Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021 : ವಾರ್ನರ್ ನಂತರ ಮತ್ತೊಬ್ಬ ನಾಯಕನ ತಲೆದಂಡವಾಗುತ್ತಾ?

 IPL 2021 : After David Warner, KKR captain Eoin Morgan can be next in firing line?

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ನಾಯಕತ್ವದಡಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 6 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಸೋಲುಂಡು ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿತ್ತು. ನಾಯಕನಾಗಿ ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣದಿಂದ ಅವರನ್ನು ನಾಯಕತ್ವದಿಂದ ವಜಾಗೊಳಿಸಿ ಕೇನ್ ವಿಲಿಯಮ್ಸನ್ ಅವರಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಯಿತು.

ಡೇವಿಡ್ ವಾರ್ನರ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿದ್ದು 193 ರನ್ ಗಳಿಸಿದ್ದು ಓರ್ವ ಆಟಗಾರನಾಗಿಯೂ ಸಹ ಉತ್ತಮ ಫಾರ್ಮ್‌ನಲ್ಲಿರಲಿಲ್ಲ. ಹೀಗಾಗಿ ಡೇವಿಡ್ ವಾರ್ನರ್ ವಿಫಲತೆ ಕಾರಣವನ್ನು ನೀಡಿ ಅವರನ್ನು ನಾಯಕತ್ವದಿಂದ ವಜಾಗೊಳಿಸಲಾಯಿತು. ಇದೀಗ ಡೇವಿಡ್ ವಾರ್ನರ್ ನಂತರ ಮತ್ತೊಬ್ಬ ಐಪಿಎಲ್ ನಾಯಕನನ್ನು ವಜಾಗೊಳಿಸುವುದರ ಕುರಿತು ಚರ್ಚೆಗಳು ಜೋರಾಗಿವೆ. ಹೌದು ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ನಾಯಕತ್ವದ ಮೇಲೆ ಈಗ ತೂಗುಗತ್ತಿ ನೇತಾಡುತ್ತಿದೆ.

David Warner ಅವರನ್ನು ಹೀಗೆ ನೋಡಿ ನೊಂದ ಅಭಿಮಾನಿಗಳು | Oneindia Kannada

ಇಯಾನ್ ಮಾರ್ಗನ್ ನೇತೃತ್ವದಲ್ಲಿ ಕೆಕೆಆರ್ ತಂಡ ಟೂರ್ನಿಯಲ್ಲಿ ಇದುವರೆಗೂ ಒಟ್ಟು 7 ಪಂದ್ಯಗಳನ್ನಾಡಿದ್ದು 5 ಪಂದ್ಯಗಳಲ್ಲಿ ಸೋತು ಕೇವಲ 2 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದೆ. ಅಷ್ಟೇ ಅಲ್ಲದೆ ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿರುವ ಇಯಾನ್ ಮಾರ್ಗನ್ ಗಳಿಸಿರುವುದು 92 ರನ್ ಮಾತ್ರ. ಹೀಗಾಗಿ ಇಯಾನ್ ಮಾರ್ಗನ್ ಓರ್ವ ಆಟಗಾರನಾಗಿಯೂ ಸಫಲರಾಗಿಲ್ಲ ಮತ್ತು ನಾಯಕನಾಗಿಯೂ ಕೂಡ ವಿಫಲತೆಯನ್ನು ಕಂಡಿರುವ ಕಾರಣದಿಂದಾಗಿ ವಾರ್ನರ್ ರೀತಿಯೇ ಮಾರ್ಗನ್ ಅವರನ್ನು ಕೂಡ ನಾಯಕತ್ವದಿಂದ ವಜಾ ಮಾಡಲಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಕಳೆದ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಕೂಡ ಕಳಪೆ ಪ್ರದರ್ಶನ ನೀಡಿದ ಕಾರಣ ಕೆಕೆಆರ್ ತಂಡದ ನಾಯಕತ್ವದಿಂದ ವಜಾಗೊಳಿಸಲಾಗಿತ್ತು.

Story first published: Monday, May 3, 2021, 15:31 [IST]
Other articles published on May 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+