Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಎಲ್ಲಾ 8 ತಂಡಗಳಿಗೂ ಟ್ವಿಟರ್‌ನಿಂದ ಹ್ಯಾಷ್‌ಟ್ಯಾಗ್ ಬಿಡುಗಡೆ

IPL 2020: Twitter launches official Hashtags and Emojis of all the 8 Teams

ನವದೆಹಲಿ: ಇಂಡಿಯನ್ ಪ್ರೀಮಿಯರ್ ಆರಂಭಕ್ಕಿನ್ನು ಕೇವಲ 1 ವಾರ ಬಾಕಿಯಿದೆ. ಈ ಮಧ್ಯೆ ಟ್ವಟರ್ ಎಲ್ಲಾ 8 ತಂಡಗಳಿಗೂ ಅಧಿಕೃತ ಹ್ಯಾಷ್‌ಟ್ಯಾಗ್ ಮತ್ತು ಇಮೋಜಿ ಬಿಡುಗಡೆ ಮಾಡಿದೆ. ಟ್ವಿಟರ್‌ನಿಂದ ಬಿಡುಗಡೆಯಾಗಿರುವ ಈ ಹ್ಯಾಷ್‌ಟ್ಯಾಗ್ ಮತ್ತು ಇಮೋಜಿ ಆಯಾ ತಂಡಗಳಿಗೆ, ತಂಡದ ಅಭಿಮಾನಿಗಳಿಗೆ ಹೆಚ್ಚು ಆಪ್ತವೆನಿಸುವ ರೀತಿಯಲ್ಲಿದೆ.

ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ 13ನೇ ಆವೃತ್ತಿಯ ಐಪಿಎಲ್ ಆರಂಭಗೊಳ್ಳಲಿದೆ. ನವೆಂಬರ್ 10ರಂದು ಐಪಿಎಲ್ ಕೊನೆಗೊಳ್ಳಲಿದೆ. ಟೂರ್ನಿಯು ಒಟ್ಟು ಸುಮಾರು 52 ಪಂದ್ಯಗಳನ್ನು ಒಳಗೊಂಡಿರಲಿದ್ದು, ದುಬೈ, ಶಾರ್ಜಾ ಮತ್ತು ಅಬುಧಾಬಿ ತಾಣಗಳಲ್ಲಿ ಐಪಿಎಲ್ ಟ್ರೋಫಿಗಾಗಿ ಕದನ ನಡೆಯಲಿದೆ.

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಲಿವೆ. ಸೆಪ್ಟೆಂಬರ್ 21ರಂದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ.

ಐಪಿಎಲ್‌ ಎಲ್ಲಾ 8 ತಂಡಗಳಿಗಾಗಿ ಟ್ವಿಟರ್ ಜಿಫ್‌ ತಯಾರಿಸಿದೆ. ಇದರಲ್ಲಿ ಆಯಾ ತಂಡಗಳ ಇಮೋಜಿ ಮತ್ತು ಹ್ಯಾಷ್‌ಟ್ಯಾಗ್ ಸೇರಿಸಿದೆ. ಆರ್‌ಸಿಬಿಯ ಜಿಫ್‌ನಲ್ಲಿ #PlayBold, #WeAreChallengers, #NewDecadeNewRCB, #ನಮ್ಮRCB ಹ್ಯಾಷ್ ಟ್ಯಾಗ್‌ಗಳು ಸೇರಿವೆ.

ಎಲ್ಲಾ ತಂಡಗಳ ಹ್ಯಾಷ್‌ಟ್ಯಾಗ್‌, ಇಮೋಜಿ ಮಾಹಿತಿಯಿರುವ ಟ್ವೀಟ್‌ಗಳು ಕೆಳಗಿವೆ ನೋಡಿ

Story first published: Saturday, September 12, 2020, 17:54 [IST]
Other articles published on Sep 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+