Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಡೆಲ್ಲಿ vs ಪಂಜಾಬ್: ಮಹತ್ವದ ಮೈಲಿಗಲ್ಲುಗಳ ಮೇಲೆ ಅಶ್ವಿನ್, ರಾಹುಲ್, ರಹಾನೆ ಚಿತ್ತ

IPL 2021: 3 milestones could be achieve in the match against delhi and Punjab

ಐಪಿಎಲ್‌ನ 11ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾನ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಮೊದಲ ಪಂದ್ಯವನ್ನು ರೋಚಕವಾಗಿ ಗೆದ್ದಿದ್ದ ಪಂಜಾಬ್ ಎರಡನೇ ಪಂದ್ಯದಲ್ಲಿ ಮುಗ್ಗರಿಸಿತ್ತು. ಮತ್ತೊಂದೆಡೆ ಡೆಲ್ಲಿ ಕೂಡ ಒಂದು ಗೆಲುವು ಹಾಗೂ ಒಂದು ಪಂದ್ಯದಲ್ಲಿ ಸೋಲಿನ ರುಚಿ ಕಂಡಿದೆ.

ಪಂಜಾಬ್ ಕಿಂಗ್ಸ್ ಪರವಾಗಿ ಕೆಲ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಇನ್ನಷ್ಟೇ ಬರಬೇಕಾಗಿದೆ. ಮೊದಲ ಪಂದ್ಯದಲ್ಲಿ 221 ರನ್‌ಗಳಿಸಿ ಬೃಹತ್ ಮೊತ್ತ ದಾಖಲಿಸಿದ್ದ ಪಂಜಾಬ್ ಎರಡನೇ ಪಂದ್ಯದಲ್ಲಿ ನೀರಸ ಬ್ಯಾಟಿಂಗ್‌ನಿಂದಾಗಿ 106 ರನ್‌ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಆಟಗಾರರ ಅಸ್ಥಿರ ಪ್ರದರ್ಶನದ ತಂಡಕ್ಕೆ ಚಿಂತೆಯಾಗಿದೆ. ಮತ್ತೊಂದೆಡೆ ಡೆಲ್ಲಿ ಕೂಡ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿದ್ದು ಎರಡನೇ ಪಂದ್ಯದ ಸೋಲು ತಂಡಕ್ಕೆ ಆಘಾತ ಮೂಡಿಸಿದೆ.

ಈ ಎರಡು ತಂಡಗಳ ನಡುವಿನ ಹಣಾಹಣಿ ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಜೊತೆಗೆ ಇಂದಿನ ಪಂದ್ಯದಲ್ಲಿ ಈ ತಂಡಗಳ ಮೂವರು ಆಟಗಾರರು ಮಹತ್ವದ ಮೈಲಿಗಲ್ಲು ತಲುಪುವ ಸಾಧ್ಯತೆಯಿದೆ.

ಆರ್ ಅಶ್ವಿನ್: ಟಿ20 ಕ್ರಿಕೆಟ್‌ನಲ್ಲಿ ಆರ್ ಅಶ್ವಿನ್ 250 ವಿಕೆಟ್ ಕಬಳಿಸಲು ಕೇವಲ 1 ವಿಕೆಟ್‌ನ ಅವಶ್ಯಕತೆಯಿದೆ. ಈ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಎನಿಸಲಿದ್ದಾರೆ ಆರ್ ಅಶ್ವಿನ್. ಪಿಯೂಷ್ ಚಾವ್ಲಾ(262 ವಿಕೆಟ್) ಹಾಗೂ ಅಮಿತ್ ಮಿಶ್ರಾ(256 ವಿಕೆಟ್) ಅಶ್ವಿನ್‌ಗಿಂತ ಮುಂದಿದ್ದಾರೆ.

ಕೆಎಲ್ ರಾಹುಲ್: ಚುಟುಕು ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿರುವ ಕೆಎಲ್ ರಾಹುಲ್ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 5000 ರನ್‌ಗಳಿಸುವ ಸನಿಹದಲ್ಲಿದ್ದಾರೆ. ಈ ಸಾಧನೆಗೆ ರಾಹುಲ್ ಇಂದಿನ ಪಂದ್ಯದಲ್ಲಿ 62 ರನ್‌ಗಳಿಸಬೇಕಿದೆ.

ಅಜಿಂಕ್ಯ ರಹಾನೆ: ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಆಟಗಾರ ಅಜಿಂಕ್ಯ ರಹಾನೆ ಐಪಿಎಲ್‌ನಲ್ಲಿ 4000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳುವ ಸಮೀಪದಲ್ಲಿದ್ದಾರೆ. ಇದನ್ನು ಸಾಧಿಸಲು ರಹಾನೆ ಇಂದು 59 ರನ್‌ಗಳಿಸಬೇಕಿದೆ.

Story first published: Sunday, April 18, 2021, 15:41 [IST]
Other articles published on Apr 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+