For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಕೊಹ್ಲಿ ಸೆಲೆಬ್ರೇಶನ್ ಅಣಕಿಸಿದ ಎಬಿಡಿ; ಮ್ಯಾಕ್ಸ್‌ವೆಲ್ ಕಾಲೆಳೆದ ಚಾಹಲ್: ವಿಡಿಯೋ

IPL 2021: AB de Villiers copies Virat Kohlis celebration,Chahal imitate Maxwells catch: video
AB De Villiers ಪಂದ್ಯ ಮುಗಿದ ನಂತರ Dressing roomನಲ್ಲಿ ಮಾಡಿದ್ದೇನು | Oneindia Kannada

ಯುಎಇ ಚರಣದ ಆರಂಭಿಕ ಎರಡು ಪಂದ್ಯಗಳನ್ನು ಕೂಡ ಹೀನಾಯವಾಗಿ ಸೋತಿದ್ದ ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಅದ್ಭುತ ರೀತಿಯಲ್ಲಿ ತಿರುಗಿಬಿದ್ದಿದೆ. ಸರ್ವಾಂಗೀಣ ಪ್ರದರ್ಶನ ನೀಡಿದ ಆರ್‌ಸಿಬಿ ಪಡೆ ಬೃಹತ್ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವು ಆರ್‌ಸಿಬಿಯನ್ನು ಪ್ಲೇಆಫ್‌ನ ಮತ್ತಷ್ಟು ಸನಿಹಕ್ಕೆ ತಲುಪಿಸಿದೆ. ಈ ಗೆಲುವಿನ ಬಳಿಕ ಸಹಜವಾಗಿಯೇ ಆರ್‌ಸಿಬಿ ಡ್ರೆಸ್ಸಿಂಗ್‌ರೂಮ್‌ನಲ್ಲಿ ಸಂಭ್ರಮ ಮನೆಮಾಡಿತ್ತು.

ಯುಎಇ ಚರಣದ ಆರಂಭದ ಎರಡು ಪಂದ್ಯಗಳನ್ನು ಎರಡು ತಂಡಗಳು ಕೂಡ ಸೋತಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಎರಡು ತಂಡಗಳಿಗೂ ಅನಿವಾರ್ಯವಾಗಿತ್ತು. ಇದರಲ್ಲಿ ಆರ್‌ಸಿಬಿ ಯಶಸ್ವಿಯಾಗಿದ್ದು ಮುಂಬೈ ಹ್ಯಾಟ್ರಿಕ್ ಸೋಲು ಕಂಡಿದೆ. ಈ ಗೆಲುವಿನ ಸಂಭ್ರದಲ್ಲಿ ಆರ್‌ಸಿಬಿ ಆಟಗಾರರು ಡ್ರೆಸ್ಸಿಂಗ್‌ ರೂಮ್‌ನಲ್ಲಿ ತಮಾಷೆಯಾಗಿ ಕಾಲ ಕಳೆದಿದ್ದಾರೆ. ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜುವೇಂದ್ರ ಚಾಹಲ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಈ ಕ್ಷಣದಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದಾರೆ.

ಗೆಲುವಿನ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನ ಕ್ಷಣಗಳ ವಿಡಿಯೋವನ್ನು ಆರ್‌ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದ ಆರಂಭದಲ್ಲಿ ಗೆಲುವು ಸಾಧಿಸಿ ಡ್ರೆಸ್ಸಿಂಗ್‌ರೂಮ್‌ಗೆ ತೆರಳುತ್ತಿರುವ ಆರ್‌ಸಿಬಿ ಆಟಗಾರರ ಪೈಕಿ ಎಬಿ ಡಿವಿಲಿಯರ್ಸ್ ಕ್ಯಾಮರಾ ಕಂಡು ಅದಕ್ಕೆ ಮ್ಯಾಚ್ ತುಂಬಾ ಬೋರಿಂಗ್ ಆಗಿತ್ತು ಅಂತ ತಮಾಷೆಯಾಗಿ ಹೇಳಿಕೊಂಡು ಸಾಗಿದ್ದಾರೆ.

ಇನ್ನು ಈ ವಿಎಇಯೋದ ಅಂತ್ಯದಲ್ಲಿ ವಿರಾಟ್ ಕೊಹ್ಲಿಯ ಸೆಲೆಬ್ರೇಶನ್ ಬಗ್ಗೆಯೂ ತಮಾಷೆಯಾಗಿ ಡಿವಲಿಯರ್ಸ್ ಕಾಲೆಳೆದಿದ್ದಾರೆ. ಅತ್ಯಂತ ಆಕ್ರೋಶದಿಂದ ಸಂಭ್ರಮಿಸುವ ವಿರಾಟ್ ಕೊಹ್ಲಿ ಬಳಿಕ ತನ್ನ ಆಟಗಾರರನ್ನು ಉದ್ದೇಶಿಸಿ "ತಾಳ್ಮೆಯಿಂದ ಇರಿ ಹುಡಿಗ್ರೇ, ಇದು ಮತ್ತೊಂದು ಪಂದ್ಯ ಅಷ್ಟೇ" ಅನ್ನೋದನ್ನು ಕೂಡ ಅಣಕಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಆರ್‌ಸಿಬಿ ತಮಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಯುಜುವೇಂದ್ರ ಚಾಹಲ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ತಮ್ಮ ಮೊದಲ ಜಂಟಿ ಐದು ವಿಕೆಟ್‌ಗಳ ಗೊಂಚಲನ್ನು ಡ್ರೆಸ್ಸಿಂಗ್‌ರೂಮ್‌ನಲ್ಲಿ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಈ ಪಂದ್ಯದಲ್ಲಿ ಚಾಹಲ್ 3 ವಿಕೆಟ್ ಪಡೆದಿದ್ದರೆ ಮ್ಯಾಕ್ಸ್‌ವೆಲ್ 2 ವಿಕೆಟ್ ಕಿತ್ತಿದ್ದರು.

ಇನ್ನು ಈ ವಿಡಿಯೋದಲ್ಲಿ ನಾಯಕ ವಿರಾಟ್ ಕೊಹ್ಲಿ ಪಂದ್ಯದ ಆರಂಭಕ್ಕೂ ಮುನ್ನ ಆಟಗಾರರನ್ನು ಹುರಿದುಂಬಿಸಿದ ರೀತಿ ಮತ್ತು ಗೆಲುವಿನ ನಂತರದ ಮಾತುಗಳನ್ನು ಸೇರಿಸಿಕೊಳ್ಳಲಾಗಿದೆ. ಸಹಜವಾಗಿಯೇ ಆರ್‌ಸಿಬಿ ತಂಡ ಈ ಗೆಲುವಿನಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಇನ್ನು ವಿರಾಟ್ ಪಡೆಗೆ ನಾಲ್ಕು ಪಂದ್ಯಗಳು ಬಾಕಿಯಿದೆ. ಇದರಲ್ಲಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಳ್ಳಲು ಆರ್‌ಸಿಬಿ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಬೇಕಿದೆ. ವಿರಾಟ್ ಕೊಹ್ಲಿ ಪಡೆಯ ಮುಂದಿನ ಪಂದ್ಯ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಬುಧವಾರ ನಡೆಯಲಿದೆ.

Story first published: Monday, September 27, 2021, 17:32 [IST]
Other articles published on Sep 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+