ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಅನ್ರಿಕ್ ನೋರ್ಕಿಯಾ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುವ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಕ್ ನೋರ್ಕಿಯಾ ಡೆಲ್ಲಿ ತಂಡ ಸೇರಿಕೊಂಡಿದ್ದಾರೆ. ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ನೋರ್ಕಿಯಾ ತಂಡದಿಂದ ಹೊರ ಬಿದ್ದಿದ್ದರು. ಈಗ ನೋರ್ಕಿಯಾ ಕೋವಿಡ್-19 ಫಲಿತಾಂಶ ನೆಗೆಟಿವ್ ಬಂದಿರುವುದರಿಂದ ಮತ್ತೆ ತಂಡ ಸೇರಿಕೊಂಡಿದ್ದಾರೆ.
27ರ ಹರೆಯದ ಬಲಗೈ ವೇಗಿ ಅನ್ರಿಕ್ ನೋರ್ಕಿಯಾ 16 ಐಪಿಎಲ್ ಪಂದ್ಯಗಳಲ್ಲಿ 22 ವಿಕೆಟ್ ದಾಖಲೆ ಹೊಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಈಗಾಗಲೇ ಎರಡು ಪಂದ್ಯಗಳು ನಡೆದಿದ್ದು ಎರಡೂ ಪಂದ್ಯಗಳಲ್ಲೂ ನೋರ್ಕಿಯಾ ಆಡಿರಲಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್ ಜಯ ಗಳಿಸಿತ್ತು. ಆದರೆ ಗುರುವಾರ (ಏಪ್ರಿಲ್ 15) ನಡೆದ ದ್ವಿತೀಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 3 ವಿಕೆಟ್ ಸೋಲನುಭವಿಸಿತ್ತು.
ರಿಷಭ್ ಪಂತ್ ನಾಯಕತ್ವ ವಹಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಎಂದಿನ ನಾಯಕ ಶ್ರೇಯಸ್ ಐಯ್ಯರ್, ಅಕ್ಷರ್ ಪಟೇಲ್ ಹೊರಗಿದ್ದಾರೆ. ಕೊರೊನಾ ಸೋಂಕಿಗೀಡಾಗಿದ್ದ ಅಕ್ಷರ್ ಬದಲು ತಾತ್ಕಾಲಿಕವಾಗಿ ಶಮ್ಸ್ ಮುಲಾನಿ ಅವರನ್ನು ಡೆಲ್ಲಿ ಕರೆತಂದಿದೆ. ಇನ್ನು ಗಾಯಕ್ಕೀಡಾಗಿರುವ ಶ್ರೇಯಸ್ ಬದಲಿಗೆ ಅನಿರುದ್ಧ್ ಜೋಶಿ ಅವರು ಡಿಸಿ ಸೇರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications