Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

400 ಪ್ಲಸ್ ರನ್ ಮಳೆಯಲ್ಲಿ ಮಿಂಚಿದ ಸುಂದರ, ಕುಂಬ್ಳೆ ಸಾಲಿಗೆ ಸೇರ್ಪಡೆ

Ipl 2020: Washington Sundar joins elite list along with Anil Kumble

ದುಬೈ, ಸೆ. 29: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ 400 ಪ್ಲಸ್ ರನ್ ಮಳೆ ಹರಿದಿತ್ತು. ಮಳೆ ನಡುವೆ ಮಿಂಚಂತೆ ಕಾಣಿಸಿದ್ದು ಆರ್ ಸಿಬಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್. ಸುಂದರ್ ಅತ್ಯಂತ ಮಿತವ್ಯಯಿ ಬೌಲರ್ ಎನಿಸಿಕೊಂಡಿದ್ದಷ್ಟೇ ಅಲ್ಲದೆ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಇರುವ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಬೌಲರ್ ಗಳು ಒಂದೆಡೆ ದಂಡನೆಗೆ ಒಳಗಾಗುವ ಸಂದರ್ಭದಲ್ಲೇ ತಮಿಳುನಾಡು ಮೂಲದ ಆಫ್ ಸ್ಪಿನ್ನರ್ ಸುಂದರ್ ಅವರು ಪವರ್ ಪ್ಲೇ ಸಮಯದಲ್ಲೆ 4 ಓವರ್ ಮಾಡಿ ಕೇವಲ 12 ರನ್ನಿತ್ತಲ್ಲದೆ, ಮುಂಬೈ ನಾಯಕ ರೋಹಿತ್ ಶರ್ಮ ವಿಕೆಟ್ ಕಬಳಿಸಿದರು. ಸುಂದರ್ ಅವರ ಸ್ಪೆಲ್ ಮತ್ತೊಂದು ವಿಶೇಷವೆಂದರೆ ಒಂದೇ ಒಂದು ಬೌಂಡರಿ ಕೂಡಾ ಹೊಡೆಸಿಕೊಳ್ಳಲಿಲ್ಲ.

ತಮ್ಮ ಸ್ಪೆಲ್ ನ ಮೊದಲ ಓವರ್ ನಲ್ಲೇ ಸುಂದರ್ ಅವರು ರೋಹಿತ್ ಅವರ ವಿಕೆಟ್ ಗಳಿಸಿ ಕೇವಲ 2 ರನ್ ನೀಡಿದರು. ಎರಡನೇ ಓವರ್ ನಲ್ಲಿ ಒಂದು ರನ್ ಮಾತ್ರ ಕೊಟ್ಟರು. ಮೂರನೇ ಓವರ್ ನಲ್ಲಿ ಬಂದಿದ್ದು 4 ರನ್ ಮಾತ್ರ. ಕೊನೆ ಓವರ್ ನಲ್ಲಿ 5 ರನ್ ಮಾತ್ರ ಬಿಟ್ಟು ಕೊಟ್ಟು ಮಿತವ್ಯಯಿ ಎನಿಸಿಕೊಂಡರು.

ಕುಂಬ್ಳೆ ಸಾಲಿಗೆ ಸೇರ್ಪಡೆ
ಐಪಿಎಲ್ ಇತಿಹಾಸದಲ್ಲಿ ಉತ್ತಮ ಎಕಾನಾಮಿ ರೇಟ್ ಹೊಂದಿರುವ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಸಾಲಿಗೆ ವಾಷಿಂಗ್ಟನ್ ಸುಂದರ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಆರ್ ಸಿಬಿಯಲ್ಲಿ ಉತ್ತಮ ಎಕಾನಾಮಿ ರೇಟ್ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹೆಸರಿನಲ್ಲಿದೆ 2019ರ ಐಪಿಎಲ್ ನಲ್ಲಿ 4 ಓವರ್ ಗಳಲ್ಲಿ 6 ರನ್ನಿತ್ತು 1ವಿಕೆಟ್ ಗಳಿಸಿದ್ದರು. ಸ್ಯಾಮಿಯಲ್ ಬದ್ರಿ 4ಓವರ್ ಗಳಲ್ಲಿ 2.25 ಎಕಾನಾಮಿಯಲ್ಲಿ 4/9 ದಾಖಲಿಸಿದ್ದಾರೆ. 2017ರಲ್ಲಿ ಹ್ಯಾಟ್ರಿಕ್ ಕೂಡಾ ಗಳಿಸಿದ್ದರು. ಅನಿಲ್ ಕುಂಬ್ಳೆ 2009ರಲ್ಲಿ ಚೆನ್ನೈ ವಿರುದ್ಧ 3 ಎಕಾನಾಮಿ ರೇಟಿನಂತೆ ರನ್ ನೀಡಿದ್ದರು.

''ತಂಡಕ್ಕಾಗಿ ನಾನು ನನ್ನ ಕೊಡುಗೆ ನೀಡ್ಬೇಕು ಎಂಬುದಷ್ಟೇ ನನ್ನಗುರಿ, ಮುಂಬೈ ನಂಥ ತಂಡದೆದುರು ಇಂಥ ಪ್ರದರ್ಶನ ನೀಡಿರುವುದು ಸಂತಸ ತಂದಿದೆ. ಸೂಪರ್ ಓವರ್ ನಲ್ಲಿ ಏಕೆ ಬೌಲಿಂಗ್ ಅವಕಾಶ ಸಿಗಲಿಲ್ಲ ಎಂಬುದನ್ನು ನಾನು ಹೇಳಲಾರೆ, ತಂಡದ ನಾಯಕ ಬಯಸಿದ್ದನ್ನು ನಾನು ಮಾಡುತ್ತಿದ್ದೇನೆ, ಸೈನಿ ಉತ್ತಮ ಬೌಲಿಂಗ್ ಮೂಲಕ ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದರು'' ಎಂದು ವಾಷಿಂಗ್ಟನ್ ಸುಂದರ್ ತಮ್ಮ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Story first published: Wednesday, September 30, 2020, 10:01 [IST]
Other articles published on Sep 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+