ಐಪಿಎಲ್: ಟಿ20 ಕ್ರಿಕೆಟ್‌ಗೆ ಹೊಸ ನಿಯಮ ಸಲಹೆಯಿತ್ತ ವಿರಾಟ್ ಕೊಹ್ಲಿ

ದುಬೈ: ಇಂಟರ್ ನ್ಯಾಷನಲ್ ಟಿ20 ಕ್ರಿಕೆಟ್‌ಗೆ ಸಂಬಂಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಹೊಸದೊಂದು ಸಲಹೆ ನೀಡಿದ್ದಾರೆ. ಮಂಗಳವಾರ (ಅಕ್ಟೋಬರ್ 13)ರ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ವೈಡ್‌ಬಾಲ್‌ಗೆ ಸಂಬಂಧಿಸಿ ವಿವಾದ ಸೃಷ್ಠಿಯಾದ ಬಳಿಕ ಕೊಹ್ಲಿ ಈ ಸಲಹೆ ನೀಡಿದ್ದಾರೆ.
ಮಂಗಳವಾರ ನಡೆದ ಐಪಿಎಲ್ 29 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಿದ್ದವು. ಈ ವೇಳೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಮತ್ತು ಅಂಪೈರ್ ಮಧ್ಯೆ ವೈಡ್ ಬಾಲ್ ವಿಚಾರವಾಗಿ ಚರ್ಚೆ ನಡೆದಿತ್ತು. ಇಂಥದ್ದು ಕ್ರಿಕೆಟ್‌ನಲ್ಲಿ ನಡೆಯುತ್ತಿರುತ್ತದೆ. ಹೀಗಾಗಿ ಕೊಹ್ಲಿ ವಿಭಿನ್ನ ಯೋಚನೆ ಹಂಚಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಸದ್ಯ ಎರಡೂ ತಂಡಗಳಿಗೂ ಡಿಸಿಶನ್ ರಿವ್ಯೂ ಸಿಸ್ಟಮ್‌ಗೆ ಅವಕಾಶವಿರುತ್ತದೆ. ಎಲ್‌ಬಿಡಬ್ಲ್ಯೂ, ರನ್‌ಔಟ್, ಕ್ಯಾಚ್ ಇಂಥದ್ದಕ್ಕೆಲ್ಲ ಎರಡೂ ತಂಡಗಳು ಡಿಆರ್‌ಎಸ್ ಪಡೆದುಕೊಳ್ಳಬಹುದು. ಅದರೆ ನೋ ಬಾಲ್, ವೈಡ್ ಇಂಥದ್ದು ಅಂಪೈರ್ ನಿರ್ಧರಿಸಲಿದ್ದಾರೆ.
'ನಾನೊಬ್ಬನಾಯಕನಾಗಿ ನನಗೆ ವೈಡ್, ಹೈ ಫುಲ್‌ಟಾಸ್ ವಿಮರ್ಶಿಸುವ ಸಾಮರ್ಥ್ಯವಿದೆ. ಯಾಕೆಂದರೆ ನಾವು ಐಪಿಎಲ್‌ನಂತ ಸಾಕಷ್ಟು ಐತಿಹಾಸಿಕ ಟೂರ್ನಿಗಳನ್ನು ನೋಡಿದ್ದೇವೆ. ಹೀಗಾಗಿ ವೈಡ್, ಫುಲ್‌ಟಾಸ್ ನಿರ್ಧರಿಸುವ ಅವಕಾಶ ನಮಗೆ ನೀಡಬೇಕು. ಯಾಕೆಂದರೆ ಒಂದೇ ರನ್‌ನಿಂದ ಪಂದ್ಯ ಸೋತರೆ ಆ ವಿವಾದಾತ್ಮಕ ಒಂದು ರನ್ ದೊಡ್ಡ ಸಂಗತಿಯಾಗುತ್ತದೆ,' ಎಂದು ಕೊಹ್ಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications