Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2021ರಲ್ಲೂ ರಾಯಲ್ ಚಾಲೆಂಜರ್ಸ್‌ನಲ್ಲಿ ಎಬಿ ಡಿ ವಿಲಿಯರ್ಸ್ ಆಡ್ತಾರಾ?

IPL 2020: Will AB de Villiers Play For RCB in IPL 2021?

ಬೆಂಗಳೂರು: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ ಸೀಸನ್‌ ಮುಕ್ತಾಯ ಹಂತಕ್ಕೆ ಬರುತ್ತಿದೆ. ನವೆಂಬರ್ 10ರಂದು ಐಪಿಎಲ್ 13ನೇ ಆವೃತ್ತಿಯ ಫೈನಲ್‌ ಪಂದ್ಯ ನಡೆಯಲಿದೆ. ಈ ಸಾರಿ ಪ್ಲೇ ಆಫ್‌ಗೆ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲುವ ಆಸೆ ಮೂಡಿಸಿತ್ತು. ಆದರೆ ಎಲಿಮಿನೇಟರ್‌ನಲ್ಲಿ ಸೋತು ಆಸೆ ನಿರಾಸೆಗೊಂಡಿದೆ.

ಈ ಸಲ ಕಪ್‌ ನಮ್ದೇ, ಈ ಸಲ ಕಪ್‌ ನಮ್ದೇ ಅನ್ನೋ ಘೋಷವಾಕ್ಯ ಈಗ 'ಮುಂದಿನ ಸಲ ಕಪ್‌ ನಮ್ದೇ' ಅನ್ನೋದಕ್ಕೆ ಬದಲಾಗಿದೆ. ನಮ್ಮ ಬೆಂಗಳೂರು ತಂಡ ಗೆಲ್ಲಬೇಕಾದರೆ ತಂಡ ಇನ್ನಷ್ಟು ಬಲಗೊಳ್ಳಬೇಕು. ಲೆಕ್ಕಾಚಾರದ ಆಟ ಆಡೋದನ್ನು ಕಲಿಯಬೇಕು. ದಿಟ್ಟ ಆಟ ನೀಡುವತ್ತ ಆಟಗಾರರು ವಿಶ್ವಾಸ ಹೆಚ್ಚಿಸಿಕೊಳ್ಳಬೇಕು.

ಈ ಸಾರಿಯ ಆವೃತ್ತಿಯಲ್ಲಿ ಅರ್‌ಸಿಬಿ ಆಪಾತ್ಭಾಂಧವ ಎಬಿ ಡಿ ವಿಲಿಯರ್ಸ್ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. 14 ಇನ್ನಿಂಗ್ಸ್‌ಗಳಲ್ಲಿ 45.40ರ ಸರಾಸರಿಯಂತೆ 454 ರನ್ ಕಲೆ ಹಾಕಿದ್ದರು. ಆರ್‌ಸಿಬಿಗೆ ಈ ಬಾರಿ ಬಲ ತುಂಬಿದ್ದ ಎಬಿಡಿ ಮುಂದಿನ ಆವೃತ್ತಿಯಲ್ಲೂ ಆರ್‌ಸಿಬಿಗಾಗಿ ಆಡ್ತಾರಾ?

ಖಂಡಿತಾ ಆಡ್ತಾರೆ. ಆರ್‌ಸಿಬಿ ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಳ್ಳಲು ಆದ್ಯತೆ ನೀಡುವ ಆಟಗಾರರೆಂದರೆ ಅದು ನಾಯಕ ವಿರಾಟ್ ಕೊಹ್ಲಿ ಮತ್ತು ಮಿ. 360 ಡಿಗ್ರೀ ಖ್ಯಾತಿಯ ಎಬಿಡಿ. ಅದು ಬಿಟ್ಟರೆ ಯುಜುವೇಂದ್ರ ಚಾಹಲ್ ಕೂಡ ಉಳಿಸಿಕೊಳ್ಳಲು ಆರ್‌ಸಿಬಿ ಎದುರು ನೋಡುತ್ತಿರುತ್ತದೆ. ಹೀಗಾಗಿ ಮುಂದಿನ ಐಪಿಎಲ್‌ನಲ್ಲೂ ಎಬಿಡಿ ಆರ್‌ಸಿಬಿ ಪರ ಮೈದಾನಕ್ಕಿಳಿಯೋದು ಬಹುತೇಕ ಖಚಿತವೆ.

Story first published: Saturday, November 7, 2020, 18:23 [IST]
Other articles published on Nov 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+