Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: ದೊಡ್ಡ ಮೊತ್ತ ಜೇಬಿಗಿಳಿಸಿದ ಅನ್‌ಕ್ಯಾಪ್ಡ್ ಆಟಗಾರರು

IPL 2021 Auction: List of Uncapped Players Who sold for Big Money

ಈ ಬಾರಿಯ ಐಪಿಎಲ್ ಹರಾಜಿನ ಬಗೆಗಿನ ಎಲ್ಲಾ ಕುತೂಹಲಗಳಿಗೆ ಸ್ಪಷ್ಟ ಉತ್ತರ ದೊರೆತಿದೆ. ಯಾವ ಆಟಗಾರರು ಯಾವ ತಂಡದ ಪಾಲಾಗಲಿದ್ದಾರೆ ಎಂಬ ಪ್ರಶ್ನೆಗೆ ಫೆಬ್ರವರಿ 18ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಪಷ್ಟ ಉತ್ತರ ದೊರೆತಿದೆ. ಈ ಹರಾಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರರು ಕೂಡ ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕೆಲ ಅಚ್ಚರಿಯ ಹರಾಜುಗಳು ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಆಟಗಾರರು ಬೃಹತ್ ಮೊತ್ತವನ್ನು ಜೇಬಿಗಿಳಿಸುವುದು ಸಾಮಾನ್ಯವೇ ಆಗಿದೆ. ಆದರೆ ಕೆಲ ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದೆಯೇ ಬೃಹತ್ ಮೊತ್ತವನ್ನು ಈ ಬಾರಿಯ ಹರಾಜಿನಲ್ಲಿ ಜೇಬಿಗಿಳಿಸಿದ್ದಾರೆ.

ಹಾಗಾದರೆ ಈ ರೀತಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅನ್‌ಕ್ಯಾಪ್‌ಡ್ ಆಟಗಾರರ ಪೈಕಿ ಅತ್ಯುತ್ತಮ ಮೊತ್ತವನ್ನು ಗಳಿಸಿದ ನಾಲ್ವರು ಆಟಗಾರರು ಯಾರು? ಈ ಬಗ್ಗೆ ವರದಿಯಿದೆ ಮುಂದೆ ಓದಿ..

9.25 ಕೋಟಿ ಡೀಲ್ ಪಡೆದ ಕೆ ಗೌತಮ್

9.25 ಕೋಟಿ ಡೀಲ್ ಪಡೆದ ಕೆ ಗೌತಮ್

ಈ ಪಟ್ಟಿಯಲ್ಲಿ ಬರುವ ಮೊದಲ ಹೆಸರು ಕೃಷ್ಣಪ್ಪ ಗೌತಮ್. ಐಪಿಎಲ್ ಇತಿಹಾಸದಲ್ಲಿ ಅನ್‌ಕ್ಯಾಪ್‌ಡ್ ಆಟಗಾರನೀರ್ವ ಪಡೆದ ಅತ್ಯಂತ ದೊಡ್ಡ ಮೊತ್ತ ಇದಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆ ಗೌತಮ್ ಅವರನ್ನು ಹಠ ಕಟ್ಟಿ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ 9.25 ಕೋಟಿ ಮೊತ್ತವನ್ನು ಕೆ ಗೌತಮ್ ಪಡೆದುಕೊಂಡಿದ್ದಾರೆ.

ಬೃಹತ್ ಮೊತ್ತ ಪಡೆದ ಶಾರೂಖ್ ಖಾನ್

ಬೃಹತ್ ಮೊತ್ತ ಪಡೆದ ಶಾರೂಖ್ ಖಾನ್

ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ಶಾರೂಖ್ ಖಾನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇಷ್ಟು ದೊಡ್ಡ ಮೊತ್ತವನ್ನು ಪಡೆಯಬಹುದು ಎಂಬುದನ್ನು ಸ್ವತಃ ಶಾರೂಖ್ ಖಾನ್ ನಿರೀಕ್ಷಿಸಿದ್ದರ ಎಂಬುದು ಕೂಡ ಅನುಮಾನ. ತಮಿಳುನಾಡು ಮೂಲದ ಶಾರೂಖ್ ಖಾನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 5.25 ಕೋಟಿ ನೀಡಿ ಖರೀದಿ ಮಾಡಿದೆ.

ಆಸಿಸ್ ಆಟಗಾರ ರಿಲೇ ಮೆರಿಡಿತ್

ಆಸಿಸ್ ಆಟಗಾರ ರಿಲೇ ಮೆರಿಡಿತ್

ಆಸ್ಟ್ರೇಲಿಯಾದ ಅನ್‌ಕ್ಯಾಪ್‌ಡ್ ಆಟಗಾರ ರಿಲೇ ಮೆರಿಡಿತ್ ಈ ಬಾರಿಯ ಐಪಿಎಲ್‌ನಲ್ಲಿ ದೊಡ್ಡ ಮೊತ್ತವನ್ನು ಪಡೆದ ಮತ್ತೋರ್ವ ಆಟಗಾರ. ಮೆರಿಡಿತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ತಂಡ 8 ಕೋಟಿ ರೂಪಾಯಿ ವ್ಯಯಿಸಿದೆ. 40 ಲಕ್ಷ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದರು ಈ ಆಟಗಾರ.

ಚೇತನ್ ಸಕರಿಯಾ- ರಾಜಸ್ಥಾನ್ ರಾಯಲ್ಸ್

ಚೇತನ್ ಸಕರಿಯಾ- ರಾಜಸ್ಥಾನ್ ರಾಯಲ್ಸ್

ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚಿದ ಸೌರಾಷ್ಟ್ರದ ವೇಗಿ ಚೇತನ್ ಸಕರಿಯಾ ಕೂಡ ಉತ್ತಮ ಮೊತ್ತಕ್ಕೆ ನಿಕರಿಯಾಗಿದ್ದಾರೆ. 20 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದ ಚೇತನ್ ಸಕರಿಯಾ 1.2 ಕೋಟಿ ರೂಪಾಯಿಗೆ ಹರಾಜಾಗಿದ್ದಾರೆ. 22ರ ಹರೆಯದ ಸಕರಿಯಾ 16 ಪಂದ್ಯಗಳಲ್ಲಿ 28 ವಿಕೆಟ್ ಕಬಳಿಸಿದ್ದಾರೆ.

Story first published: Friday, February 19, 2021, 14:07 [IST]
Other articles published on Feb 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+