ಜೋಸ್ ಬಟ್ಲರ್ ವಿಕೆಟ್ ಆರ್ ಅಶ್ವಿನ್‌ಗೆ, ಟ್ವಿಟರ್‌ನಲ್ಲಿ ಟ್ವೀಟ್ ಹಾವಳಿ

ಶಾರ್ಜಾ: ಶಾರ್ಜಾ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 9) ಇಂಡಿಯನ್ ಪ್ರೀಮಿಯರ್ ಲೀಗ್ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾದ್ದವು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ವಿಕೆಟ್ ಆರ್ ಅಶ್ವಿನ್‌ಗೆ ಲಭಿಸಿತು.
ಆರಂಭಿಕರಾಗಿ ಬಂದಿದ್ದ ಜೋಸ್ ಬಟ್ಲರ್ 13 ರನ್ ಬಾರಿಸಿ ಡೆಲ್ಲಿ ಸ್ಪಿನ್ನರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. 2.3ನೇ ಓವರ್‌ನಲ್ಲಿ ಬಟ್ಲರ್ ಬೀಸಿದ ಹೊಡೆತ ಶಿಖರ್ ಧವನ್ ಕೈ ಸೇರಿತ್ತು. ಬಟ್ಲರ್ ವಿಕೆಟ್ ಅಶ್ವಿನ್‌ಗೆ ಲಭಿಸುತ್ತಲೇ ಟ್ವಿಟರ್‌ನಲ್ಲಿ ಸಾಲು ಸಾಲು ಟ್ವೀಟ್‌ಗಳು ಕಾಣಸಿಕ್ಕಿದೆ.
ಬಟ್ಲರ್ ವಿಕೆಟ್ ಅಶ್ವಿನ್‌ಗೆ ಲಭಿಸಿದರೆ ಟ್ವೀಟ್‌ಗಳು ಯಾಕೆ ಬರಬೇಕು? ಅದಕ್ಕೊಂದು ಕಾರಣವಿದೆ. ಹಿಂದಿನ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿದ್ದ ಆರ್ ಅಶ್ವಿನ್, ಬಟ್ಲರ್ ಅವರನ್ನು ವಿಚಿತ್ರ ರೀತಿಯಲ್ಲಿ ಔಟ್ ಮಾಡಿದ್ದರು. ಅಂದರೆ ಮಂಕಡ್ ವಿಧಾನದ ಮೂಲಕ ಬಟ್ಲರ್ ಅವರನ್ನು ಅಶ್ವಿನ್ ಪೆವಿಲಿಯನ್‌ಗೆ ಅಟ್ಟಿದ್ದರು.
ಆರ್ ಅಶ್ವಿನ್ ಅವರು ಬಟ್ಲರ್ ಅವರನ್ನು ಮಂಕಡ್ ವಿಧಾನದಲ್ಲಿ ಔಟ್ ಮಾಡಿದ್ದು ತುಂಬಾ ವಿವಾದ ಸೃಷ್ಠಿಸಿತ್ತು. ಆ ಬಳಿಕ ಮಂಕಡಿಂಗ್ ವಿಚಾರದಲ್ಲಿ ತೀವ್ರ ಚರ್ಚೆಗಳಾಗಿತ್ತು. ಈಗಲೂ ಮಂಕಡಿಂಗ್ ವಿಚಾರಕ್ಕೆ ಅಶ್ವಿನ್ ಸುದ್ದಿಯಾಗುತ್ತಲೇ ಇದ್ದಾರೆ. ಈ ಹಿನ್ನೆಲೆಯ ಕಾರಣಕ್ಕಾಗಿಯೇ ಇಂದು ಸಾಲುಸಾಲು ಟ್ವೀಟ್‌ಗಳು ಬಂದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications