ಅಲಿ ಖಾನ್ ಬದಲಿಗೆ ಕೆಕೆಆರ್ ಸೇರಲಿದ್ದಾರೆ ನ್ಯೂಜಿಲೆಂಡ್ ಬ್ಯಾಟ್ಸ್ ಮನ್?

ಕೋಲ್ಕತ್ತಾ ನೈಟ್ ರೈಡರ್ಸ್‌ನ ವೇಗಿ ಅಲಿ ಖಾನ್ ಇಂಡಿಯನ್ ಪ್ರೀಮಿಯರ್ ಲೀಗ್ 2020ರಿಂದ ಹೊರ ಬಿದ್ದಿದ್ದಾರೆ. ಪಾಕಿಸ್ತಾನ ಮೂಲದ ಅಲಿ ಖಾನ್ ಅವರು ಅಮೆರಿಕದಲ್ಲಿ ನೆಲಿಸಿದ್ದು, ಐಪಿಎಲ್ ಆಡಲು ಆಯ್ಕೆಯಾದ ಮೊದಲ ಅಮೆರಿಕನ್ ಕ್ರಿಕೆಟರ್ ಎನಿಸೊಂಡಿದ್ದರು. ಆದರೆ, ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.
ಗಾಯಕ್ಕೀಡಾಗಿರುವ ಅಲಿ ಖಾನ್ ಟೂರ್ನಿಯಿಂದ ಹೊರಗುಳಿದ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇದೀಗ ಬದಲಿ ಆಟಗಾರರೊಬ್ಬರನ್ನು ಹೆಸರಿಸಿದೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಇಂಗ್ಲೆಂಡ್ ಕ್ರಿಕೆಟರ್ ಹ್ಯಾರಿ ಗರ್ನಿ ಅವರು ಗಾಯಕ್ಕೀಡಾಗಿದ್ದರಿಂದ ಅಲಿ ಖಾನ್ ಅವರನ್ನು ತಂಡಕ್ಕೆ ಕರೆತರಲಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಹ ಫ್ರಾಂಚೈಸಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಆಲಿ ಖಾನ್ ಅವರನ್ನು ಕೆಕೆಆರ್ ತಂಡದಲ್ಲಿ ಸ್ಥಾನ ಸಿಕ್ಕಿತ್ತು.
ಅಕ್ಟೋಬರ್ 7ರ ಬುಧವಾರ ಅಬುಧಾಬಿಯ ಶೈಕ್ ಜಾಯೆದ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುವುದಕ್ಕೂ ಮುನ್ನವೇ ಅಲಿ ಖಾನ್ ಟೂರ್ನಿಯಿಂದ ಹೊರ ಬಿದ್ದಿರುವ ವಿಚಾರ ಕೇಳಿ ಬಂದಿತ್ತು.
ಯಾರು ಬದಲಿ ಆಟಗಾರ:
ಅಲಿ ಖಾನ್ ಬದಲಿಗೆ ಟಿ20 ಸ್ಪೆಷಲಿಸ್ಟ್ ಎಂದೆನಿಸಿರುವ ನ್ಯೂಜಿಲೆಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಟಿಮ್ ಸೈಫರ್ಟ್ ರನ್ನು ಬದಲಿ ಆಟಗಾರನಾಗಿ ಕೆಕೆಆರ್ ಹೆಸರಿಸಿದೆ. ನ್ಯೂಜಿಲೆಂಡ್ ಪರ 24 ಟಿ20ಐ ಹಾಗೂ 3 ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ್ದಾರೆ. ಆಲಿ ಖಾನ್ ಜೊತೆ ಟಿಕೆಆರ್ ತಂಡದಲ್ಲಿದ್ದ ಟಿಮ್ ಸಿಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications