ಐಪಿಎಲ್ ಹರಾಜು 2021: ಹರಾಜು ಸಮಯ, ಫ್ರಾಂಚೈಸಿಗಳ ಪರ್ಸ್ ಮೊತ್ತ, ನೇರಪ್ರಸಾರದ ಮಾಹಿತಿ

ಐಪಿಎಲ್ 14ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಅಂತ್ಯದ ಬಳಿಕ ಚೆನ್ನೈನಲ್ಲಿಯೇ ಈ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.
ಬಿಸಿಸಿಐ ಗುರುವಾರ 292 ಆಟಗಾರರ ಅಂತಮ ಪಟ್ಟಿಯನ್ನು ಬಿಡುಗಡೆಮಾಡಿದೆ. ಹರಾಜು ಪ್ರಕ್ರಿಯೆಯಲ್ಲಿ ಪಾಳ್ಗೊಂಡ ಆಟಗಾರರ ಪೈಕಿ ತಾವು ಪಡೆಯಲುದ್ದೇಶಿಸಿರುವ ಆಟಗಾರರ ಪರಿಷ್ಕೃತ ಪಟ್ಟಿಯನ್ನು ಎಲ್ಲಾ 8 ಫ್ರಾಂಚೈಸಿಗಳು ಬಿಸಿಸಿಐಗೆ ನೀಡಿದ ನಂತರ ಈ ಅಂತಿಮ ಆಟಗಾರರ ಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿ ಬಿಡುಗಡೆ ಮಾಡಿದೆ.
ಹಾಗಾದರೆ ಈ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ, ಸಮಯ, ನೇರ ಪ್ರಸಾರ, ತಂಡಗಳಲ್ಲಿ ಉಳಿದುಕೊಂಡಿರುವ ಹರಾಜು ಮೊತ್ತದ ಬಗ್ಗೆ ಸಂಪೂರ್ಣ ಮಾಹಿತಿ ನಿಮಗಾಗಿ

ಹರಾಜು ಪ್ರಕ್ರಿಯೆ ಯಾವಾಗ ಮತ್ತು ಎಲ್ಲಿ
ಈ ಬಾರಿಯ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಚೆನ್ನೈನ ಎಂಎ ಚದಂಬರಂ ಸ್ಟೇಡಿಯಮ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯ ಮುಕ್ತಾಯದ ಒಂದು ದಿನದ ನಂತರ ಆರಂಭವಾಗಲಿದೆ. ಈ ಬಾರಿಯ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿಯೇ ನಡೆಯಲಿದೆ.

ಹರಾಜು ಪ್ರಕ್ರಿಯೆ ನಡೆಯುವ ಸಮಯ
ಈ ಬಾರಿಯ ಹರಾಜು ಪ್ರಕ್ರಿಯೆ ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿದೆ.

ನೇರಪ್ರಸಾರದ ಮಾಹಿತಿ
ಈ ಹರಾಜು ಪ್ರಕ್ರಿಯೆಯ ನೇರ ಪ್ರಸಾರವನ್ನು ಈ ಬಾರಿಯೂ ವೀಕ್ಷಕರು ಮನೆಯಲ್ಲಿ ಕುಳಿತು ವೀಕ್ಷಿಸಬಹುದು. ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಈ ಹರಾಜು ಪ್ರಕ್ರಿಯೆಯ ನೆರಪ್ರಸಾರವನ್ನು ಮಾಡಲಿದೆ. ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಹಾಗೂ ಜಿಯೋ ಟಿವಿಯಲ್ಲಿ ಇದರ ನೇರಪ್ರಸಾರವಿರಲಿದೆ.

ಫ್ರಾಂಚೈಸಿಗಳ ಪರ್ಸ್ ಮೊತ್ತ
ಚೆನ್ನೈ ಸೂಪರ್ ಕಿಂಗ್ಸ್: 22.9 ಕೋಟಿ ರೂ
ಡೆಲ್ಲಿ ಕ್ಯಾಪಿಟಲ್ಸ್: 12.9 ಕೋಟಿ ರೂ
ಕಿಂಗ್ಸ್ ಇಲೆವೆನ್ ಪಂಜಾಬ್: 31.8 ಕೋಟಿ ರೂ
ಕೋಲ್ಕತಾ ನೈಟ್ ರೈಡರ್ಸ್: 10.75 ಕೋಟಿ ರೂ
ಮುಂಬೈ ಇಂಡಿಯನ್ಸ್: 15.35 ಕೋಟಿ ರೂ
ರಾಜಸ್ಥಾನ್ ರಾಯಲ್ಸ್: 34.85 ಕೋಟಿ ರೂ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 35.9 ಕೋಟಿ ರೂ
ಸನ್‌ರೈಸರ್ಸ್ ಹೈದರಾಬಾದ್: 10.75 ಕೋಟಿ ರೂ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications