ಐಪಿಎಲ್ 2020: ಚಾಂಪಿಯನ್ ಮುಂಬೈಗೆ ವಿಚಿತ್ರ ಸಲಹೆ ನೀಡಿದ ವಾಸಿಂ ಜಾಫರ್

ಮುಂಬೈ ಇಂಡಿಯನ್ಸ್ ಡೆಲ್ಲಿ ವಿರುದ್ಧ ಫೈನಲ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದು ಐಪಿಎಲ್ ಇತಿಹಾಸದಲ್ಲಿ ಐದು ಚಾಂಪಿಯನ್ ಪಟ್ಟಕ್ಕೇರಿ ದಾಖಲೆ ಬರೆದಿದೆ. ಕಳೆದ 8 ವರ್ಷಗಳಲ್ಲಿ ಮುಂಬೈ ಐದು ಬಾರಿ ಚಾಂಪಿಯನ್ ಎನಿಸಿದೆ. ಹೀಗಾಗಿ ಐಪಿಎಲ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.
ಐದನೇ ಬಾರಿ ಚಾಂಪಿಯನ್ ಎನಿಸಿದ ಮುಂಬೈಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಹಾಲಿ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಮುಂಬೈ ತಂಡದ ಸಾಧನೆಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಮುಂಬೈಗೆ ಅಭಿನಂದನೆ ಸಲ್ಲಿಸುತ್ತಲೇ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ.

ಒಂದೆರಡು ವರ್ಷ ವಿರಾಮ ತೆಗೆದುಕೊಳ್ಳಿ
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ವಾಸಿಂ ಜಾಫರ್ ಟ್ವೀಟ್‌ನಲ್ಲಿ "ಅಭಿನಂದನೆಗಳು ಮುಂಬೈ ಇಂಡಿಯನ್ಸ್, ಈಗ ನೀವು ಒಂದೆರಡು ವರ್ಷ ವಿರಾಮ ತೆಗದುಕೊಳ್ಳಿ. ನೀವು ಅದನ್ನು ಸಂಪಾದಿಸಿರುವಿರಿ" ಎಂದು ತಮಾಷೆಯಾಗಿ ಎಮೋಜಿಯೋದನ್ನು ಹಾಕಿ ಬರೆದುಕೊಂಡಿದ್ದಾರೆ.
ವೈರಲ್ ಆಗಿದೆ ಜಾಫರ್ ಟ್ವೀಟ್
ಮುಂಬೈ ಇಂಡಿಯನ್ಸ್ ಸತತವಾಗಿ ಟೂರ್ನಿಯಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಿರುವ ಕಾರಣದಿಂದಾಗಿ ವಾಸಿಂ ಜಾಫರ್ ಈ ರೀತಿ ಮನವಿ ಮಾಡಿಕೊಂಡಿದ್ದಾರೆ. ವಾಸಿಂ ಜಾಫರ್ ಮಾಡಿದ ಈ ಟ್ವಿಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದು ಬರುತ್ತಿದ್ದು ಟ್ವೀಟ್ ವೈರಲ್ ಆಗಿದೆ.

ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್
ವಾಸಿಂ ಜಾಫರ್ ಬ್ಯಾಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಸತತ ಐದು ಸೋಲುಗಳ ನಂತರ ಸತತ ಐದು ಗೆಲುವು ಸಂಪಾದಿಸಿ ಪ್ಲೇಆಫ್ ರೇಸ್‌ಗೆ ಬಂದಿತ್ತು. ಆದರೆ ಅಂತಿಮ ಎರಡು ಪಂದ್ಯಗಳನ್ನು ಸೋಲುವ ಮೂಲಕ ಲೀಗ್‌ಹಂತದಿಂದಲೇ ಹೊರಬಿದ್ದಿತು. ಪಂಜಾಬ್ ಈವರೆಗೂ ಒಂದು ಬಾರಿಯೂ ಚಾಂಪಿಯನ್ ಆಗದ ತಂಡವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications