For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಟೂರ್ನಿಯ ದ್ವಿತೀಯಾರ್ಧ ಇನ್ನಷ್ಟು ಕಠಿಣವಾಗಿರಲಿದೆ ಎಂದ ಡೆಲ್ಲಿ ಬೌಲರ್

IPL 2020: we wont relax says Delhi Capitals Bowler Harshal Patel

ಐಪಿಎಲ್‌ನಲ್ಲಿ ಈವರೆಗೆ ನಡೆದ ಪಂದ್ಯಗಳು ಸಾಕಷ್ಟು ರೋಚಕತೆಯಿಂದ ಕೂಡಿದೆ. ಅಂಕಪಟ್ಟಿಯಲ್ಲಿ ಪ್ರತಿ ತಂಡಗಳು ಸಾಕಷ್ಟು ಏಳಿರಿತವನ್ನು ಕಾಣಿತ್ತಿರುವುದು ಈ ಬಾರಿಯ ಟೂರ್ನಿ ಎಷ್ಟು ಕಠಿಣ ಸ್ಪರ್ಧೆಯನ್ನು ಹೊಂದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆದರೆ ಎಲ್ಲ ತಂಡಗಳಿಗಿಂತಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಡಿರುವ ಐದು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಸೋತಿರುವುದು ತಂಡದ ಪಾಲಿಗೆ ನಿರಾಳತೆಯನ್ನು ನೀಡಿದೆ.

ಆದರೆ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರೂ ನಿರಾಳ ಭಾವನೆಯನ್ನು ಹೊಂದಿಲ್ಲ ಎಂದು ಡೆಲ್ಲಿ ತಂಡದ ಬೌಲರ್ ಹರ್ಷಲ್ ಪಟೇಲ್ ಹೇಳಿದ್ದಾರೆ. ಅದ್ಭುತ ಪ್ರದರ್ಶನದ ನಂತರವೂ ತಂಡದಲ್ಲಿ ಸುಧಾರಣೆಗೆ ಎಲ್ಲಿ ಅವಕಾಶವಿದೆ ಎಂಬುದರತ್ತ ತಂಡ ದೃಷ್ಠಿ ನೆಟ್ಟಿದೆ ಎಂದು ಹರ್ಷಲ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

"ನಾವು ಇನ್ನಷ್ಟು ಉತ್ತಮ ಪ್ರದರ್ಶನವನ್ನು ಯಾವ ರೀತಿಯಾಗಿ ನೀಡಬಹುದು ಎಂಬ ಬಗ್ಗೆ ಚರ್ಚೆಯನ್ನು ನಡೆಸುತ್ತೇವೆ. ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ಹೊರತಾಗಿಯೂ ನಮ್ಮ ಚರ್ಚೆಗಳು ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆಯೇ ಇರುತ್ತದೆ" ಎಂದಿದ್ದಾರೆ ಹರ್ಷಲ್ ಪಟೇಲ್.

"ಟೂರ್ನಮೆಂಟ್ ಮುಂದುವರಿಯುತ್ತಿರುವಂತೆಯೇ ನಮ್ಮ ಪ್ರದರ್ಶನದಲ್ಲಿ ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದನ್ನು ಬಯಸುತ್ತಿದ್ದೇವೆ. ಐಪಿಎಲ್ ಬಗ್ಗೆ ತಿಳಿದಿರುವ ಎಲ್ಲರೂ ದ್ವಿತಿಯಾರ್ಧ ಎಷ್ಟು ಕಠಿಣವಾಗಿರುತ್ತದೆ ಎಂಬ ಅರಿವನ್ನು ಹೊಂದಿದ್ದಾರೆ. ಹಾಗಾಗಿ ನಾವು ಸಂತೃಪ್ತತೆಯನ್ನು ಹೊಂದುತ್ತಿಲ್ಲ. ಹಾಗೂ ನಿರಾಳರಾಗಲು ಬಯಸುತ್ತಿಲ್ಲ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆಡಲಿದೆ. ಶಾರ್ಜಾದಲ್ಲಿ ರಾಜಸ್ಥಾನ್ ರಾಯಲ್ಸ್ ಆಡಿರುವ ಎರಡು ಪಂದ್ಯದಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ಗೆದ್ದಿರುವ ಹಿನ್ನೆಲೆಯಿದೆ. ಆದರೆ ಡೆಲ್ಲಿ ತಂಡವೂ ಶಾರ್ಜಾ ಕ್ರೀಡಾಂಗಣದಲ್ಲಿ ಆಡಿದ ಏಕೈಕ ಪಂದ್ಯದಲ್ಲಿ ಗೆಲುವನ್ನು ಕಂಡಿದೆ.

Story first published: Friday, October 9, 2020, 10:14 [IST]
Other articles published on Oct 9, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+