For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ನಾವು ಪವರ್‌ಪ್ಲೇನಲ್ಲೇ ಪಂದ್ಯವನ್ನು ಕಳೆದುಕೊಂಡಿದ್ದೆವು: ಶ್ರೇಯಸ್ ಐಯ್ಯರ್

IPL 2020: We lost the game in powerplay itself, says DC captain Shreyas Iyer

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೀನಾಯ ಸೋಲನ್ನು ಕಂಡಿದೆ. 88 ರನ್‌ಗಳ ಬೃಹತ್ ಅಂತರದಿಂದ ಸೋಲು ಕಂಡಿರುವ ಬಗ್ಗೆ ನಾಯಕ ಶ್ರೇಯಸ್ ಐಯ್ಯರ್ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಪವರ್‌ಪ್ಲೇ ಹಂತದಲ್ಲಿದ್ದಾಗಲೇ ನಾವು ಪಂದ್ಯವನ್ನು ಕಳೆದುಕೊಂಡಾಗಿತ್ತು ಎಂದು ಐಯ್ಯರ್ ಪಂದ್ಯದ ಮುಕ್ತಾಯದ ಪ್ರತಿಕ್ರಿಯಿಸಿದ್ದಾರೆ.

ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ಶ್ರೇಯಸ್ ಐಯ್ಯರ್ ಈ ಪಿಚ್‌ನಲ್ಲಿ ಎರಡನೇ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಬಹುದು ಎಂದು ಭಾವಿಸಿ ಎದುರಾಳಿಯನ್ನು ಕಣಕ್ಕಿಳಿಸಿದರು. ಆದರೆ ಪವರ್‌ಪ್ಲೇನಲ್ಲಿ ಹೈದರಾಬಾದ್ ತಂಡದ ಆರಂಭಿಕರಾದ ವಾರ್ನರ್ ಹಾಗೂ ಸಾಹಾ ಸ್ಪೋಟಕ ಆಟವನ್ನು ಪ್ರದರ್ಶಿಸಿ ಡೆಲ್ಲಿ ನಾಯಕನ ತೀರ್ಮಾನವನವನ್ನು ತಲೆಕೆಳಗಾಗುವಂತೆ ಮಾಡಿದರು.

"ಇದು ನಮಗೆ ನಿಜಕ್ಕೂ ದೊಡ್ಡ ಸೋಲು. ಆದರೆ ಈ ಹಂತದಲ್ಲಿ ನಾವು ಸ್ಥೈರ್ಯ ಕಳೆದುಕೊಳ್ಳುವುದಿಲ್ಲ. ನಾವು ಇನ್ನೂ ಎರಡು ಪಂದ್ಯಗಳನ್ನು ಹೊಂದಿದ್ದೇವೆ. ಆದರೆ ಒಂದು ಗೆಲುವು ನಮಗೆ ತುಂಬಾ ನಿರ್ಣಾಯಕವಾಗಿದೆ. ಆ ಗೆಲುವಿಗಾಗಿ ಕಳೆದ ಮೂರು ಪಂದ್ಯಗಳಿಂದ ನಾವು ಕಾದಿದ್ದೇವೆ. ಸತತ ಸೋಲುಗಳು ಖಂಡಿತಾ ನಮ್ಮನ್ನು ಒತ್ತಡಕ್ಕೀಡು ಮಾಡಿದೆ" ಎಂದು ಶ್ರೇಯಸ್ ಐಯ್ಯರ್ ಪ್ರತಿಕ್ರಿಯಿಸಿದ್ದಾರೆ.

ನಮ್ಮ ತಂಡದ ಹುಡುಗರು ಧೈರ್ಯದಿಂದಿದ್ದಾರೆ. ನಿಜಕ್ಕೂ ಸ್ಪೂರ್ತಿಯನ್ನು ಹೊಂದಿದ್ದಾರೆ. ಈ ಸೋಲು ಕೂಡ ನಮ್ಮನ್ನೂ ಸ್ಪೂರ್ತಿಗೊಳಿಸುತ್ತದೆ. ನಾವು ಪವರ್‌ಪ್ಲೇ ಹಂತದಲ್ಲೇ ಪಂದ್ಯವನ್ನು ಕಳೆದುಕೊಂಡಿದ್ದೆವು. ಮೊದಲ ಆರು ಓವರ್‌ಗಳಲ್ಲಿ 70 ರನ್ ಗಳಿಸುವುದು ನಿಜಕ್ಕೂ ಆ ತಂಡಕ್ಕೆ ಶಕ್ತಿ ನೀಡುತ್ತದೆ. ಬಳಿಕ ಬೌಲಿಂಗ್‌ನಲ್ಲೂ ಅವರು ನೀಡಿದ ಪ್ರದರ್ಶನ ಶ್ರೇಷ್ಠವಾಗಿತ್ತು ಎಂದು ಐಯ್ಯರ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಈ ಸೋಲಿನ ಮೂಲಕ ಅಂಕಪಟ್ಟಿಯಲ್ಲಿ ಮತ್ತೊಂದು ಸ್ಥಾನವನ್ನು ಕಳೆದುಕೊಂಡಿದೆ. ಅಗ್ರಸ್ಥಾನದಲ್ಲಿದ್ದ ಡೆಲ್ಲಿ ಎರಡನೇ ಸ್ಥಾನಕ್ಕೆ ಇಳಿದಿತ್ತು. ಹೈದರಾಬಾದ್ ವಿರುದ್ದದ ಪಂದ್ಯದ ಸೋಲಿನ ಬಳಿಕ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. 12 ಪಂದ್ಯಗಳಲ್ಲಿ ಡೆಲ್ಲಿ ತಂಡದ 5ನೇ ಸೋಲು ಇದಾಗಿದ್ದು ಸತತ ಮೂರನೇ ಸೋಲಾಗಿದೆ.

Story first published: Wednesday, October 28, 2020, 9:48 [IST]
Other articles published on Oct 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+