For Quick Alerts
ALLOW NOTIFICATIONS  
For Daily Alerts
 

ಭಾರತೀಯರ ಪರ ಅಪರೂಪದ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ

IPL 2020: Virat Kohli on verge of becoming first Indian to reach huge T20 record

ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ಕ್ರಮವಾಗಿ 3, 1, ಮತ್ತು 14 ರನ್ ಬಾರಿಸಿದ್ದ ಕೊಹ್ಲಿ ಹಿಂದಿನ ಪಂದ್ಯದಲ್ಲಿ 72 ರನ್ ಬಾರಿಸಿದ್ದರು. ಕೊಹ್ಲಿ ಬ್ಯಾಟಿಂಗ್ ನೆರವಿನಿಂದ ಪಂದ್ಯದಲ್ಲಿ ಆರ್‌ಆರ್ ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು.

ಹಿಂದಿನ ಪಂದ್ಯದಲ್ಲೇನಾದರೂ ಕೊಹ್ಲಿ 82 ರನ್ ಬಾರಿಸಿದ್ದರೆ ಅವರ ಹೆಸರಿಗೆ ವಿಶಿಷ್ಠ ದಾಖಲೆಯೊಂದು ಸೇರ್ಪಡೆಯಾಗುತ್ತಿತ್ತು. ಮುಂದಿನ ಪಂದ್ಯದಲ್ಲಿ ಕೊಹ್ಲಿ ಕೇವಲ 10 ರನ್ ಗಳಿಸಿದರೂ ಟಿ20 ಕ್ರಿಕೆಟ್‌ನಲ್ಲಿ 9,000 ರನ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಆಗಿ ಕಿಂಗ್ ಕೊಹ್ಲಿ ಗುರುತಿಸಿಕೊಳ್ಳಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 181 ಪಂದ್ಯಗಳನ್ನಾಡಿರುವ ಕೊಹ್ಲಿ ಈಗಾಗಲೇ ಅತ್ಯಧಿಕ ರನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಹೆಸರಿನಲ್ಲೀಗ 5,502 ಐಪಿಎಲ್ ರನ್‌ಗಳಿವೆ. ಸದ್ಯ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ 270 ಇನ್ನಿಂಗ್ಸ್‌ಗಳಲ್ಲಿ 41.05 ರ ಸರಾಸರಿಯಂತೆ, 134.25ರ ಸ್ಟ್ರೈಕ್ ರೇಟ್‌ನಂತೆ 8990 ರನ್ ಬಾರಿಸಿದ್ದಾರೆ. ಇದರಲ್ಲಿ 9 ಅರ್ಧ ಶತಕಗಳು ಸೇರಿವೆ.

ಕೊಹ್ಲಿ ಇನ್ನು 10 ರನ್ ಗಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ 9000 ರನ್ ಪೂರೈಸಿದ ವಿಶ್ವದ ಏಳನೇ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೂ ಪಾತ್ರರಾಗಲಿದ್ದಾರೆ. ಸೋಮವಾರ (ಅಕ್ಟೋಬರ್ 5) ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊಹ್ಲಿ ಈ ದಾಖಲೆ ಪೂರೈಸಿಕೊಳ್ಳುವ ನಿರೀಕ್ಷೆಯಿದೆ.

ಈ ಪಟ್ಟಿಯಲ್ಲೀಗ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ (13296 ರನ್), ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್ (10370 ರನ್), ಪಾಕಿಸ್ತಾನದ ಶೋಯೆಬ್ ಮಲಿಕ್ (9926 ರನ್), ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ (9922 ರನ್), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (9451 ರನ್), ಆ್ಯರನ್ ಫಿಂಚ್ (9148 ರನ್) ಇದ್ದಾರೆ.

Story first published: Monday, October 5, 2020, 13:54 [IST]
Other articles published on Oct 5, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+