ಚೆನ್ನೈ ವಿರುದ್ಧ ಅರ್ಧ ಶತಕ ಚಚ್ಚಿದ ಪ್ರಿಯಂ ಗರ್ಗ್, ಯಾರೀ ಟೀನೇಜರ್?

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 2) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಪರ ಅರ್ಧ ಶತಕ ಚಚ್ಚಿದ್ದ ಪ್ರಿಯಂ ಗರ್ಗ್ ಎಲ್ಲರ ಗಮನ ಸೆಳೆದಿದ್ದರು.
5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಪ್ರಿಯಂ ಗರ್ಗ್‌ಗೀಗ 19ರ ಹರೆಯ. ಆದರೆ ಬ್ಯಾಟಿಂಗ್ ವೇಳೆ ಪ್ರೌಢ ಆಟ ಪ್ರದರ್ಶಿಸಿದ್ದಾರೆ. 26 ಎಸೆತಗಳನ್ನು ಎದುರಿಸಿದ ಗರ್ಗ್ ಅಜೇಯ 51 ರನ್ ಬಾರಿಸಿದರು. ಇನ್ನೊಬ್ಬ ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಕೂಡ 31 ರನ್ ಸೇರಿಸಿದರು.
ಗರ್ಗ್ ಮತ್ತು ಅಭಿಷೇಕ್ ಇಬ್ಬರ ಬ್ಯಾಟಿಂಗ್‌ನಿಂದಲೇ ಹೈದರಾಬಾದ್ ತಂಡ 164 ರನ್ ಕಲೆ ಹಾಕಿತು. ಎಸ್‌ಆರ್‌ಎಚ್ ರನ್ ಹೆಚ್ಚಳಕ್ಕೆ ಕಾರಣರಾದ ಗರ್ಗ್ ಅಂಡರ್-19 ತಂಡದ ನಾಯಕರಾಗಿದ್ದವರು. ಇದೇ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಬಲಗೈ ಬ್ಯಾಟ್ಸ್‌ಮನ್ ಆಗಿರುವ ಗರ್ಗ್ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು.
ಉತ್ತರಪ್ರದೇಶದ ಮೀರತ್‌ನವರಾದ ಪ್ರಿಯಂ ಗರ್ಗ್ ನಾಯಕತ್ವದ ಭಾರತ ತಂಡ ಅಂಡರ್ 19 ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಭಾರತ, ಬಾಂಗ್ಲಾದೇಶ ಅಂಡರ್ 19 ವಿರುದ್ಧ 3 ವಿಕೆಟ್ ಸೋಲು (ಡಕ್ವರ್ಥ್ ಲೂಯಿಸ್ ನಿಯಮ) ಕಂಡಿತು. ಗರ್ಗ್ ಅವರು ಉತ್ತರ ಪ್ರದೇಶ, ಗ್ರೀನ್ ಎ, ಇಂಡಿಯಾ 'ಸಿ' ತಂಡಗಳಿಗೂ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications