ಅದ್ಭುತ ಇನ್ನಿಂಗ್ಸ್ ನೀಡಿದ ವಿರಾಟ್ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ

ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 97 ರನ್‌ಗಳ ಹೀನಾಯ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೆಳ ಕುಸಿದಿದ್ದ ರಾಯಲ್ ಚಾಲೆಂಜರ್ಸ್ ತಂಡ ಮತ್ತೆ ಜಯದ ದಾರಿ ಹಿಡಿದಿದೆ. ಶನಿವಾರ (ಅಕ್ಟೋಬರ್ 3) ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಪಂದ್ಯದಲ್ಲಿ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ 8 ವಿಕೆಟ್ ಗೆಲುವು ದಾಖಲಿಸಿದೆ. ಇದೇ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕೊಹ್ಲಿ 53 ಎಸೆತಗಳಲ್ಲಿ 72 ರನ್ ಬಾರಿಸಿದರು. ಇದರಲ್ಲಿ 7 ಫೋರ್ಸ್, 2 ಸಿಕ್ಸರ್ ಸೇರಿತ್ತು. ಈ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಕೊಹ್ಲಿ ಹೆಸರಿನಲ್ಲಿ ಒಂದು ದಾಖಲೆಯೂ ನಿರ್ಮಾಣವಾಗಿದೆ.
ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿನ ಪ್ರದರ್ಶನದೊಂದಿಗೆ ಕೊಹ್ಲಿ ಮಾಡಿರುವ ದಾಖಲೆಯ ಮಾಹಿತಿ ಕೆಳಗಿದೆ.

ಐಪಿಎಲ್‌ನಲ್ಲಿ ಅತ್ಯಧಿಕ ರನ್
ಐಪಿಎಲ್‌ನಲ್ಲಿ ಅತ್ಯಧಿಕರನ್ ಪಟ್ಟಿಯಲ್ಲಿರುವ ರನ್ ಮಷಿನ್ ವಿರಾಟ್ ಕೊಹ್ಲಿ 5500 ರನ್ ಪೂರೈಸಿದ್ದಾರೆ. ಒಟ್ಟಿಗೆ 181 ಪಂದ್ಯಗಳನ್ನಾಡಿರುವ ಕೊಹ್ಲಿ 37.68ರ ಸರಾಸರಿಯಲ್ಲಿ, 131.8 ಸ್ಟ್ರೈಕ್ ರೇಟ್‌ನಲ್ಲಿ 5502 ರನ್ ಗಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇದು ಅತ್ಯಧಿಕ ರನ್ ದಾಖಲೆಯಾಗಿದೆ.

ಇನ್ನೊಂದು ದಾಖಲೆ ಮಿಸ್
ಶನಿವಾರದ ಪಂದ್ಯದಲ್ಲೇ ಕೊಹ್ಲಿಗೆ ಮತ್ತೊಂದು ದಾಖಲೆ ನಿರ್ಮಿಸಲು ಅವಕಾಶವಿತ್ತು. 82 ರನ್ ಬಾರಿಸಿದ್ದರೆ ಟಿ20 ಕ್ರಿಕೆಟ್‌ನಲ್ಲಿ 9000 ರನ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿ, ವಿಶ್ವದ 7ನೇ ಬ್ಯಾಟ್ಸ್‌ಮನ್ ಆಗಿ ಕೊಹ್ಲಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಕೊಹ್ಲಿ 72 ರನ್ ಬಾರಿಸಿದ್ದರಿಂದ ದಾಖಲೆಗಾಗಿ ಇನ್ನೂ 10 ರನ್ ಬೇಕಿದೆ.

ಆರ್‌ಆರ್ ಸಾಧಾರಣ ಮೊತ್ತ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡ, ಜೋಸ್ ಬಟ್ಲರ್ 22, ರಾಬಿನ್ ಉತ್ತಪ್ಪ 17, ಮಹಿಪಾಲ್ ಲೋಮರ್ 47, ಪ್ರಿಯಮ್ ಗರ್ಗ್ 16, ರಾಹುಲ್ ತೆವಾಟಿಯಾ 24, ಜೋಫ್ರಾ ಆರ್ಚರ್ 16 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತು.

ಬೆಂಗಳೂರಿಗೆ ಭರ್ಜರಿ ಜಯ
ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಚ್ಚರಿಕೆಯ ಬ್ಯಾಟಿಂಗ್ ನೀಡಿತು. ದೇವದತ್ ಪಡಿಕ್ಕಲ್ 63, ಆ್ಯರನ್ ಫಿಂಚ್ 8, ವಿರಾಟ್ ಕೊಹ್ಲಿ 72, ಎಬಿ ಡಿ ವಿಲಿಯರ್ಸ್ 12 ರನ್ ಸೇರ್ಪಡೆಯೊಂದಿಗೆ 19.1 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 158 ರನ್ ಮಾಡಿತು. ಆರ್‌ಸಿಬಿ ಭರ್ಜರಿ 8 ವಿಕೆಟ್ ಗೆಲುವು ದಾಖಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
