ಅಮಿತ್ ಮಿಶ್ರಾ ಎದುರು ಕೆಟ್ಟ ದಾಖಲೆ ಬರೆದ ರೋಹಿತ್ ಶರ್ಮಾ!

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 20) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಕೆಟ್ಟ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ.

ಐಪಿಎಲ್‌ನಲ್ಲಿ 2019ರ ವಿಶ್ವಕಪ್‌ ಘಟನೆ ನೆನಪಿಸಿದ ಎಂಎಸ್ ಧೋನಿ

ಬುಧವಾರದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಕೆಟ್ ಡೆಲ್ಲಿ ಕ್ಯಾಪಿಟಲ್ಸ್‌ನ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾಗೆ ಲಭಿಸಿತು. 8.4ನೇ ಓವರ್‌ನಲ್ಲಿ ಮಿಶ್ರಾ ಎಸೆತಕ್ಕೆ ಬ್ಯಾಟ್ ಬೀಸಿ ಸ್ಟೀವ್ ಸ್ಮಿತ್‌ಗೆ ಕ್ಯಾಚ್‌ ನೀಡಿದ ರೋಹಿತ್ 44 (30 ಎಸೆತ) ರನ್‌ಗೆ ನಿರ್ಗಮಿಸಿದರು.

ಈ ಪಂದ್ಯದಲ್ಲಿ ಮಿಶ್ರಾಗೆ ವಿಕೆಟ್ ನೀಡುವುದರೊಂದಿಗೆ ಶರ್ಮಾ ಐಪಿಎಲ್‌ನಲ್ಲಿ ಒಟ್ಟಾರೆ 7 ಸಾರಿ ಮಿಶ್ರಾಗೆ ವಿಕೆಟ್ ಒಪ್ಪಿಸಿದಂತಾಗಿದೆ. ಐಪಿಎಲ್‌ನಲ್ಲಿ ಒಬ್ಬನೇ ಬೌಲರ್ ರೋಹಿತ್ ಅವರನ್ನು ಔಟ್ ಮಾಡಿದ್ದೆಂದರೆ ಅದು ಅಮಿತ್ ಮಿಶ್ರಾ. ಮಿಶ್ರಾಗೀಗ 38ರ ಹರೆಯ.

ವಿಚಿತ್ರ ಸಂಭ್ರಮಾಚರಣೆಯಿಂದ ನೆಟ್ಟಿಗರಿಗೆ ಆಹಾರವಾದ ಜಡ್ಡು: ವಿಡಿಯೋ

ಮುಂಬೈ ವಿರುದ್ಧದ ಪಂದ್ಯದಲ್ಲಿ ಮಿಶ್ರಾ ಒಟ್ಟಿಗೆ 4 ವಿಕೆಟ್‌ಗಳ ಸಾಧನೆ ತೋರಿದ್ದಾರೆ. ರೋಹಿತ್ ಶರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ವಿಕೆಟ್‌ಗಳು ಮಿಶ್ರಾಗೆ ಲಭಿಸಿತು. 152 ಐಪಿಎಲ್ ಪಂದ್ಯಗಳನ್ನಾಡಿರುವ ಮಿಶ್ರಾ ಈಗಾಗಲೇ 168 ವಿಕೆಟ್ ದಾಖಲೆ ಹೊಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 20, 2021, 21:13 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X