ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಈ ಯುವ ಬೌಲರ್ ತೆಗೆದಿರುವ 6 ವಿಕೆಟ್‍ಗಳು ಸಾಮಾನ್ಯದ್ದಲ್ಲ!
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಸ್ಟಾರ್ ಬೌಲರ್‌ಗಳಿಗಿಂತ ಹೆಚ್ಚಾಗಿ ಯುವ ಬೌಲರ್‌ಗಳೇ ಉತ್ತಮ ಪ್ರದರ್ಶನವನ್ನು ನೀಡಿ ಮಿಂಚುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಮುಂಬೈ ಇಂಡಿಯನ್ಸ್ ತಂಡದ ರಾಹುಲ್ ಚಹರ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಮಾತ್ರವಲ್ಲದೆ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಟಾಪ್ 10 ಪಟ್ಟಿಯಲ್ಲಿ ಯುವ ಬೌಲರ್‌ಗಳಾದ ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ, ವರುಣ್ ಚಕ್ರವರ್ತಿ, ಅರ್ಶ್‌ದೀಪ್ ಸಿಂಗ್ ಹಾಗೂ ಚೇತನ್ ಸಕಾರಿಯಾ ಮಿಂಚುತ್ತಿದ್ದಾರೆ.
ಈ ಯುವ ಬೌಲರ್‌ಗಳ ಪೈಕಿ ಅವೇಶ್ ಖಾನ್ ಸದ್ಯ ತಮ್ಮ ವಿಶಿಷ್ಟ ಹಾಗೂ ಉತ್ತಮ ಬೌಲಿಂಗ್ ದಾಳಿಯಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಇದಕ್ಕೆ ಕಾರಣ ಅವೇಶ್ ಖಾನ್ ಅವರು ಪಡೆದಿರುವ ಆ 6 ವಿಕೆಟ್‍ಗಳು. ಹೌದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 6 ಇನ್ನಿಂಗ್ಸ್ ಆಡಿದ್ದು 12 ವಿಕೆಟ್‍ಗಳನ್ನು ಪಡೆದಿದ್ದಾರೆ. ಅವೇಶ್ ಖಾನ್ ಪಡೆದಿರುವ 12 ವಿಕೆಟ್‍ಗಳ ಪೈಕಿ 6 ಡೇಂಜರಸ್ ಬ್ಯಾಟ್ಸ್‌ಮನ್‌ಗಳ ಕೂಡ ಸೇರಿವೆ. ವಿಶೇಷವೆಂದರೆ ಅವೇಶ್ ಖಾನ್ ಆ 6 ಡೇಂಜರಸ್ ಬ್ಯಾಟ್ಸ್‌ಮನ್‌ಗಳ ವಿಕೆಟ್‍ಗಳನ್ನು ತೆಗೆಯಲು ಹೆಚ್ಚು ಸಮಯ ತೆಗೆದುಕೊಳ್ಳದೆ ಇರುವುದು. ಹೌದು ಆ 6 ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ಕಡಿಮೆ ಎಸೆತಗಳಲ್ಲಿಯೇ ಔಟ್ ಮಾಡುವ ಮೂಲಕ ಅವೇಶ್ ಖಾನ್ ಸದ್ಯ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಅವೇಶ್ ಖಾನ್ ಪಡೆದಿರುವ ಆ 6 ಬ್ಯಾಟ್ಸ್‌ಮನ್‌ಗಳ ವಿಕೆಟ್ ವಿವರ ಹೀಗಿದೆ :

1. ಫಾಫ್ ಡು ಪ್ಲೆಸಿಸ್ :
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮಿಂಚುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡೇಂಜರಸ್ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರನ್ನು ತಾನು ಎಸೆದ ಮೊದಲನೇ ಎಸೆತದಲ್ಲಿಯೇ ಅವೇಶ್ ಖಾನ್ ಔಟ್ ಮಾಡಿದ್ದಾರೆ.

2. ಎಂಎಸ್ ಧೋನಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ತಾವು ಎದುರಿಸಿದ ಅವೇಶ್ ಖಾನ್‌ರ ಎರಡನೇ ಎಸೆತಕ್ಕೇ ವಿಕೆಟ್ ಒಪ್ಪಿಸಿದ್ದಾರೆ.

3. ಜಾನಿ ಬೈರ್‌ಸ್ಟೋವ್
ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಜಾನಿ ಬೈರ್‌ಸ್ಟೋವ್ ಕೂಡ ತಾವು ಎದುರಿಸಿದ ಅವೇಶ್ ಖಾನ್‌ರ ಎರಡನೇ ಎಸೆತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದರು.

4. ನಿಕೋಲಸ್ ಪೂರನ್
ಪಂಜಾಬ್ ಕಿಂಗ್ಸ್ ತಂಡದ ನಿಕೋಲಸ್ ಪೂರನ್ ಸಹ ಅವೇಶ್ ಖಾನ್‌ರ ಎರಡನೇ ಎಸೆತದಲ್ಲಿಯೇ ಔಟ್ ಆಗಿದ್ದರು.

5. ಸೂರ್ಯಕುಮಾರ್ ಯಾದವ್
ಮುಂಬೈ ಇಂಡಿಯನ್ಸ್ ತಂಡದ ಹೊಡಿಬಡಿ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಅವೇಶ್ ಖಾನ್ ಎಸೆದ ಎರಡನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು.

6. ವಿರಾಟ್ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವೇಶ್ ಖಾನ್ ಎಸೆದ ಆರನೇ ಎಸೆತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.
ಹೀಗೆ ತಾವು ಎಸೆದ ಕೆಲವೇ ಎಸೆತಗಳಲ್ಲಿ ಡೇಂಜರಸ್ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದು ಅವೇಶ್ ಖಾನ್ ಮಿಂಚುತ್ತಿದ್ದು , ಪ್ರಸ್ತುತ ಐಪಿಎಲ್ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ವಿಕೆಟ್‍ಗಳನ್ನು ಪಡೆಯುವ ಸಾಧ್ಯತೆಗಳು ಹೆಚ್ಚಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications