Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ ಮೊದಲ ಪಂದ್ಯದಲ್ಲೇ ವಿಕೆಟ್ ಪಡೆದ ತುಷಾರ್ ದೇಶಪಾಂಡೆ

IPL 2020: Tushar Deshpande gets his maiden IPL wicket

ದುಬೈ: ಯುವ ಬ್ಯಾಟ್ಸ್‌ಮನ್ ತುಷಾರ್ ದೇಶಪಾಂಡೆ ವಿಶೇಷ ಸಾಧನೆಗಾಗಿ ಗಮನ ಸೆಳೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಪಾದಾರ್ಪಣೆ ಪಂದ್ಯದಲ್ಲೇ ವಿಕೆಟ್ ಪಡೆದು ದೇಶಪಾಂಡೆ ಮಿನುಗಿದ್ದಾರೆ. ಬುಧವಾರ (ಅಕ್ಟೋಬರ್ 14) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 30ನೇ ಪಂದ್ಯದಲ್ಲಿ ದೇಶಪಾಂಡೆ ಈ ಮೈಲಿಗಲ್ಲು ನಿರ್ಮಿಸಿದ್ದಾರೆ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಪ್ಯಾಪಿಟಲ್ಸ್ ಪರ ಮೈದಾನಕ್ಕಿಳಿದಿದ್ದ ತುಷಾರ್ ದೇಶಪಾಂಡೆ ರಾಜಸ್ಥಾನ್ ಆಲ್ ರೌಂಡರ್ ಬೆನ್ ಸ್ಟೋಕ್ಸ್‌ ಅವರನ್ನು 10.2ನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು.

25ರ ಹರೆಯದ ತುಷಾರ್ ದೇಶಪಾಂಡೆ ಅವರ ಎಸೆತಕ್ಕೆ ದೊಡ್ಡ ಹೊಡೆತಕ್ಕೆ ಮುಂದಾದ ಸ್ಟೋಕ್ಸ್, ಗಾಯಕ್ಕೀಡಾಗಿದ್ದ ಡೆಲ್ಲಿ ನಾಯಕ ಶ್ರೇಯಸ್ ಐಯ್ಯರ್ ಬದಲಿಗೆ ಮೈದಾನಕ್ಕಿಳಿದಿದ್ದ ಲಲಿತ್ ಯಾದವ್ ಗೆ ಕ್ಯಾಚ್ ನೀಡಿದರು. ಹೀಗಾಗಿ ಸ್ಟೋಕ್ಸ್ 41 ರನ್‌ಗೆ ವಿಕೆಟ್ ಒಪ್ಪಿಸಬೇಕಾಯ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್, ಶಿಖರ್ ಧವನ್ 57, ಶ್ರೇಯಸ್ ಐಯ್ಯರ್ 53, ಮಾರ್ಕಸ್ ಸ್ಟೋಯ್ನಿಸ್ 18, ಅಲೆಕ್ಸ್ ಕ್ಯಾರಿ 14 ರನ್ ಸೇರ್ಪಡೆಯೊಂದಿಗೆ 20 ಓವರ್‌ ಮುಕ್ತಾಯಕ್ಕೆ 7 ವಿಕೆಟ್ ನಷ್ಟದಲ್ಲಿ 161 ರನ್ ಬಾರಿಸಿ ಎದುರಾಳಿಗೆ 162 ರನ್ ಗುರಿ ನೀಡಿತ್ತು.

Story first published: Thursday, October 15, 2020, 10:10 [IST]
Other articles published on Oct 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+