Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಅಸಲಿಗೆ ಸೋತಿದ್ದು ಎಲ್ಲಿ?!: ನಾಯಕ ವಿರಾಟ್ ಕೊಹ್ಲಿ ವಿವರಣೆ

IPL 2020: Virat Kohli rues dropped catch of Kane Williamson

ಅಬುಧಾಬಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಕ್ಯಾಚ್ ಕೈ ಚೆಲ್ಲದಿದ್ದರೆ ಅದೊಂದು ವಿಭಿನ್ನ ಗೇಮ್ ಅನ್ನಿಸುತ್ತಿತ್ತು. ಗೆಲುವಿನ ಸಾಧ್ಯತೆಯಿತ್ತು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಶುಕ್ರವಾರ (ನವೆಂಬರ್ 7) ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರು ತಂಡ 6 ವಿಕೆಟ್‌ ಸೋಲನುಭವಿಸಿ ಈ ಸೀಸನ್‌ನಲ್ಲಿ ಸ್ಪರ್ಧೆ ಮುಗಿಸಿದೆ. ಸೋಲಿನ ನಿರಾಸೆಯ ಬಳಿಕ ಕೊಹ್ಲಿ, ಎಡವಿದ್ದು ಎಲ್ಲೆಂದು ಹೇಳಿಕೊಂಡಿದ್ದಾರೆ.

'ಇದು ತುಂಬಾ ಜಿದ್ದಾಜಿದ್ದಿಯ ಪಂದ್ಯವಾಗಿತ್ತು. ಒಂದು ವೇಳೆ ನಾವು ಕೇನ್ ವಿಲಿಯಮ್ಸನ್ ಕ್ಯಾಚ್ ಪಡೆದಿದ್ದರೆ ಇದೊಂದು ವಿಭಿನ್ನ ಬಾಲ್ ಗೇಮ್ ಆಗುತ್ತಿತ್ತು,' ಎಂದು ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಹೇಳಿದ್ದಾರೆ. ಪಂದ್ಯದ ಅದೃಷ್ಟ ಕೂಡ ಹೈದರಾಬಾದ್ ಪರ ಇತ್ತು ಎಂದೂ ಕೊಹ್ಲಿ ತಿಳಿಸಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿಯಿಂದ ಆ್ಯರನ್ ಫಿಂಚ್ 32, ಎಬಿ ಡಿ ವಿಲಿಯರ್ಸ್ 56, ಮೊಹಮ್ಮದ್ ಸಿರಾಜ್ 10 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾರೂ 10ಕ್ಕೂ ಹೆಚ್ಚು ರನ್ ಗಳಿಸಲಿಲ್ಲ. ಜೇಸನ್ ಹೋಲ್ಡರ್ (24 ರನ್), ಕೇನ್ ವಿಲಿಯಮ್ಸನ್ (50) ಆಟ ಎಸ್‌ಆರ್‌ಎಚ್‌ಗೆ ಗೆಲುವನ್ನು ಬರೆಯಿತು.

(ಆರ್‌ಸಿಬಿ vs ಎಸ್‌ಆರ್‌ಎಚ್, ಸಂಕ್ಷಿಪ್ತ ಸ್ಕೋರ್: ಆರ್‌ಸಿಬಿ 131-7 (20 Ov), ಎಸ್‌ಆರ್‌ಎಚ್ 132-4 (19.4 Ov).

Story first published: Saturday, November 7, 2020, 12:04 [IST]
Other articles published on Nov 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+