ವಿರಾಟ್ ಕೊಹ್ಲಿ ಒಬ್ಬ ಚತುರ: ಆರ್‌ಸಿಬಿ ನಾಯಕನಿಗೆ ಮೋರಿಸ್ ಶ್ಲಾಘನೆ

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲ್ ರೌಂಡರ್ ಕ್ರಿಸ್ ಮೋರಿಸ್, ನಾಯಕ ವಿರಾಟ್ ಕೊಹ್ಲಿ ಅವರನ್ನು 'ಚತುರ ಪ್ರತಿಭೆ' ಎಂದು ಶ್ಲಾಘಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಹ್ಲಿ ಅಜೇಯ 90 ರನ್ ಕೊಡುಗೆ ನೀಡಿದ್ದನ್ನು ಸ್ಮರಿಸಿ ಮೋರಿಸ್ ಈ ಮಾತನ್ನಾಡಿದ್ದಾರೆ.
ಅಕ್ಟೋಬರ್ 10ರ ಶನಿವಾರ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 25ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 37 ರನ್‌ಗಳ ಗೆಲುವು ದಾಖಲಿಸಿತ್ತು.
ದೇವದತ್ ಪಡಿಕ್ಕಲ್ 33, ಕೊಹ್ಲಿ 90, ವಾಷಿಂಗ್ಟನ್ ಸುಂದರ್ 10, ಶಿವಂ ದೂಬೆ 22 ರನ್ ಬಾರಿಸಿದ್ದರಿಂದ ಆರ್‌ಸಿಬಿ ಮೊದಲ ಇನ್ನಿಂಗ್ಸ್‌ನಲ್ಲಿ 169 ರನ್ ಕಲೆ ಹಾಕಲು ಸಾಧ್ಯವಾಗಿತ್ತು. ಗುರಿ ಬೆನ್ನಟ್ಟಿದ್ದ ಸಿಎಸ್‌ಕೆ, ಅಂಬಾಟಿ ರಾಯುಡು 42, ಎನ್ ಜಗದೀಶನ್ 33 ರನ್ ಸೇರ್ಪಡೆಯೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು 132 ರನ್ ಬಾರಿಸಿ ಶರಣಾಗಿತ್ತು.
ಪಂದ್ಯದ ಗೆಲುವಿನ ಬಗ್ಗೆ ಮಾತನಾಡಿದ ಮೋರಿಸ್, 'ಗೆಲ್ಲಬೇಕಾದರೆ 16 ಓವರ್‌ಗಳ ನಂತರ ಏನಾದರೂ ಮಾಡಬೇಕಾದ ಅನಿವಾರ್ಯತೆಯಿದೆ ಅನ್ನಿಸಿತು. ಇದೇ ಕಾರಣಕ್ಕೆ ಕೊಹ್ಲಿ ಐಪಿಎಲ್‌ನಲ್ಲಿ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಅವರು ನಿಜಕ್ಕೂ ಚತುರ ಪ್ರತಿಭೆ. ಅನುಭವಿ ಬೌಲರ್‌ಗಳ ವಿರುದ್ಧವೂ ಕೊಹ್ಲಿ ಉತ್ತಮ ಆಟ ಆಡಿದ್ದಾರೆ. ತಾನೇ ಮುಂದೆ ನಿಂತು ಪಂದ್ಯ ಗೆಲ್ಲಿಸಿದ್ದಾರೆ.,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications