Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರಂಭಿಕನಾಗಿ ಕಣಕ್ಕಿಳಿಯುತ್ತಾರಾ ಕೊಹ್ಲಿ?: ಆರ್‌ಸಿಬಿ ಫ್ರಾಂಚೈಸಿಯಿಂದ ಸ್ಪಷ್ಟನೆ

Ipl 2020: Will Virat Kohli Open For Rcb?

ಆರ್‌ಸಿಬಿ ತಂಡ ತನ್ನ ಮೊದಲ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಈಗಾಲೇ ದುಬೈಗೆ ಬಂದಿಳಿದು ಒಂದು ವಾರವಾಗಿದ್ದು ಕ್ವಾರಂಟೈನ್ ಅವಧಿ ಪೂರ್ಣವಾಗಿರುವ ಕಾರಣ ಆಟಗಾರರು ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ ಆರ್‌ಸಿಬಿ ತಂಡದ ಪ್ರಮುಖ ನಿರ್ಧಾರದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಸುದ್ದಿಯೊಂದು ಹರಿದಾಡಿತ್ತು.

ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಮೂರನೇ ಕ್ರಮಾಂಕವನ್ನು ಬಿಟ್ಟು ಆರಂಭಿಕನಾಗಿ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಗುರುವಾರದಿಂದ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಸುದ್ದಿಯ ಕುರಿಯಾಗಿ ಆರ್‌ಸಿಬಿ ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಮೈಕ್ ಹೆಸ್ಸನ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಈ ಸಾಧ್ಯತೆಗಳ ಬಗ್ಗೆ ಮಾತಾಡಿರುವ ಮೈಕ್ ಹೆಸ್ಸನ್ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದಿದ್ದಾರೆ. 'ನಾನು ನಿನ್ನೆ ಕೆಲ ಸಮಯಗಳ ಕಾಲ ಮಾಧ್ಯಮಗಳ ಜೊತೆ ಸಂವಾದವನ್ನು ನಡೆಸಿದ್ದೆ. ಆದರೆ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಬಗ್ಗೆ ನಾನು ಯಾವುದೇ ಮಾತುಗಳನ್ನು ಆಡಿಲ್ಲ. ಹಾಗಿದ್ದರೂ ನಾನು ಹಾಗೆ ಹೇಳಿರುವ ರೀತಿಯಲ್ಲಿ ಸುದ್ದಿಗಳು ಹರಿದಾಡುತ್ತಿದೆ. ಆದರೆ ತಂಡದಲ್ಲಿ ಆ ರೀತಿಯ ಚರ್ಚೆಗಳು ಆಗಿಲ್ಲ' ಎಂದು ಮೈಕ್ ಹೆಸ್ಸನ್ ಹೇಳಿದ್ದಾರೆ.

ಕೋಚಿಂಗ್ ದೃಷ್ಟಿಕೋನದಿಂದ ಹೇಳುವುದಾದರೆ ನಮ್ಮ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ತಂಡದ ಘೋಷಣೆಯವರೆಗೂ ಅಧಿಕೃತವಾಗಿ ಯಾವುದೇ ಸಂಗತಿಗಳನ್ನು ನಾವು ಬಹಿರಂಗಪಡಿಸುವಂತಿಲ್ಲ. ಯಾಕೆಂದರೆ ಅದು ನಮ್ಮ ತಂಡದ ರಣತಂತ್ರದ ಭಾಗವಾಗಿರುತ್ತದೆ. ನಮ್ಮ ಅಗತ್ಯಗಳ ಬಗ್ಗೆ ನಮಗೆ ಅರಿವಿರುತ್ತದೆ. ಅದರ ಜೊತೆಗೆ ಎದುರಾಳಿ ನಮ್ಮ ಯೋಜನೆಯ ಬಗ್ಗೆ ಊಹಿಸುವುದನ್ನೂ ನಾವು ಬಯಸುತ್ತೇವೆ ಎಂದು ಮೈಕ್ ಹೇಳಿದ್ದಾರೆ.

ಈ ಬಾರಿ ಆರ್‌ಸಿಬಿ ತಂಡದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಆರೋನ್ ಫಿಂಚ್ ಸೇರಿಕೊಂಡಿದ್ದರೆ ಕ್ರಿಸ್ ಮೋರಿಸ್ ಹಾಗೂ ಡೇಲ್ ಸ್ಟೇನ್ ಬೌಲಿಂಗ್ ವಿಭಾಗದ ಅಸ್ತ್ರಗಳಾಗಿದ್ದಾರೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಹೊಸ ಭರವಸೆಯೊಂದಿಗೆ ಟೂರ್ನಿಗಾಗಿ ಕಾಯುತ್ತಿದ್ದಾರೆ.

Story first published: Friday, August 28, 2020, 21:28 [IST]
Other articles published on Aug 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+