Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾಯಕ ವಿರಾಟ್ ಆಡಿದ ಮಾತಿಗೆ ಆರ್‌ಸಿಬಿ ತಂಡದಲ್ಲಿ ಸ್ಪೂರ್ತಿಯ ಸಂಚಲನ

IPL 2020: ‘We’ll have more fun next week than we’ve had in last couple of months says Virat Kohli

ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಹೆಚ್ಚಾಗಿ ನಿರಾಶೆಯನ್ನೇ ಕಂಡ ತಂಡ. ಅದ್ಭುತ ಆಟಗಾರರನ್ನು ಹೊಂದಿದ ಹೊರತಾಗಿಯೂ ಈವರೆಗೆ ಒಂದೇ ಒಂದು ಬಾರಿ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರಲ್ಲೂ ಕಳೆದ ಮೂರು ಆವೃತ್ತಿಗಳಲ್ಲಿ ಆರ್‌ಸಿಬಿ ಪ್ಲೇ ಆಫ್ ಹಂತಕ್ಕೂ ಪ್ರವೇಶ ಗಿಟ್ಟಿಸಲು ವಿಫಲವಾಗಿತ್ತು. ಆದರೆ ಈ ಬಾರಿ ತಂಡದಲ್ಲಿ ಅದೇನೋ ಹೊಸ ರೀತಿಯ ಸಂಚಲನ. ಅಲ್ಲಲ್ಲಿ ಕೆಲ ಸೊಲುಗಳ ಮಧ್ಯೆಯೂ ಹೆಚ್ಚಾಗಿ ಗೆಲುವುಗಳನ್ನೇ ಕಾಣುತ್ತಾ ಟೂರ್ನಿಯ ಅಂತಮ ಹಂತಕ್ಕೆ ತಲುಪಿತ್ತು.

ಇನ್ನೇನು ಸುಲಭವಾಗಿ ಪ್ಲೇ ಆಫ್ ಹಂತಕ್ಕೆ ತಲುಪಿಬಿಡಲಿದೆ ಎಂದು ಅಂದುಕೊಂಡಾಗಲೇ ಆರ್‌ಸಿಬಿಗೆ ಸೋಲಿನ ಸರಪಳಿ ಮತ್ತೆ ಸುತ್ತಿಕೊಳ್ಳಲು ಆರಂಭಿಸಿತು. ಪ್ಲೇಆಫ್‌ಗೆ ಒಂದು ಗೆಲವು ಸಾಧಿಸಿ ಟಿಕೆಟ್ ಖಚಿತ ಪಡಿಸಿಕೊಳ್ಳುವ ಅವಕಾಶವಿತ್ತು. ಮುಂದೆ ನಾಲ್ಕು ಪಂದ್ಯಗಳಿದ್ದವು. ಆದರೆ ಆರ್‌ಸಿಬಿ ಪಾಲಿಗೆ ಗೆಲುವು ಮರೀಚಿಕೆಯಾಗಿಯೇ ಉಳಿಯಿತು. ಲೀಗ್ ಹಂತದಲ್ಲಿ ಕೊನೆಯಲ್ಲಿ ತನ್ನ ಮುಂದಿದ್ದ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೂ ಆರ್‌ಸಿಬಿ ಅದೃಷ್ಠ ಚೆನ್ನಾಗಿತ್ತು. ಸೋತರೂ ಆರ್‌ಸಿಬಿ ಪ್ಲೇಆಫ್‌ಗೆ ಟಿಕೆಟ್ ಪಡೆದು ನಿಟ್ಟುಸಿರು ಬಿಡುವಂತಾಯಿತು.

ಈ ಸೋಲುಗಳು ಆರ್‌ಸಿಬಿ ತಂಡದ ಸದಸ್ಯರನ್ನು ಆಘಾತಗೊಳ್ಳಯವಂತೆ ಮಾಡಿದೆ. ಆದರೆ ನಾಯಕ ವಿರಾಟ್ ಕೊಹ್ಲಿ ತಂಡದ ಆಟಗಾರರಲ್ಲಿ ಸ್ಪೂರ್ತಿಯ ಮಾತುಗಳನ್ನಾಡುವ ಮೂಲಕ ಉತ್ಸಾಹ ತುಂಬಿದ್ದಾರೆ. ಆರ್‌ಸಿಬಿ ಖಂಡಿತಾ ಈ ಬಾರಿ ಐಪಿಎಲ್ ಟ್ರೋಫಿ ಗೆದ್ದೇ ಗೆಲ್ಲಲಿದೆ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾರೆ. ಈ ಮಾತುಗಳು ತಂಡದಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.

"ನಾವೆಲ್ಲಾ ಒಂದೇ ರೀತಿಯ ಮನೋಭಾವವನ್ನು ಹೊಂದಿರಬೇಕು ಎಂದು ನಾನು ಬಯಸುತ್ತೇನೆ. ನಾನು ನಿಮೆ ಭರವಸೆಯ್ನು ನೀಡುತ್ತೇನೆ, ಕಳೆದ ಎರಡು ಎರಡೂವರೆ ತಿಂಗಳಿನಲ್ಲಿ ನಾವು ಅನುಭವಿಸಿದ್ದಕ್ಕಿಂತ ಹೆಚ್ಚಿನ ಸಂಭ್ರಮವನ್ನು ಮುಂದಿನ ವಾರದಲ್ಲಿ ಅನುಭವಿಸಲಿದ್ದೇವೆ. ನಾವೇಲ್ಲಾ ಒಂದೇ ಮನಸ್ಥಿತಿಯನ್ನು ಹೊಂದಿರಬೇಕು. ನನಗೆ ಗೊತ್ತಿದೆ ನಾವು ಅಲ್ಲಿಗೆ ತಲುಪಿಯೇ ತೀರುತ್ತೇವೆ" ಎಂದು ನಾಯಕ ವಿರಾಟ್ ಕೊಹ್ಲಿ ಭರವಸೆಯ ಮಾತುಗಳನ್ನು ಮಾಡಿದ್ದಾರೆ.

ತಂಡದ ಮಾತುಕತೆಯ ವಿಡಿಯೋವನ್ನು ಆರ್‌ಸಿಬಿ ತನ್ನ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ನಾಯಕ ವಿರಾಟ್ ಕೊಹ್ಲಿ ಸಹ ಆಟಗಾರರಿಗೆ ಉತ್ಸಾಹದ ಮಾತುಗಳನ್ನು ಆಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಆಡಿದ ಮಾತುಗಳಿಂದ ಆರ್‌ಸಿಬಿ ಪಾಳಯ ಮತ್ತಷ್ಟು ಹುರುಪು ಪಡೆದುಕೊಂಡಿದೆ.

Story first published: Wednesday, November 4, 2020, 23:40 [IST]
Other articles published on Nov 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+