ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಆರ್‌ಸಿಬಿ ಮಾಡಿದ್ದು ಅದೇ ತಪ್ಪು!

ಐಪಿಎಲ್ 2020 ಆವೃತ್ತಿಯಲ್ಲಿ ಹಿಂದಿನ ಕೆಲ ಆವೃತ್ತಿಗಳಿಗೆ ಹೋಲಿಸದರೆ ಆರ್‌ಸಿಬಿ ಉತ್ತಮ ಲಯದಲ್ಲಿದ್ದಂತೆ ಕಂಡುಬರುತ್ತಿದೆ. ಅದರೆ ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನೀರಸ ಪ್ರದರ್ಶನ ನಿಡುವ ಮೂಲಕ ಟೂರ್ನಿಯಲ್ಲಿ ಎರಡನೇ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ಅವಕಾಶವನ್ನು ತಪ್ಪಿಸಿಕೊಂಡಿದೆ.
ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪೃಥ್ವಿ ಶಾ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದದಿಂದಾಗಿ ಡೆಲ್ಲಿ ಬೃಹತ್ ಮೊತ್ತವನ್ನು ಕಲೆ ಹಾಕಿ ಆರ್‌ಸಿಬಿಗೆ ಒತ್ತಡವನ್ನು ಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ ಆರ್‌ಸಿಬಿ ಹಿಂದಿನ ಪದ್ಯಗಳಲ್ಲೂ ಮಾಡಿದ ಒಂದು ತಪ್ಪು ಈ ಪಂದ್ಯದಲ್ಲಿ ಮುಂದುವರಿಸಿದ್ದು ಆರ್‌ಸಿಬಿ ಬಾರಿಗೆ ತುಂಬಾ ದುಬಾರಿಯಾಯಿತು. ಹೀಗಾಗಿ ಪಂದ್ಯ ಕೈಜಾರಲು ಪ್ರಮುಖ ಕಾರಣವೆನಿಸಿತು.

ಮತ್ತೆ ಕೈ ಚೆಲ್ಲಿದ ಕ್ಯಾಚ್
ಆರ್‌ಸಿಬಿ ಪಂದ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಂದರ್ಭ ಬಂದಾಗ ಬರುವ ಕ್ಯಾಚ್‌ಗಳನ್ನು ಕೈಚೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಂತಿದೆ. ಇದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಮುಂದುವರಿಯಿತು. ಮಾರ್ಕಸ್ ಸ್ಟೋಯ್ನಿಸ್ ನೀಡಿದ ಸುಲಭ ಕ್ಯಾಚ್‌ಅನ್ನು ಯುಜುವೇಂದ್ರ ಚಾಹಲ್ ಹಿಡಿಯುವಲ್ಲಿ ವಿಫಲರಾದರು. ಇದು ತಂಡಕ್ಕೆ ದುಬಾರಿಯಾಯಿತು. ಈ ಜೀವದಾನವನ್ನು ಸರಿಯಾಗಿ ಉಪಯೋಗಿಸಿಕೊಂಡರು ಸ್ಟೋಯ್ನಿಸ್.

ಸ್ಟೋಯ್ನಿಸ್ ಭರ್ಜರಿ ಆಟ
ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ 30 ರನ್ ಗಳಿಸಿ ಆಡುತ್ತಿದ್ದ ವೇಳೆ ಬೀಸಿ ಹೊಡೆಯಲು ಮುಂದಾಗಿದ್ದರು. ಸಿಕ್ಸರ್‌ಗೆಂದು ಅಟ್ಟಿದ್ದ ಈ ಹೊಡೆತ ಎತ್ತರಕ್ಕೆ ಚಿಮ್ಮಿ ಫೀಲ್ಡರ್ ಯುಜುವೇಂದ್ರ ಕೈಗೆ ತಲುಪಿತ್ತು. ಆದರೆ ಈ ಸುಲಭ ಕ್ಯಾಚ್‌ಅನ್ನು ಯುಜಿ ಡ್ರಾಪ್ ಮಾಡಿದರು. ಬಳಿಕ ಮತ್ತಷ್ಟು ಸ್ಪೋಟಕ ಆಟಕ್ಕೆ ಮುಂದಾದ ಸ್ಟೋಯ್ನಿಸ್ 26 ಎಸೆತಗಳಲ್ಲಿ 53 ನ್‌ಗಳಿಸಿ ಅಜೇಯರಾಗಿ ಉಳಿದರು. ಈ ಭರ್ಜರಿ ಆಟದ ಪರಿಣಾಮವಾಗಿ ಡೆಲ್ಲಿ 196ರನ್‌ಗಳನ್ನು ಗಳಿಸಿ ಬೃಹತ್ ಗುರಿಯನ್ನು ಮುಂದಿಟ್ಟಿತ್ತು.

ಕ್ಯಾಚ್‌ಗಳನ್ನು ಕೈಚೆಲ್ಲುವುದು ತಂಡಕ್ಕೆ ಘಾಸಿ ಮಾಡುತ್ತದೆ: ಕೊಹ್ಲಿ
ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ನಿರ್ಣಾಯಕ ಹಂತದಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿರುವುದು ತಂಡಕ್ಕೆ ಘಾಸಿ ಮಾಡುತ್ತದೆ ಎಂದಿದ್ದಾರೆ. "ನಮ್ಮ ಬಳಿಕಗೆ ಬರುವ ಕೆಲ ಮುಖ್ಯ ಅವಕಾಶಗಳನ್ನು ನಾವು ಉಪಯೋಗಿಸಿಕೊಳ್ಳಬೇಕು. ನಾವು ಕೇವಲ ಕ್ಯಾಚ್‌ಗಳನ್ನಷ್ಟೇ ಬಿಡುತ್ತಿಲ್ಲ. ಕಳಿತುಕೊಳ್ಳಬೇಕಿದ್ದವರಿಗೆ ಅವಕಾಶ ನೀಡುತ್ತಿದ್ದೇವೆ. ಆ ಸಂಗತಿ ನಮಗೆ ನೋವುಂಟು ಮಾಡುತ್ತದೆ" ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಕೊಹ್ಲಿಯೂ ಮಾಡಿದ್ದರು ಇದೇ ತಪ್ಪು
ಇನ್ನು ಈ ತಪ್ಪನ್ನು ಸ್ವತಃ ನಾಯಕ ವಿರಾಟ್ ಕೊಹ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮಾಡಿದ್ದರು. ಅಂದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಎದುರಾಳಿ ನಾಯಕ ಕೆಎಲ್ ರಾಹುಲ್‌ಗೆ ಎರಡು ಜೀವದಾನ ನೀಡಿದ್ದರು ಕೊಹ್ಲಿ . ಇದರ ಲಾಭ ಪಡೆದುಕೊಂಡ ರಾಹುಲ್ ಶತಕವನ್ನು ಬಾರಿಸಿದ್ದರು. ಆ ಪಂದ್ಯದಲ್ಲೂ ಆರ್‌ಸಿಬಿ ಸೋಲು ಕಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications