ಐಪಿಎಲ್ 2021: ರಣಜಿಗೆ ಮುನ್ನ ಮುಷ್ತಾಕ್ ಅಲಿ ನಡೆಸುವ ಸಾಧ್ಯತೆ

ನವದೆಹಲಿ: ಕೊರೊನಾವೈರಸ್ ಶುರುವಾದ ಬಳಿಕ ಭಾರತದಲ್ಲಿ ಮೊದಲ ಕ್ರಿಕೆಟ್ ಟೂರ್ನಿ ಆಯೋಜಿಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಯೋಚಿಸುತ್ತಿದೆ. ಐಪಿಎಲ್ 2021ಕ್ಕೆ ಆಟಗಾರರ ಹರಾಜು ಗಮನದಲ್ಲಿಟ್ಟುಕೊಂಡಿರುವ ಬಿಸಿಸಿಐ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿ ನಡೆಸುವ ಸಾಧ್ಯತೆಯಿದೆ.
ಕೊರೊನಾ ಬಳಿಕ ಚೊಚ್ಚಲ ದೇಸಿ ಟೂರ್ನಿಯಾಗಿ ರಣಜಿ ನಡೆಸಲು ಬಿಸಿಸಿಐ ಮೊದಲು ಯೋಚಿಸಿತ್ತು. ಆದರೆ 14ನೇ ಆವೃತ್ತಿಯ ಐಪಿಎಲ್‌ಗೆ ಆಟಗಾರರನ್ನು ಆರಿಸಲು ಟಿ20 ಟೂರ್ನಿ ಸಹಾಯಕವಾಗಿರುವುದರಿಂದ ರಣಜಿಗೂ ಮುನ್ನ ಮುಷ್ತಾಕ್ ಅಲಿ ಟಿ20 ನಡೆಸಲು ಭಾರತೀಯ ಕ್ರಿಕೆಟ್ ಬೋರ್ಡ್ ಮುಂದಾಗುತ್ತಿದೆ ಎಂದು ತಿಳಿದು ಬಂದಿದೆ.
ಮುಷ್ತಾಕ್ ಅಲಿ ಟ್ರೋಫಿ ಸಲುವಾಗಿ ಬಿಸಿಸಿಐಯು ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ಗಳಿಗೆ ಸಂದೇಶ ಕಳುಹಿಸಿದೆ. ಸಂದೇಶದಲ್ಲಿ, ಅಲ್ಲಿ ಎಲ್ಲೆಲ್ಲಿ ಹಲವಾರು ಕ್ರಿಕೆಟ್ ಮೈದಾನಗಳಿವೆ ಮತ್ತು ಕನಿಷ್ಠ 3 ತಂಡಗಳಿಗೆ ಬಯೋ ಬಬಲ್ ರಚಿಸಲು ಫೈವ್ ಸ್ಟಾರ್ ಹೋಟೆಲ್‌ಗಳು ಎಲ್ಲಿವೆ ಎಂದು ಗುರುತು ಮಾಡಲು ಹೇಳಿದೆ ಎನ್ನಲಾಗಿದೆ.
'ಕನಿಷ್ಠ ಎರಡರಿಂದ ಮೂರು ತಂಡಗಳು ಭಾರತೀಯ ಪ್ರತಿಭಾನ್ವಿತರ ವಿಚಾರದಲ್ಲಿ ದುರ್ಬಲವಾಗಿರುವುದರಿಂದ ಐಪಿಎಲ್ ಆಟಗಾರರ ಹರಾಜು ಪ್ರಾಮುಖ್ಯವೆನಿಸಿದೆ. ಪ್ರತಿಭೆಗಳನ್ನು ಹುಡುಕಲು ಐಪಿಎಲ್ ಖಂಡಿತಾ ಅನಿವಾರ್ಯವೆನಿಸಿದೆ. ಹೀಗಾಗಿ ರಣಜಿಗೂ ಮುನ್ನ ಮುಷ್ತಾಕ್ ಅಲಿ ಟ್ರೋಫಿ ನಡೆಯಲಿದೆ,' ಎಂದು ಪಿಟಿಐಗೆ ಮೂಲವೊಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications