ಐಪಿಎಲ್ 2020ಗೆ ವಿವೋ ಪ್ರಾಯೋಜಕತ್ವ ಅಮಾನತು: ಅಧಿಕೃತ ಪ್ರಕಟಣೆ ಹೊರಡಿಸಿದ ಬಿಸಿಸಿಐ

ಭಾರತ ಚೀನಾ ನಡುವಿನ ಬಿಕ್ಕಟ್ಟಿನ ಕಾರಣದಿಂದಾಗಿ ಈ ಬಾರಿಯ ಐಪಿಎಲ್‌ನ ಟೈಟಲ್ ಪ್ರಾಯೋಜತ್ವ ಹೊಂದಿದ್ದ ಚೀನಾ ಮೂಲದ ವಿವೋ ಕಂಪನಿಯೊಂದಿಗಿನ ಒಪ್ಪಂದ ರದ್ದುಗೊಳಿಸಬೇಕು ಎಂಬ ಕೂಗು ಸಾಕಷ್ಟು ಕೇಳಿ ಬಂದಿತ್ತು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಅಭಿಯಾನವೇ ನಡೆದಿತ್ತು.
ಈ ಅಭಿಯಾನಕ್ಕೆ ಈಗ ಜಯ ದೊರಕಿದ್ದು ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ. 2020ರ ಐಪಿಎಲ್ ಪ್ರಾಯೋಜಕತ್ವವನ್ನು ಅಮಾನತುಗೊಳಿಸಲಾಗಿದೆ ಎಂದು ಬಿಸಿಸಿಐ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಭಿಯಾನ ಆರಂಭವಾದ ಬೆನ್ನಲ್ಲೇ ವಿವೋ ಈ ಬಾರಿಯ ಪ್ರಾಯೋಜಕತ್ವದಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ ಇದು ಅಧಿಕೃತವಾಗಿರಲಿಲ್ಲ. ಆದರೆ ಬಿಸಿಸಿಐ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.
ಐಪಿಎಲ್ ಟೈಟಲ್ ಪ್ರಾಯೋಜಕತ್ವವಾಗಿ ಚೀನಾ ಮೂಲದ ವಿವೋ ಮೊಬೈಲ್ ಕಂಪನಿ ಬಿಸಿಸಿಐಗೆ 2199 ಕೋ.ರೂ. ನೀಡಿತ್ತು. ಬಿಸಿಸಿಐ ಮತ್ತು ವಿವೋ ಮಧ್ಯೆ ಐದು ವರ್ಷಗಳ ಒಪ್ಪಂದ ಇದಾಗಿತ್ತು. ಈ ಒಪ್ಪಂದ ಅಮಾನತಾಗುತ್ತಿರುವುದರಿಂದ ಭಾರತದ ಕ್ರಿಕೆಟ್ ಬೋರ್ಡ್‌ಗೆ ತಲೆನೋವು ಶುರುವಾಗಿದೆ.
ಲಡಾಕ್ ಸಂಘರ್ಷದ ಕಾರಣ ಭಾರತ ಸರ್ಕಾರ ಚೀನಾದ ಪ್ರಮುಖ ಆ್ಯಪ್‌ಗಳಿಗೆ ಭಾರತದಲ್ಲಿ ನಿರ್ಬಂಧ ಹೇರಿತ್ತು. ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಐಪಿಎಲ್‌ಗೆ ಪ್ರಮುಖ ಆರ್ಥಿಕ ಆಧಾರವಾಗಿದ್ದ ವಿವೋ ಪ್ರಾಯೋಜಕತ್ವವನ್ನು ಅನಿವಾರ್ಯವಾಗಿ ಮುಂದುವರೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ನಿರ್ಧರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications