ಐಪಿಎಲ್ 2020: ಋತುರಾಜ್ ಗಾಯಕ್ವಾಡ್‌ಗೆ ಎಂಎಸ್ ಧೋನಿ ಶ್ಲಾಘನೆ

ದುಬೈ: ಗುರುವಾರ (ಅಕ್ಟೋಬರ್ 29) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 49ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್ ಗೆಲುವನ್ನಾಚರಿಸಿದೆ. ತಂಡದ ಗೆಲುವಿಗೆ ಕಾರಣವಾದ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಅವರನ್ನು ನಾಯಕ ಎಂಎಸ್ ಧೋನಿ ಶ್ಲಾಘಿಸಿದ್ದಾರೆ.
ಅಬುಧಾಬಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಶುಬ್‌ಮನ್ ಗಿಲ್ 26, ನಿತೀಶ್ ರಾಣಾ 87 (61 ಎಸೆತ), ಸುನಿಲ್ ನರೈನ್ 7, ರಿಂಕು ಸಿಂಗ್ 11, ಇಯಾನ್ ಮಾರ್ಗನ್ 15, ದಿನೇಶ್ ಕಾರ್ತಿಕ್ 21 ರನ್ ಸೇರ್ಪಡೆಯೊಂದಿಗೆ ಕೆಕೆಆರ್ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಗಾಯಕ್ವಾಡ್ ಉತ್ತಮ ಬ್ಯಾಟಿಂಗ್ ನೀಡಿದ್ದರು. ಶೇನ್ ವಾಟ್ಸನ್ 14, ರುತುರಾಜ್ ಗಾಯಕ್ವಾಡ್ 72 (53 ಎಸೆತ), ಅಂಬಾಟಿ ರಾಯುಡು 38 (20 ಎಸೆತ), ಸ್ಯಾಮ್ ಕರನ್ 13, ರವೀಂದ್ರ ಜಡೇಜಾ 31 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 178 ರನ್ ಗಳಿಸಿತು.
ಪಂದ್ಯದ ಬಳಿಕ ಮಾತನಾಡಿದ ಎಂಎಸ್‌ಡಿ, 'ಟೂರ್ನಿಯ ಆರಂಭದಲ್ಲೇ ಕೋವಿಡ್-19ಗೆ ತುತ್ತಾಗಿ ಋತುರಾಜ್ ತಂಡದಿಂದ ದೂರ ಉಳಿದರು. ಚೇತರಿಸಿಕೊಳ್ಳಲು 20 ದಿನ ತೆಗೆದುಕೊಂಡರು. ಹೀಗಾಗಿ ನಮಗೆ ಅವರತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಆತನೊಬ್ಬ ಅದ್ಭುತ ಪ್ರತಿಭೆ. ಕೆಲವೊಮ್ಮೆ ಆಟಗಾರನನ್ನು ಅಳೆಯಲು ತಂಡ ನಿರ್ವಹಣಾ ಸಮಿತಿಗೆ ಕಷ್ಟವಾಗುತ್ತದೆ,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications