ಎಬಿ ಡಿವಿಲಿಯರ್ಸ್‌ಗೆ ಹೊಸ ಜವಾಬ್ಧಾರಿ ನೀಡಲು ಸುನಿಲ್ ಗವಾಸ್ಕರ್ ಸಲಹೆ

ಪ್ರತಿ ಬಾರಿಯಂತೆಯೇ ಈ ಬಾರಿಯೂ ಎಬಿ ಡಿವಲಿಯರ್ಸ್ ಆರ್‌ಸಿಬಿ ಪರವಾಗಿ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 75 ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚುಗೊಳಿಸಲು ಪ್ರಮುಖ ಕಾರಣರಾದರು. ಈ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
ಅಹ್ಮದಾಬಾದ್ ಅಂಗಳದಲ್ಲಿ ಎಬಿ ಡಿವಿಲಿಯರ್ಸ್ ನೀಡಿದ ಪ್ರದರ್ಶನವನ್ನು "ಅದ್ಭುತ ಹಾಗೂ ಮಂತ್ರಮುಗ್ಧಗೊಳಿಸುವ ಇನ್ನಿಂಗ್ಸ್" ಎಂದು ಗವಾಸ್ಕರ್ ಪ್ರಶಂಸಿಸಿದ್ದಾರೆ. ಇಂತಾ ಆಟ ವೀಕ್ಷಕರಿಗೆ ಅದ್ಭುತವಾದ ಅನುಭವವನ್ನು ನೀಡುತ್ತದೆ ಎಂದಿದ್ದಾರೆ ಗವಾಸ್ಕರ್.

ಯಾಕೆ ಇನ್ನಿಂಗ್ಸ್ ಆರಂಭಿಸಬಾರದು!
"ನೀವು ಎಬಿ ಡಿವಲಿಯರ್ಸ್ ಅವರನ್ನು ಇನ್ನಿಂಗ್ಸ್ ಆರಂಭಿಸಲು ಯಾಕೆ ಕಳುಹಿಸಬಾರದು. ಆತ 10-11ನೇ ಓವರ್‌ನಲ್ಲಿ ಬಂದು ಆಡುವುದಕ್ಕಿಂತ ಹೆಚ್ಚಾಗಿ ಆತನ ಆಟವನ್ನು ನೋಡಲು ಸಾಧ್ಯವಿದೆ. ಆತನಿಂದ ಸಂಪೂರ್ಣ 20 ಓವರ್‌ಗಳ ಪ್ರದರ್ಶನ ನೀಡಲು ಬಯಸುತ್ತೇನೆ. ಮಾಜಿ ಕ್ರಿಕೆಟಿಗನಾಗಿ ಎಬಿ ಡಿವಲಿಯರ್ಸ್ ಇಂತಾ ಫಾರ್ಮ್‌ನಲ್ಲಿದ್ದಾಗ ಯಾವಾಗಲೂ ಇದನ್ನೇ ಹೇಳುತ್ತಿರುತ್ತೇನೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಆರಂಭಿಕರಾಗಿ ಪಡಿಕ್ಕಲ್-ಕೊಹ್ಲಿ
ಆರ್‌ಸಿಡಿ ತಂಡದ ಆರಂಭಿಕರಾಗಿ ಈ ಬಾರಿಯ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಕಣಕ್ಕಿಳಿಯುತ್ತಿದ್ದಾರೆ. ಎಬಿ ಡಿವಲಿಯರ್ಸ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದು ಅಂತಿಮ ಓವರ್‌ಗಳಲ್ಲಿ ಹೆಚ್ಚು ರನ್‌ಗಳಿಸಲು ಕಾರಣರಾಗುತ್ತಿದ್ದಾರೆ.

ಎಬಿಡಿ ಅದ್ಭುತ ಆಟ
ಎಬಿ ಡಿವಲಿಯರ್ಸ್ ಈ ಐಪಿಎಲ್‌ನಲ್ಲಿ ಆಡುವ ಮುನ್ನ ಕಳೆದ ಐದು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರುಳಿದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಂತಿಮ ಓವರ್‌ನಲ್ಲಿ ಡಿವಿಲಿಯರ್ಸ್ ಮೂರು ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದರು. ಇದರಿಂದಾಗಿ ತಂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು.

ಕೊಹ್ಲಿಯಿಂದಲೂ ಮೆಚ್ಚುಗೆಯ ಮಾತು
ಎಬಿ ಡಿವಲಿಯರ್ಸ್ ಪ್ರದರ್ಶನದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಕೂಡ ಪಂದ್ಯದ ನಂತರ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಎಬಿ ಡಿವಿಲಿಯರ್ಸ್ ಆರ್‌ಸಿಬಿ ತಮಡದ ಆಸ್ತಿ ಎಂದು ಕೊಹ್ಲಿ ಬಣ್ಣಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದ ಆಟಗಾರ ಎಂಬುದನ್ನು ನಂಬ ಸಾಧ್ಯವಿಲ್ಲ ಎಂದಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications