ಐಪಿಎಲ್ : ಈ ವರ್ಷ ಆಡಲಿರುವ ಅಧಿಕ ವಯಸ್ಸಿನ 5 ಆಟಗಾರರು
ಕಳೆದ ವರ್ಷ ಯುಎಇಯಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಈ ಬಾರಿ ಭಾರತದಲ್ಲಿಯೇ ನಡೆಯುತ್ತಿದ್ದು ಏಪ್ರಿಲ್ 9ನೇ ತಾರೀಕು ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಾಡಲಿವೆ.
ಐಪಿಎಲ್ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳಲು ಉತ್ತಮ ವೇದಿಕೆ ಎಂದೇ ಹೇಳಲಾಗುತ್ತದೆ. ಆದರೆ ವಯಸ್ಸಾದ ಹಿರಿಯ ಕ್ರಿಕೆಟಿಗರು ಯುವ ಕ್ರಿಕೆಟಿಗರು ನಾಚುವಂತೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ರದರ್ಶನ ತೋರುತ್ತಾರೆ. ಅಂತಹ ಹಲವಾರು ಹಿರಿಯ ಕ್ರಿಕೆಟಿಗರು ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದು ಈ ವರ್ಷ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲಿರುವ ಟಾಪ್ 5 ಹಿರಿಯ ಕ್ರಿಕೆಟಿಗರ ಮಾಹಿತಿ ಮುಂದೆ ಇದೆ ನೋಡಿ.

1. ಎಂ ಎಸ್ ಧೋನಿ
ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಐಪಿಎಲ್ ಆಡಲಿರುವ ಅಧಿಕ ವಯಸ್ಸಿನ ಕ್ರಿಕೆಟಿಗರಲ್ಲಿ ಒಬ್ಬರು. 39 ವರ್ಷ ವಯಸ್ಸಿನ ಧೋನಿ ತಮ್ಮ ವೃತ್ತಿಜೀವನದ 14ನೇ ಐಪಿಎಲ್ ಟೂರ್ನಿಯನ್ನು ಈ ಬಾರಿ ಆಡಲಿದ್ದಾರೆ. ಇಲ್ಲಿಯ ತನಕ 204 ಐಪಿಎಲ್ ಪಂದ್ಯಗಳನ್ನು ಆಡಿರುವ ಧೋನಿ 4632 ರನ್ ಗಳಿಸಿದ್ದಾರೆ.

2. ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್ ಈ ವರ್ಷ ಐಪಿಎಲ್ ಆಡಲಿರುವ ಅಧಿಕ ವಯಸ್ಸಿನ ಕ್ರಿಕೆಟಿಗರಲ್ಲಿ ಮತ್ತೊಬ್ಬರು. 40 ವರ್ಷ ವಯಸ್ಸಿನ ಹರ್ಭಜನ್ ಸಿಂಗ್ ಇದುವರೆಗೂ ಎಲ್ಲಾ ಐಪಿಎಲ್ ಆವೃತ್ತಿಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 160 ಪಂದ್ಯಗಳನ್ನಾಡಿರುವ ಹರ್ಭಜನ್ 150 ವಿಕೆಟ್‍ಗಳನ್ನು ಪಡೆದಿದ್ದಾರೆ. ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಹರ್ಭಜನ್ ಸಿಂಗ್ ಕಣಕ್ಕಿಳಿಯಲಿದ್ದಾರೆ.

3. ಕ್ರಿಸ್ ಗೇಲ್
ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆಡಲಿರುವ ಅಧಿಕ ವಯಸ್ಸಿನ ಕ್ರಿಕೆಟಿಗರಲ್ಲಿ ಒಬ್ಬರು. 41 ವರ್ಷದ ಕ್ರಿಸ್ ಗೇಲ್ 2009ರಿಂದ ಇದುವರೆಗೂ 132 ಐಪಿಎಲ್ ಪಂದ್ಯಗಳನ್ನಾಡಿದ್ದು 6 ಶತಕಗಳನ್ನೊಳಗೊಂಡ 4772 ರನ್ ಬಾರಿಸಿದ್ದಾರೆ. ಈ ಬಾರಿ ಕ್ರಿಸ್ ಗೇಲ್ ಪಂಜಾಬ್ ಕಿಂಗ್ಸ್ ಪರ ಬ್ಯಾಟ್ ಬೀಸಲಿದ್ದಾರೆ.

4. ಇಮ್ರಾನ್ ತಾಹಿರ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೊಬ್ಬ ಆಟಗಾರ ಇಮ್ರಾನ್ ತಾಹಿರ್ ಈ ಬಾರಿ ಐಪಿಎಲ್ ಟೂರ್ನಿ ಆಡುವ ಅಧಿಕ ವಯಸ್ಸಿನ ಕ್ರಿಕೆಟಿಗರಲ್ಲಿ ಒಬ್ಬರು. 58 ಐಪಿಎಲ್ ಪಂದ್ಯಗಳನ್ನು ಆಡಿರುವ 41 ವರ್ಷದ ಇಮ್ರಾನ್ ತಾಹಿರ್ 80 ವಿಕೆಟ್ ಪಡೆದಿದ್ದಾರೆ

5. ಕೇದಾರ್ ಜಾಧವ್
ಚೆನ್ನೈ ಸೂಪರ್ ಕಿಂಗ್ಸ್ ಬಿಟ್ಟುಕೊಟ್ಟ ಕೇದಾರ್ ಜಾಧವ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 2 ಕೋಟಿಗೆ ಖರೀದಿಸಿತು. 36 ವರ್ಷದ ಕೇದಾರ್ ಜಾಧವ್ 87 ಐಪಿಎಲ್ ಪಂದ್ಯಗಳನ್ನಾಡಿದ್ದು 1141 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications