Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಮುಂಬೈ vs ಕೋಲ್ಕತ್ತಾ, ಪಂದ್ಯದ ಹೈಲೈಟ್ಸ್

IPL 2021: 5th Match, Mumbai Indians vs Kolkata Knight Riders- highlights

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಏಪ್ರಿಲ್ 13ರ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ರೋಚಕ 10 ರನ್ ಜಯ ಗಳಿಸಿದೆ. ನಾಯಕ ರೋಹಿತ್ ಶರ್ಮಾ, ಶೂರ್ಯಕುಮಾರ್ ಯಾದವ್ ಮತ್ತು ರಾಹುಲ್ ಚಾಹಲ್ ಆಟದ ನೆರವಿನಿಂದ ಮುಂಬೈ ಟೂರ್ನಿಯ ಮೊದಲ ಗೆಲುವು ಕಂಡಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್‌ 20 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 152 ರನ್ ಗಳಿಸಿತ್ತು. ಕೋಲ್ಕತ್ತಾ 20 ಓವರ್‌ಗೆ 7 ವಿಕೆಟ್ ಕಳೆದು 142 ರನ್ ಬಾರಿಸಿ ಶರಣಾಗಿದೆ. ಪಂದ್ಯದ ಹೈಲೈಟ್ಸ್‌ ಇಲ್ಲಿದೆ.

ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ಹೈಲೈಟ್ಸ್‌ ಇಲ್ಲಿದೆ
* ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ 20 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 152 ರನ್ ಗಳಿಸಿತ್ತು.
* ಮುಂಬೈ ಪರ ರನ್ ಗಳಿಸಿದವರು: ರೋಹಿತ್ ಶರ್ಮಾ 43, ಸೂರ್ಯಕುಮಾರ್ ಯಾದವ್ 56 (36), ಹಾರ್ದಿಕ್ ಪಾಂಡ್ಯ 15, ಕೃನಾಲ್ ಪಾಂಡ್ಯ 15 ರನ್
* ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗೆ 7 ವಿಕೆಟ್ ಕಳೆದು 142 ರನ್ ಬಾರಿಸಿ ಶರಣಾಯಿತು.
* ಕೆಕೆಆರ್‌ನಿಂದ ರನ್ ಕೊಡುಗೆಯಿತ್ತವರು: ನಿತೀಶ್ ರಾಣಾ 57 (47), ಶುಬ್ಮನ್ ಗಿಲ್ 33, ರಾಹುಲ್ ತ್ರಿಪಾಠಿ 5, ಇಯಾನ್ ಮಾರ್ಗನ್ 7, ಶಕೀಬ್ ಅಲ್ ಹಸನ್ 9, ದಿನೇಶ್ ಕಾರ್ತಿಕ್ 8, ಆ್ಯಂಡ್ರೆ ರಸೆಲ್ 9 ರನ್
* ಕೋಲ್ಕತ್ತಾದ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಬೆಸ್ಟ್ ಬೌಲಿಂಗ್-15 ರನ್‌ಗೆ 5 ವಿಕೆಟ್ ಸಾಧನೆ
* ಮುಂಬೈ ಇಂಡಿಯನ್ಸ್‌ನಿಂದ ರಾಹುಲ್ ಚಾಹರ್ ಅದ್ಭುತ ಬೌಲಿಂಗ್-27 ರನ್‌ಗೆ 4 ವಿಕೆಟ್‌
* ಐಪಿಎಲ್‌ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಆಲ್ ಔಟ್ ಆಗಿದ್ದು ಬಲು ಅಪರೂಪ. ಈ ಪಂದ್ಯದೊಂದಿಗೆ ಒಟ್ಟು 4 ಸಾರಿ ಎಂಐ ಆಲ್ ಔಟ್ ಆಗಿದೆ.

Story first published: Wednesday, April 14, 2021, 10:35 [IST]
Other articles published on Apr 14, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+