For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಏಪ್ರಿಲ್ 11ರಿಂದ ಮಹತ್ವದ ಟೂರ್ನಿ ಆರಂಭ ಸಾಧ್ಯತೆ

IPL 2021: 14th edition of IPL all set to begin on 11th April

ಐಪಿಎಲ್ 14ನೇ ಆವೃತ್ತಿಯ ಬಗ್ಗೆ ಕುತೂಹಲಗಳು ಗರಿಗೆದರುತ್ತಿದೆ. ಕಳೆದ ನವೆಂಬರ್‌ನಲ್ಲಷ್ಟೇ ಅಂತ್ಯವಾದ ಐಪಿಎಲ್ ಟೂರ್ನಿ ಈಗ ಮತ್ತೊಂದು ಆವೃತ್ತಿಯನ್ನು ನಡೆಸಲು ಸಿದ್ಧತೆ ನಡೆಸುತ್ತಿದೆ. ಆದರೆ ಯಾವಾಗ ಈ ಬಾರಿಯ ಐಪಿಎಲ್ ಆರಂಭವಾಗಲಿದೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಈ ಬಗ್ಗೆ ಬಿಸಿಸಿಐ ಮೂಲಗಳಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.

14ನೇ ಆವೃತ್ತಿಯ ಐಪಿಎಲ್‌ನ ಆರಂಭದ ಏಪ್ರಿಲ್ ತಿಂಗಳಿನ 11ನೇ ತಾರೀಕಿನಿಂದ ಆರಂಭಿಸಲು ಎಲ್ಲ ಆ ರೀತಿಯ ಸಿದ್ಧತೆಗಳು ನಡೆಯುತ್ತಿದೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ದೊರೆತಿದೆ. ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಗಳು ಚರ್ಚಿಸಿ ಐಪಿಎಲ್‌ನ ತಾತ್ಕಾಲಿಕ ವೇಳಾಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದೆ.

ಬಿಸಿಸಿಐನ ಉನ್ನತ ಮಟ್ಟದ ಮಾಹಿತಿಯನ್ನು ಆಧರಿಸಿ ಇನ್‌ಸೈಡ್ ಸ್ಪೋರ್ಟ್ ವರದಿಯನ್ನು ಮಾಡಿದೆ. ಈ ವರದಿಯ ಪ್ರಕಾರ ಏಪ್ರಿಲ್ 11ರಿಂದ ಐಪಿಎಲ್ 14ನೇ ಆವೃತ್ತಿ ಆರಂಭವಾಗಲಿದ್ದು ಜೂನ್ 5 ಅಥವಾ 6 ರಂದು ಫೈನಲ್ ಪಂದ್ಯ ನಡೆಯಲಿದೆ ಎಂಬ ಮಾಹಿತಿ ನೀಡಿದೆ.

"ವೇಳಾಪಟ್ಟಿಯ ಅಂತಿಮ ನಿರ್ಧಾರವನ್ನು ಐಪಿಎಲ್ ಆಡಳಿತ ಮಂಡಳಿ ತೆಗೆದುಕೊಳ್ಳಲಿದೆ. ಆದರೆ 11ನೇ ಏಪ್ರಿಲ್ ಐಪಿಎಲ್ ಆರಂಭಕ್ಕೆ ತಾತ್ಕಾಲಿಕ ದಿನಾಂಕವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಮಾರ್ಚ್‌ನಲ್ಲಿ ಅಂತ್ಯವಾಗಲಿದ್ದು 11ನೇ ತಾರೀಕಿನಿಂದ ಆರಂಭವಾಗುವ ಐಪಿಎಲ್‌ಗೆ ಉತ್ತಮ ವಿರಾಮವನ್ನು ಪಡೆದುಕೊಳ್ಳಲಿದ್ದಾರೆ" ಎಂದು ಬಿಸಿಸಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್ ಭಾತದಲ್ಲೇ ನಡೆಯಲಿದ ಎಂಬುದನ್ನು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಹೇಳಿದ್ದಾರೆ. ಬಿಸಿಸಿಐ ಭಾರತದಲ್ಲಿ ಐಪಿಎಲ್ ನಡೆಸಲು ಒಪ್ಪಿಕೊಂಡಿದೆ. ಕೊರೊನಾ ಪರಿಸ್ಥಿತಿ ಸಾಕಷ್ಟು ಸುಧಾರಣೆಯಾಗಿರುವುದರಿಂದಾಗಿ ಮೀಸಲು ಕೇಂದ್ರಗಳ ಅಗತ್ಯವೂ ಇರಲಾರದು ಎಂದು ಬಿಸಿಸಿಐ ಭಾವಿಸಿದೆ ಎಂದಿದ್ದಾರೆ ಅರುಣ್ ಧುಮಲ್.

Story first published: Monday, February 1, 2021, 10:49 [IST]
Other articles published on Feb 1, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+