ಐಪಿಎಲ್ 2020: ಬ್ರೇಕ್ ದಿ ಬಿಯರ್ಡ್ ಸವಾಲು ಸ್ವೀಕರಿಸಿದ ತೆವಾಟಿಯಾ, ವಿಜಯ್ ಶಂಕರ್

ಐಪಿಎಲ್ ಟೂರ್ನಿಯಲ್ಲಿ 40 ಪಂದ್ಯಗಳು ನಡೆದಿದ್ದು ಟೂರ್ನಿ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಈ ಹಂತದಲ್ಲಿ ತಂಡಗಳು ಜಿದ್ದಾಜಿದ್ದಿನ ಹೋರಾಟವನ್ನು ನಡೆಸುತ್ತಿದೆ. ಆದರೆ ಈ ಪೈಪೋಟಿಯ ಕಾದಾಟದ ಮಧ್ಯೆಯೇ ಅಭಿಮಾನಿಗಳಿಗೆ ಆಫ್ ದಿ ಪೀಲ್ಡ್‌ನಲ್ಲೂ ಮನರಂಜನೆಯನ್ನು ನೀಡುವಲ್ಲಿ ಕ್ರಿಕೆಟಿಗರು ಹಿಂದೆ ಬಿದ್ದಿಲ್ಲ.
ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ 'ಬ್ರೇಕ್ ದಿ ಬಿಯರ್ಡ್' ಚಾಲೆಂಜನ್ನು ಮತ್ತೆ ಇಬ್ಬರು ಆಟಗಾರರು ಸ್ವೀಕರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದ ಆರಂಭಕ್ಕೂ ಮುನ್ನ ಈ ತಂಡದ ಇಬ್ಬರು ಆಲ್‌ರೌಂಡರ್ ಆಟಗಾರರು ಈ ಸವಾಲಿನಲ್ಲಿ ಪಾಲ್ಗೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಆಲ್‌ರೌಂಡರ್ ರಾಹುಲ್ ತೆವಾಟಿಯಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿಜಯ್ ಶಂಕರ್ ಈ ಸವಾಲಿನಲ್ಲಿ ಪಾಲ್ಗೊಂಡ ಆಟಗಾರರಾಗಿದ್ದಾರೆ. ಈ ಇಬ್ಬರು ಆಟಗಾರರಿಗೆ ಇತ್ತೀಚೆಗೆ ಆರ್‌ಸಿಬಿ ತಂಡದ ದೇವದತ್ ಪಡಿಕ್ಕಲ್ ಸವಾಲು ಸ್ವೀಕರಿಸುವಂತೆ ಇನ್ಸ್ಟಾಗ್ರಾಮ್‌ನಲ್ಲಿ ಉಲ್ಲೇಖಿಸಿದ್ದರು.
ಈ ಬಾರಿಯ ಐಪಿಎಲ್ ಟೂರ್ ನಿ ನಡೆಯುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಆಟಗಾರರು ಈ ಬ್ರೇಕ್ ದಿ ಬಿಯರ್ಡ್ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದಾರೆ. ಆರ್‌ಸಿಬಿಯ ಎಬಿಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಕೆಕೆಆರ್ ತಂಡದ ದಿನೇಶ್ ಕಾರ್ತಿಕ್, ಕಿರಾನ್ ಪೊಲಾರ್ಡ್, ರಶೀದ್ ಖಾನ್ ಸೇರಿದಂತೆ ಹಲವಾರು ಕ್ರಿಕೆಟಿಗರು ಈ ಸವಾಲನ್ನು ಸ್ವೀಕರಿಸಿ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಎರಡು ತಂಡಗಳಿಗೂ ಇಂದಿನ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಆರ್‌ಆರ್ ಕಳೆದ ಪಂದ್ಯದಲ್ಲಿ ಗೆಲುವನ್ನು ಕಂಡಿರುವ ಕಾರಣ ಆ ಗೆಲುವಿನ ಕ್ಷಣವನ್ನು ಮುಂದುವರಿಸಿಕೊಂಡು ಹೋಗುವ ಉತ್ಸಾಹದಲ್ಲಿದೆ. ಆದರೆ ಅದಕ್ಕೆ ಹೈದರಾಬಾದ್ ಕಠಿಣ ಪೈಪೋಟಿಯನ್ನು ನೀಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications