ಕೊಹ್ಲಿ ಕ್ರಿಕೆಟ್ ಕಿಟ್‌ನಲ್ಲಿ ಏನೇನಿದೆ? ಕುತೂಹಲ ತಣಿಸಿದ್ದಾರೆ ಸ್ವತಃ ಆರ್‌ಸಿಬಿ ನಾಯಕ: ವಿಡಿಯೋ

ಕ್ರಿಕೆಟ್ ಅಭಿಮಾನಿಗಳಿಗೆ ತನ್ನ ನೆಚ್ಚಿನ ಆಟಗಾರ ಯಾವ ರೀತಿ ಪ್ರದರ್ಶನವನ್ನು ನೀಡುತ್ತಾನೆ ಎಂಬ ಬಗ್ಗೆ ಮಾತ್ರವಲ್ಲ, ನೆಚ್ಚಿನ ಆಟಗಾರನ ದಿನಚರಿ ಹೇಗಿರುತ್ತದೆ? ಆತನ ಹವ್ಯಾಸ, ಆತನ ಸ್ಟೈಲ್ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಕೂಡ ಅಭಿಮಾನಿಗಳು ಕುತೂಹಲದಿಂದ ಇರುತ್ತಾರೆ. ಅದೇ ರೀತಿ ಆಟಗಾರರ ಬಳಸುವ ವಸ್ತುಗಳ ಬಗ್ಗೆಯೂ ಅನೇಕ ಪ್ರಶ್ನೆಗಳು ಅಭಿಮಾನಿಗಳಲ್ಲಿ ಇರುತ್ತದೆ. ಅದರಲ್ಲೂ ಕ್ರಿಕೆಟ್ ಆಟಗಾರರು ಹೊಂದಿರುವ ಬೃಹತ್ ಗಾತ್ರದ ಕಿಟ್ ಏನನ್ನೆಲ್ಲಾ ಒಳಗೊಂಡಿರುತ್ತದೆ ಎಂಬುದು ಎಂತವರಿಗೂ ಕುತೂಹಲಕಾರಿಯಾಗಿಯೇ ಇರುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ. ತಮ್ಮ ಕ್ರಿಕೆಟ್ ಕಿಟ್‌ನಲ್ಲಿರುವ ವಸ್ತುಗಳ ಬಗ್ಗೆ ಕೆಲ ಕುತೂಹಲಕಾರಿ ವಿಚಾರಗಳನ್ನು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಕಿಟ್ ಬಗ್ಗೆ ಕೊಹ್ಲಿ ವಿವರಣೆ
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಕಿಟ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಯುಎಇನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪಾಲ್ಗೊಂಡಿರುವ ಕೊಹ್ಲಿ ಸುದೀರ್ಘ ಟೂರ್ನಿಗಾಗಿ ಹೇಗೆಲ್ಲಾ ತಯಾರಿ ನಡೆಸಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ಕಿಟ್‌ನಲ್ಲಿ ಏನೆಲ್ಲಾ ಹೊಂದಿದ್ದಾರೆ ಎಂಬುದನ್ನು ಸ್ವತಃ ಕೊಹ್ಲಿಯೇ ವಿವರಿಸಿದ್ದಾರೆ.

ಐಪಿಎಲ್‌ಗಾಗಿ ಕೊಹ್ಲಿ ಬಳಿಯಿರುವ ಗ್ಲೌಸ್
ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್‌ಗಾಗಿ ತಾನು 10-12 ಗ್ಲೌಸ್‌ಗಳನ್ನು ಬ್ಯಾಗ್‌ನಲ್ಲಿ ಹೊಂದಿದ್ದೇನೆ. ಸುದೀರ್ಘ ಕಾಲ ನಡೆಯುವ ಟೂರ್ನಿಯಾಗಿರುವ ಕಾರಣ ಇಷ್ಟು ಸಂಖ್ಯೆಯಲ್ಲಿ ಬೇಕಾಗುತ್ತದೆ ಎಂದು ಕೊಹ್ಲಿ ವಿವರಿಸಿದ್ದಾರೆ. ಗ್ಲೌಸ್ ಧರಿಸುವ ಮುನ್ನ ಗ್ರಿಪ್ ಕ್ರೀಮ್‌ಅನ್ನು ಬಳಸಿಕೊಳ್ಳುವ ಕಾರಣ ಈ ಕ್ರೀಮ್ ಕೂಡ ತನ್ನ ಬ್ಯಾಗ್‌ನಲ್ಲಿರುತ್ತದೆ ಎಂದಿದ್ದಾರೆ ಕೊಹ್ಲಿ.
ಮಾಹಿತಿ ನೀಡಿದ ಕೊಹ್ಲಿ
ಥೈ ಗಾರ್ಡ್, ಕ್ರಿಕೆಟ್ ಸ್ಪೈಕ್ ಶೂಸ್, ಗ್ರಿಪ್ ಪೋಲ್, ಪ್ಯಾಡ್, ಬ್ಯಾಟ್ ಸ್ಟಿಕ್ಕರ್ಸ್, ಹೆಲ್ಮೆಟ್ ಸೇರಿದಂತೆ ತಮ್ಮ ಕ್ರಿಕೆಟ್ ಕಿಟ್‌ನಲ್ಲಿರುವ ವಸ್ತುಗಳ ಬಗ್ಗೆ ವಿರಾಟ್ ಕೊಹ್ಲಿ ವಿವರಣೆಯನ್ನು ನೀಡಿದ್ದಾರೆ. ಇದರ ಜೊತೆಗೆ ತನ್ನ ಜೊತೆಯಿರುವ ಬ್ಯಾಟ್‌ಗಳ ಬಗ್ಗೆಯೂ ಕೊಹ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕೊಹ್ಲಿ ಕಿಟ್‌ನಲ್ಲಿರುವ ಬ್ಯಾಟ್‌ಗಳೆಷ್ಟು?
ಸಾಮಾನ್ಯವಾಗಿ ಅಂಗಳಕ್ಕೆ ತರುವ ಕ್ರಿಕೆಟ್ ಕಿಟ್‌ನ ಕೆಳ ಭಾಗದ ಸಣ್ಣ ಝಿಪ್‌ನಲ್ಲಿ ವಿರಾಟ್ ಕೊಹ್ಲಿ ಮೂರು ಬ್ಯಾಟ್‌ಗಳನ್ನು ಹೊಂದಿರುತ್ತಾರೆ. ಈ ಬಗ್ಗೆ ವಿವರಿಸಿದ ಕೊಹ್ಲಿ ಈ ಮೂರು ಬ್ಯಾಟ್‌ಗಳನ್ನು ಕೇವಲ ಎರಡು ಬ್ಯಾಟ್‌ಗಳನ್ನು ಮಾತ್ರವೇ ಟೂರ್ನಿಯಲ್ಲಿ ನಾನು ಈವರೆಗೆ ಉಪಯೋಗಿಸಿದ್ದೇನೆ ಎಂದಿದ್ದಾರೆ. ಇದಲ್ಲದೆ ಇನ್ನೊಂದು ಬ್ಯಾಟ್ ಇದ್ದು ಅದರಲ್ಲಿ ಇನ್ನೂ 8 ಬ್ಯಾಟ್‌ಗಳು ಇವೆ. 3 ತಿಂಗಳುಗಳ ಕಾಲ ನಡೆಯುವ ಟೂರ್ನಿಯಾಗಿರುವ ಕಾರಣ ಇಷ್ಟು ಪ್ರಮಾಣದ ಬ್ಯಾಟ್‌ಗಳನ್ನು ಹೊಂದಿರಬೇಕಾಗುತ್ತದೆ ಎಂದು ಕೊಹ್ಲಿ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications