೇ ಆಫ್‌ಗೆ ಟಿಕೆಟ್ ಪಡೆಯಲಿದೆ. ಆದರೆ ಹೈದರಾಬಾದ್ ಗೆದ್ದರೆ ರನ್‌ರೇಟ್ ನಿರ್ಣಾಯಕ ಪಾತ್ರ ವಹಿಸಲಿದೆ.

ಮಂಗಳವಾರದ ಪಂದ್ಯದಲ್ಲಿ ಹೈದರಾಬಾದ್ ಗೆದ್ದರೆ ಇಂದಿನ ಪಂದ್ಯದಲ್ಲಿ ಸೋಲುವ ತಂಡ, ಕೋಲ್ಕತಾ ಹಾಗೂ ಹೈದರಾಬಾದ್ ತಂಡದ ಅಂಕಗಳು ಸಮಾನವಾಗಿರಲಿದೆ. ಕೆಕೆಆರ್ ತಂಡದ ನೆಟ್‌ರನ್‌ರೇಟ್‌ -0.244 ಇರುವುದರಿಂದ ಅದರಲ್ಲಿ ಬದಲಾವಣೆಯಾಗಲಾರದು. ಹೈದರಾಬಾದ್ ತಂಡದ ರನ್‌ರೇಟ್ ಉತ್ತಮವಾಗಿದ್ದು ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲ್ಲುವುದರ ಜೊತೆಗೆ ರನ್‌ರೇಟ್‌ಅನ್ನು ಕೂಡ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಅಂತಿಮ ಎರಡು ಪಂದ್ಯಗಳಲ್ಲಿ ನಾಲ್ಕು ತಂಡಗಳ ಭವಿಷ್ಯ ನಿರ್ಧಾರವಾಗಲಿದೆ.

Story first published: Monday, November 2, 2020, 9:56 [IST]
Other articles published on Nov 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+