ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಎಂದಿನಂತೇ ಯುವಕ ಎನ್ನುತ್ತ ಮತ್ತೊಮ್ಮೆ ಘರ್ಜಿಸುವ ಭರವಸೆ ನೀಡಿದ ಎಬಿ ಡಿವಿಲಿಯರ್ಸ್

IPL 2021: AB de Villiers is going to play his 10th season for RCB in IPL

ರಾಯಲ್ ಚಾಲೆಂಜರ್ಸ್ ತಂಡದ ಉಪನಾಯಕ ಎಬಿ ಡಿವಲಿಯರ್ಸ್ ಐಪಿಎಲ್ 14ನೇ ಆವೃತ್ತಿಗೆ ಸಂಪೂರ್ಣ ಸಜ್ಜಾಗಿದ್ದಾರೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಾಡಲಿದ್ದು ಶುಕ್ರವಾರ ಈ ಪಂದ್ಯ ನಡೆಯಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದಿರುವ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಯರ್ಸ್ ಈ ಬಾರಿ ಹತ್ತನೇ ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ನೆಟ್‌ನಲ್ಲಿ ಬೆವರು ಹರಿಸಿರುವ ಡಿವಿಲಿಯರ್ಸ್ ಜಿಮ್‌ನಲ್ಲಿ ಕಸರತ್ತು ನಡೆಸಿ ಹೊಸ ಹುಮ್ಮಸ್ಸಿನಿಂದಿಗೆ ಸಜ್ಜಾಗಿದ್ದಾರೆ.

ಐಪಿಎಲ್ 2021: ರಿಷಭ್ ಪಂತ್ ನಾಯಕನಾಗಿ ಮುರಿಯಬಲ್ಲ 5 ದಾಖಲೆಗಳುಐಪಿಎಲ್ 2021: ರಿಷಭ್ ಪಂತ್ ನಾಯಕನಾಗಿ ಮುರಿಯಬಲ್ಲ 5 ದಾಖಲೆಗಳು

"ನಾನು ಕೆಲ ಉತ್ತಮ ಟ್ರೈನಿಂಗ್ ಸೆಶನ್‌ನಲ್ಲಿ ಭಾಗಿಯಾದೆ. ತುಂಬಾ ಫಿಟ್‌ನೆಸ್, ತುಂಬಾ ಜಿಮ್‌ವರ್ಕ್‌ಗಳು. ನಾನೀಗ ಸಿದ್ಧನಾಗಿದ್ದು ಎಂದಿನಂತೆಯೇ ಯುವಕನಾಗಿ ಮುನ್ನಡೆಯಲು ಚಿತ್ತ ನೆಟ್ಟಿದ್ದೇನೆ" ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

"ನಾವು ಕಳೆದ ವಾರ ರೂಮ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆದೆವು. ಅದಕ್ಕೂ ಮುನ್ನ ನಾವು ಪ್ರಯಾಣ ನಡೆಸಿದ್ದೇವೆ. ಇದರಿಂದ ಹೊರಬರುವುದು ಕಠಿಣವಾಗಿತ್ತು. ಈಗ ನೆಲಕ್ಕೆ ಕಾಲಿಟ್ಟು ಓಟಕ್ಕೆ ಆರಂಭಿಸಿದ್ದೇನೆ, ಅದಕ್ಕಾಗಿ ನನ್ನ ಅತ್ಯುತ್ತಮ ಪರಿಶ್ರಮವನ್ನು ನೀಡಿದ್ದೇನೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.

ಐಪಿಎಲ್ : 2020ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಆಟಗಾರರುಐಪಿಎಲ್ : 2020ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಆಟಗಾರರು

2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದ ಡಿವಿಲಿಯರ್ಸ್, ನವೆಂಬರ್‌ನಲ್ಲಿ ಐಪಿಎಲ್ 2020 ರ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳಲು ಮತ್ತು ಆರ್‌ಸಿಬಿಗೆ ಹೊಂದಾಣಿಕೆ ಮಾಡಿಕೊಳ್ಳಲು ಒಳಾಂಗಣ ಮತ್ತು ಹೊರಾಂಗಣ ತರಬೇತಿಯಲ್ಲಿ ಹೆಚ್ಚುವರಿ ಸಮಯವನ್ನು ನೀಡುತ್ತಿದ್ದಾರೆ

Story first published: Thursday, April 8, 2021, 18:31 [IST]
Other articles published on Apr 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X