Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್‌ 5ನೇ ಐಪಿಎಲ್ ಟ್ರೋಫಿ ಗೆಲ್ಲುತ್ತಲೇ ವಿರಾಟ್‌ ಕೊಹ್ಲಿ ಟ್ರೋಲ್!

IPL 2020: Virat Kohli Trolled After Rohit Sharma win Fifth IPL Title

ಬೆಂಗಳೂರು: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಐದನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಮುಂಬೈಗೆ ಐದನೇ ಐಪಿಎಲ್ ಟ್ರೋಫಿ ಸಿಗುತ್ತಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಕೀ ಬೋರ್ಡ್ ವಾರಿಯರ್ಸ್ ಟ್ರೋಲ್ ಮಾಡಿದ್ದಾರೆ. ಮಂಗಳವಾರ (ನವೆಂಬರ್ 10) ಐಪಿಎಲ್ ಫೈನಲ್‌ ಮುಗಿಯುತ್ತಲೇ ನೆಟ್ಟಿಗರ ತಮಾಷೆ ಶುರುವಾಗಿದೆ.

ಟೀಮ್ ಇಂಡಿಯಾ ನಾಯಕರಾಗಿರುವ ವಿರಾಟ್ ಕೊಹ್ಲಿ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಟ್ರೋಫಿ ಜಯಿಸಿಲ್ಲ. ಈ ಬಾರಿ ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಿ ಕಪ್‌ ಗೆಲ್ಲುವ ಆಸೆ ಮೂಡಿಸಿತ್ತಾದರೂ ಸನ್ ರೈಸರ್ಸ್ ಹೈದರಾಬಾದ್‌ ವಿರುದ್ಧದ ಎಲಿಮಿನೇಟರ್‌ನಲ್ಲಿ ಸೋತು ನಿರಾಸೆ ಮೂಡಿಸಿತ್ತು.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್ ಜಯ ಗಳಿಸಿದ ಬಳಿಕ ವಿರಾಟ್ ಕೊಹ್ಲಿಗೆ ಟ್ರೋಲ್ ಹಾವಳಿ ಆರಂಭವಾಗಿದೆ.

ಒಂದೇ ಚಿತ್ರದಲ್ಲಿ 5 ಟ್ರೋಫಿಗಳು

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಎಂಐ ನಾಯಕ ರೋಹಿತ್ ಶರ್ಮಾ ಜೊತೆಗಿರುವ ಚಿತ್ರ ಹಂಚಿಕೊಂಡಿರುವ ನೆಟ್ಟಿಗರೊಬ್ಬರು 'ಒಂದೇ ಚಿತ್ರದಲ್ಲಿ 5 ಐಪಿಎಲ್ ಟ್ರೋಫಿಗಳು' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಐದೂ ಟ್ರೋಫಿಗಳು ಗೆದ್ದಿದ್ದು ರೋಹಿತ್ ಆದ್ದರಿಂದ ಕೊಹ್ಲಿಯನ್ನು ಹೀಗೆ ತಮಾಷೆ ಮಾಡಿದ್ದಾರೆ.

ಆಸ್ಟ್ರೇಲಿಯಾ ಸರಣಿಯತ್ತ ರೋಹಿತ್

ಇಂಡಿಯನ್ ಪ್ರೀಮಿಯರ್ ಲೀಗ್‌ ಬಳಿಕ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಹೊರಡಲಿದೆ. ಆರಂಭದಲ್ಲಿ ತಂಡದಿಂದ ಹೊರಗಿಡಲಾಗಿದ್ದ ರೋಹಿತ್ ಈಗ ಸರಣಿಗೆ ಸೇರ್ಪಡೆಗೊಂಡಿದ್ದಾರೆ. ರೋಹಿತ್ ಅಭಿಮಾನಿಯೊಬ್ಬರು ಕೊಹ್ಲಿಗೆ ತಮಾಷೆ ಮಾಡಿ ಮಾಡಿರುವ ಟ್ವೀಟ್ ಇಲ್ಲಿದೆ.

ಅಹಂಕಾರಿಗೆ 0 ಕಪ್

ವಿರಾಟ್ ಕೊಹ್ಲಿಯ ಚಿತ್ರದ ಜೊತೆ, 'ಅಹಂಕಾರ ಮತ್ತು ದೊಡ್ಡಸ್ತಿಕೆ ಇರುವ ವ್ಯಕ್ತಿಗೆ ಸೊನ್ನೆ ಕಪ್‌' ಎಂದು ಬರೆದುಕೊಳ್ಳಲಾಗಿದೆ. ರೋಹಿತ್ ಶರ್ಮಾ ಚಿತ್ರದ ಜೊತೆ, 'ಸೊನ್ನೆ ಅಹಂಕಾರ ಮತ್ತು ದೊಡ್ಡಸ್ತಿಕೆ ಇರುವ ವ್ಯಕ್ತಿಗೆ 5 ಐಪಿಎಲ್ ಕಪ್‌ಗಳು' ಎಂದು ಬರೆದುಕೊಂಡು ರೋಹಿತ್ ಅಭಿಮಾನಿ ಮಾಡಿರುವ ಟ್ವೀಟ್.

ಇದನ್ನು ಕೊಹ್ಲಿಗೆ ಕಳುಹಿಸಬೇಡಿ

'ರೋಹಿತ್ ಶರ್ಮಾ ಭಾರತ ಟಿ20 ತಂಡಕ್ಕೆ ನಾಯಕರಾಗಲು ಬೆಸ್ಟ್ ಅನ್ನೋದರಲ್ಲಿ ಅನುಮಾನವಿಲ್ಲ. ಅವರೊಬ್ಬರು ಅದ್ಭುತ ವ್ಯಕ್ತಿ, ನಿರ್ವಾಹಕ, ನಾಯಕ. ಅವರಿಗೆ ಟಿ20 ಪಂದ್ಯ ಗೆಲ್ಲೋದು ಹೇಗೇಂತ ಗೊತ್ತು. ಟಿ20 ನಾಯಕತ್ವ ಬಿಟ್ಟುಕೊಟ್ಟು ಕೊಹ್ಲಿ ಸಾಮಾನ್ಯ ಆಟಗಾರರಂತೆ ನಿರಾಳರಾಗಿ ಆಡಲಿ' ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಮೈಕಲ್ ವಾನ್ ಟ್ವೀಟ್ ಮಾಡಿದ್ದರು' ಈ ಟ್ವೀಟನ್ನು ಕೊಹ್ಲಿಗೆ ಕಳುಹಿಸಬೇಡಿ ಎಂದು ಇಲ್ಲಿ ಟ್ರೋಲ್ ಮಾಡಲಾಗಿದೆ.

ಬಿಸಿಸಿಐಗೂ ಎಂಐಗೂ ಇರುವ ವ್ಯತ್ಯಾಸ

'ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ಹೀರೋನಂತೆ, ಪರಾಕ್ರಮಿಯಂತೆ ನೋಡುತ್ತದೆ, ಅದೇ ಬಿಸಿಸಿಐ ರೋಹಿತ್ ಅವರನ್ನು ರೋಗಿಯಂತೆ, ದುರ್ಬಲನಂತೆ ನೋಡುತ್ತದೆ' ಎಂದು ಸಿನಿಮಾದ ಚಿತ್ರ ಹಾಕಿ ಸಾಗರ್ ಎಂಬವರು ಟ್ವೀಟ್ ಮಾಡಿದ್ದಾರೆ.

Story first published: Wednesday, November 11, 2020, 19:20 [IST]
Other articles published on Nov 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+