ಕ್ರಿಸ್ ಗೇಲ್ ಕ್ರೀಸ್‌ನಲ್ಲಿರುವರೆಗೂ ಗೆಲ್ಲುವ ಅವಕಾಶವಿರುತ್ತದೆ: ನಿಕೋಲಸ್ ಪೂರನ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವನ್ನು ಕಾಣಲು ಯಶಸ್ವಿಯಾಗುವ ಮೂಲಕ ಟೂರ್ನಿಯಲ್ಲಿ ಎರಡನೇ ವಿಜಯ ದಾಖಲಿಸಿದೆ. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯ ಅಂತಿಮ ಓವರ್‌ನಲ್ಲಿ ಅನಿರೀಕ್ಷಿತ ತಿರುವು ಪಡೆದು ಅಂತಿಮ ಎಸೆತದಲ್ಲಿ ಒಂದು ರನ್ ಪಡೆಯಬೇಕಾದ ಅನಿವಾರ್ಯತೆಯಲ್ಲಿತ್ತು ಕಿಂಗ್ಸ್. ಕ್ರೀಸ್‌ಗೆ ಬಂದ ನಿಕೋಲಸ್ ಪೂರನ್ ಆ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಗೆಲುವನ್ನು ಖಾತ್ರಿಪಡಿಸಿದರು.
ಈ ಗೆಲುವಿನ ಬಳಿಕ ನಿಕೋಲಸ್ ಪೂರನ್ ಮಾತನಾಡಿ, ತಂಡದ ಪ್ರಮುಖ ಆಟಗಾರನ ಬಗ್ಗೆ ಹೊಗಳಿಕೆಯ ಸುರಿಮಳೆಗೈದರು. ಕಿಂಗ್ಸ್ ಇಲೆವೆನ್ ತಂಡದ ಬ್ಯಾಟ್ಸ್‌ಮನ್, ವೆಸ್ಟ್ ಇಂಡೀಸ್‌ನ ಸಹ ಆಟಗಾರನಾಗಿದ್ದ ಕ್ರಿಸ್ ಗೇಲ್ ಬಗ್ಗೆ ಪೂರನ್ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಕ್ರೀಸ್ ಗೇಲ್ ಕ್ರೀಸ್‌ನಲ್ಲಿ ಇರುವವರೆಗೆ ತಂಡಕ್ಕೆ ಗೆಲ್ಲುವ ಒಂದು ಅವಕಾಶ ಇದ್ದೇ ಇರುತ್ತದೆ ಎಂದು ಪೂರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಂದ್ಯದ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಪೂರನ್ "ಟಿ20 ಕ್ರಿಕೆಟ್ ಆಡಿದ ಆಗಾರರ ಪೈಕಿ ನನಗೆ ಸರ್ವ ಶ್ರೇಷ್ಠ ಆಟಗಾರ ಅಂದರೆ ಅದು ಕ್ರಿಸ್ ಗೇಲ್. ಅವರು ತಂಡದಲ್ಲಿದ್ದರೇ ವಿಶೇಷವಾದ ಭಾವ ಮೂಡಿಸುತ್ತದೆ' ಎಂದು ಪೂರನ್ ಗೇಲ್ ಬಗ್ಗೆ ಹೇಳಿಕೆಯನ್ನು ನೀಡಿದರು.
"ಅವರು ನಿಧಾನವಾಗಿ ಆರಂಭವನ್ನು ಮಾಡಿದರು. ಆದರೆ ಅವರು ಸುದೀರ್ಘ ಕಾಲದಿಂದ ಕ್ರಿಕೆಟ್ ಆಡಿಲ್ಲ. ಆದರೆ ಅವರು ಯಾಕೆ ಶ್ರೇಷ್ಠ ಆಟಗಾರ ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾರೆ. ಅವರು ರನ್ ಗಳಿಸುವುದನ್ನು ನೋಡುವುದೇ ಆನಂದ ಎಂದು ನಿಕೋಲಸ್ ಪೂರನ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications