Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ ಡ್ಯಾನ್ಸ್ ಟ್ವಿಟರ್‌ನಲ್ಲಿ ಸಖತ್ ವೈರಲ್: ವಿಡಿಯೋ

IPL 2020: Virat Kohli’s dance moves goes viral on Twitter

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯಕ್ಕೂ ಮುನ್ನ ಒಳ್ಳೆಯ ಮೂಡ್‌ನಲ್ಲಿದ್ದ ಕೊಹ್ಲಿ ಮೈದಾನದಲ್ಲಿ ಬಹಳಷ್ಟು ಸ್ಟೆಪ್‌ಗಳನ್ನು ಹಾಕಿ ಗಮನ ಸೆಳೆದಿದ್ದಾರೆ.

ಶಾರ್ಜಾ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 15) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮೈದಾನಕ್ಕಿಳಿದಿದ್ದ ವಿರಾಟ್, ಟಿ20ನಲ್ಲಿ 200ನೇ ಪಂದ್ಯ ಆಡಿದ ಬ್ಯಾಟ್ಸ್‌ಮನ್‌ ಆಗಿ ಗಮನ ಸೆಳೆದಿದ್ದರು. ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಡ್ಯಾನ್ಸ್ ಮಾಡಿದ್ದರು.

ಕೊಹ್ಲಿ ಒಟ್ಟಿಗೆ 184 ಪಂದ್ಯಗಳನ್ನು ಐಪಿಎಲ್‌ನಲ್ಲಿ ಆಡಿದ್ದಾರೆ. ಇನ್ನುಳಿದ ಪಂದ್ಯಗಳು ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದ್ದಾರೆ. ಈ ಸಾಧನೆಯೊಂದಿಗೆ ಕೊಹ್ಲಿ ಟಿ20ಯಲ್ಲಿ 200 ಪಂದ್ಯಗಳನ್ನಾಡಿದ ಮೊದಲ ಆಟಗಾರನೆಂಬ ದಾಖಲೆಗೂ ಕಾರಣರಾಗಿದ್ದಾರೆ.

ಆರ್‌ಸಿಬಿ ಫ್ರಾಂಚೈಸಿಗೆ ಆಡುತ್ತಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡ ವಿರಾಟ್ ಖುಷಿ ವ್ಯಕ್ತಪಡಿಸಿದ್ದಾರೆ. 'ಈ ಫ್ರಾಂಚೈಸಿಗಾಗಿ 13 ವರ್ಷಗಳ ಕಾಲ ಆಡಿದ್ದೇನೆ ಎಂದರೆ ನಂಬಲಾಗುತ್ತಿಲ್ಲ. ಆರ್‌ಸಿಬಿ ಅಂದರೆ ತಂಡ ಅನ್ನುವುದಕ್ಕಿಂತ ಅದೊಂದು ಭಾವನೆ,' ಎಂದು ಕೊಹ್ಲಿ ಹೇಳಿದ್ದಾರೆ.

Story first published: Friday, October 16, 2020, 10:11 [IST]
Other articles published on Oct 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+