ಅಷ್ಟು ದೊಡ್ಡ ಮೊತ್ತಕ್ಕೆ ಕ್ರಿಸ್ ಮೋರೀಸ್ ಯೋಗ್ಯನಲ್ಲ: ಕೆವಿನ್ ಪೀಟರ್ಸನ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಐಪಿಎಲ್‌ನಲ್ಲಿ ಕ್ರಿಸ್ ಮೋರಿಸ್ ಪ್ರದರ್ಶನ ಹಾಗೂ ಅವರ ಮೌಲ್ಯದ ಬಗ್ಗೆ ಮಾತನಾಡಿದ್ದಾರೆ. 16.26 ಕೋಟಿ ರೂಪಾಯಿ ಮೌಲ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿರುವ ಕ್ರಿಸ್ ಮೋರಿಸ್ ಅಷ್ಟು ದೊಡ್ಡ ಮೊತ್ತಕ್ಕೆ ಅರ್ಹನಲ್ಲ ಎಂಬ ಮಾತನ್ನು ಆಡಿದ್ದಾರೆ.
"ನಾನು ಆಡುತ್ತಿರುವ ಮಾತುಗಳು ಕಠಿಣವಾಗಿರಬಹುದು. ಆದರೆ ಕ್ರಿಸ್ ಮೋರಿಸ್ ನಾನು ಪಡೆದದ್ದಕ್ಕಿಂತ ಸಾಕಷ್ಟು ಹೆಚ್ಚು ಮೊತ್ತವನ್ನು ಪಡೆದಿದ್ದಾರೆ. ಇದನ್ನು ಬಹಳ ಪ್ರಾಮಾಣಿಕವಾಗಿ ನಾನು ಹೇಳಲು ಬಯಸುತ್ತೇನೆ" ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಅಷ್ಟು ದೊಡ್ಡ ಮೊತ್ತಕ್ಕೆ ಅರ್ಹ ಎನಿಸುತ್ತಿಲ್ಲ
"ನನಗೆ ಆತ ಅಷ್ಟು ದೊಡ್ಡ ಮೊತ್ತಕ್ಕೆ ಅರ್ಹ ಎಂದು ಎನಿಸುತ್ತಿಲ್ಲ. ಆತನ ಮೇಲೆ ಈಗ ಸಾಕಷ್ಟು ಒತ್ತಡವಿದೆ" ಎಂದು ಕೆವಿನ್ ಪೀಟರ್ಸನ್ ಹೇಳಿಕೆಯನ್ನು ನೀಡಿದ್ದಾರೆ. ಸ್ಟಾರ್‌ಸ್ಟೋರ್ಟ್ಸ್ ಜೊತೆಗಿನ ನೇರಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೀಟರ್ಸನ್ ಈ ಮಾತುಗಳನ್ನು ಆಡಿದ್ದಾರೆ.

ನಾವೇ ಆತನಿಂದ ಹೆಚ್ಚು ನಿರೀಕ್ಷಿಸುತ್ತಿದ್ದೇವೆ
"ಆತ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಆಯ್ಕೆಯ ಆಟಗಾರನಲ್ಲ. ನನಗನಿಸುತ್ತದೆ ನಾವೇ ಆತನಿಂದ ಬಹಳಷ್ಟ ನಿರೀಕ್ಷಿಸುತ್ತಿದ್ದೇವೆ. ಆತನ ಬಗ್ಗೆ ಸಾಕಷ್ಟು ಮಾತನಾಡಿದ್ದೇವೆ. ನನ್ನ ಪ್ರಕಾರ ಆತ ಸ್ಥಿರವಾಗಿ ಎಸೆಯಬಲ್ಲ ಸಾಮರ್ಥ್ಯವನ್ನು ಹೊಂದಿದ ಆಟಗಾರ ಎನಿಸುತ್ತಿಲ್ಲ" ಎಂದು ಪೀಟರ್ಸನ್ ಕ್ರಿಸ್ ಮೋರಿಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಆತ ವಿಶೇಷವೇನೂ ಸಾಧಿಸಿಲ್ಲ
"ಆತ ಮಾಡಿರುವುದರಲ್ಲಿ ವಿಶೇಷವೇನಿಲ್ಲ. ಆತ ರನ್‌ಗಳಿಸಿದರೆ ಮುಂದಿನ ಎರಡು ಪಂದ್ಯಗಳಲ್ಲಿ ಸ್ಥಾನ ಪಡೆಯುತ್ತಾನೆ. ಬಳಿಕ ಮತ್ತೆ ಕೆಲ ಪಂದ್ಯಗಳಲ್ಲಿ ತಂಡದಿಂದ ಹೊರಗುಳಿಯುತ್ತಾನೆ. ಆದರೆ ನೀವು ನೋಡಲು ಬಯಸುವುದು ಇದನ್ನಲ್ಲ" ಎಂದು ಕೆವಿನ್ ಪೀಟರ್ಸನ್ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications