'ಚೆನ್ನೈ ತಂಡದಲ್ಲಿ ನಿಮಗೆ ಸ್ಥಾನ ಯಾಕಿಲ್ಲ?' ; ಅಭಿಮಾನಿಯ ಪ್ರಶ್ನೆಗೆ ತಾಹೀರ್ ಹೇಳಿದ್ದಿಷ್ಟು

ಇಮ್ರಾನ್ ತಾಹಿರ್ 2018ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾಗಿದ್ದಾರೆ. 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಮ್ರಾನ್ ತಾಹಿರ್ 26 ವಿಕೆಟ್‍ಗಳನ್ನು ಪಡೆಯುವುದರ ಮೂಲಕ ಪರ್ಪಲ್ ಕ್ಯಾಪ್ ವಿಜೇತರಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ವಿಭಾಗದ ಪ್ರಮುಖರುಗಳಲ್ಲಿ ಒಬ್ಬರಾಗಿರುವ ಇಮ್ರಾನ್ ತಾಹಿರ್ ಅವರನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ಪಂದ್ಯಗಳನ್ನಾಡಿದ್ದರೂ ಸಹ ತಂಡಕ್ಕೆ ತೆಗೆದುಕೊಳ್ಳದಿರುವುದು ಹಲವಾರು ಕ್ರೀಡಾಭಿಮಾನಿಗಳಲ್ಲಿ ಗೊಂದಲವನ್ನು ಮೂಡಿಸಿದೆ.
ಇದೇ ರೀತಿ ಗೊಂದಲಕ್ಕೊಳಗಾದ ಅಭಿಮಾನಿಯೊಬ್ಬ ಇಮ್ರಾನ್ ತಾಹಿರ್ ಅವರಿಗೆ ಟ್ವಿಟರ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡುವ ಬಳಗದಲ್ಲಿ ನೀವು ಯಾವಾಗ ಸ್ಥಾನ ಪಡೆದುಕೊಳ್ಳುತ್ತೀರಾ ಎಂದು ಪ್ರಶ್ನೆಯನ್ನು ಹಾಕಿದ್ದಾನೆ. ಅಭಿಮಾನಿಯೊರ್ವನ ಈ ಪ್ರಶ್ನೆಗೆ ಇಮ್ರಾನ್ ತಾಹಿರ್ ಅವರು ಅದ್ಭುತವಾದ ಉತ್ತರವನ್ನು ನೀಡಿದ್ದಾರೆ.
'ಧನ್ಯವಾದಗಳು ಸರ್, ತಂಡದಲ್ಲಿ ಈಗಾಗಲೇ ಅದ್ಭುತ ಆಟಗಾರರಿದ್ದಾರೆ ಅವರು ಮೈದಾನದಲ್ಲಿ ಚೆನ್ನಾಗಿ ಆಡುತ್ತಿದ್ದು ತಂಡಕ್ಕೆ ಉಪಯೋಗವಾಗುತ್ತಿದೆ, ಹೀಗಾಗಿ ಅವರು ಅವರ ಆಟವನ್ನು ಮುಂದುವರಿಸಬೇಕು. ಒಂದು ವೇಳೆ ತಂಡಕ್ಕೆ ನನ್ನ ಅಗತ್ಯ ಬಿದ್ದಾಗ ನಾನು ಖಂಡಿತ ತಂಡದ ಆಡುವ ಬಳಗದಲ್ಲಿ ಭಾಗವಹಿಸುತ್ತೇನೆ ಮತ್ತು ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಪ್ರದರ್ಶನವನ್ನು ನೀಡುತ್ತೇನೆ' ಎಂದು ತಾಹಿರ್ ಟ್ವೀಟ್ ಮಾಡಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications