ಐಪಿಎಲ್ 2021: ಹೈದರಾಬಾದ್ ತಂಡದ ದೌರ್ಬಲ್ಯ ಗುರುತಿಸಿದ್ದಾರೆ ಎಬಿ ಡಿವಿಲಿಯರ್ಸ್!

ಐಪಿಎಲ್ 2021ರ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸಿ ಭರ್ಜರಿಯಾಗಿ ಆರಂಭವನ್ನು ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ. ಆದರೆ ಈ ಪಂದ್ಯಕ್ಕೆ ಮುನ್ನ ಡೇವಿಡ್ ವಾರ್ನರ್ ಬಳಗದ ದೌರ್ಬಲ್ಯವನ್ನು ಆರ್‌ಸಿಬಿ ದಾಂಡಿಗ ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿದ್ದಾರೆ.
ಆರ್‌ಸಿಬಿ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಎರಡನೇ ಪಂದ್ಯದ ಆರಂಭಕ್ಕೂ ಮುನ್ನ ಈ ಬಗ್ಗೆ ಮಾತನಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್‌ನಲ್ಲಿ ಎದುರಿಸುತ್ತಿರುವ ದೌರ್ಬಲ್ಯವನ್ನು ಅವರು ಬಹಿರಂಗಪಡಿಸಿದ್ದಾರೆ. ಈ ಕಾರಣದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ ಡಿವಿಲಿಯರ್ಸ್.
"ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವುದನ್ನು ನಾನು ಆನಂದಿಸುತ್ತೇನೆ. ಈ ದಾಳಿಯನ್ನು ಎದುರಿಸುವುದು ಅತ್ಯುತ್ತಮ, ಸವಾಲಾಗಿದೆ. ತಮ್ಮ ಕೌಶಲ್ಯ ಹಾಗೂ ಬುದ್ಧಿವಂತಿಕೆಯಿಂದ ಅವರು ಸವಾಲೊಡ್ಡಲಿದ್ದಾರೆ. ಇಲ್ಲಿ ನಾವು ಕೆಲ ಉತ್ತಮ ಜೊತೆಗಾರಿಕೆಯನ್ನು ಕಾಣುವುದು ಮುಖ್ಯವಾಗುತ್ತದೆ. ಅವರ ವಿರುದ್ಧ ಒಂದು ಬಾರಿ ಮೇಲುಗೈ ಸಾಧಿಸಿದರೆ ಪಂದ್ಯದ ಮೇಲೆ ಪ್ರಾಬಲ್ಯವನ್ನು ಸಾಧಿಸಲಿದ್ದೇವೆ" ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಉಳಿದ ಕೆಲ ತಂಡಗಳಿಗೆ ಹೋಲಿಸಿದರೆ ಹೈದರಾಬಾದ್ ತಂಡ ಸದೃಢ ಬ್ಯಾಟಿಂಗ್ ಹೊಂದಿಲ್ಲ. ಅವರನ್ನು ನಾವು ಬೇಗನೆ ಹಿಡಿದಿಡಲು ಸಾಧ್ಯವಾದರೆ ಬಳಿಕ ಮತ್ತೆ ಪಂದ್ಯ ಅವರ ಹಿಡಿತಕ್ಕೆ ಸಿಗದಂತೆ ಮಾಡಬೇಕು. ಯಾಕೆಂದರೆ ಅಲ್ಲಿಯೇ ಅವರು ಅಪಾಯಕಾರಿಯಾಗಬಲ್ಲರು" ಎಂದು ಡಿವಿಲಿಯರ್ಸ್ ವಿವರಿಸಿದ್ದಾರೆ.
ಆರ್‌ಸಿಬಿ ತಂಡದ ಪ್ರಥಮ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ತಂಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದರು. ಎಬಿಡಿ ಆ ಪಂದ್ಯದಲ್ಲಿ 48 ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications